ಬಸವಸಾಗರ ಜಲಾಶಯದ ಕ್ರಸ್ಟ್ ಗೇಟ್‌ಗಳಿಗೆ ಶನಿವಾರ ಪೂಜೆ ಸಲ್ಲಿಸಿ ಕೃಷ್ಣಾ ನದಿಗೆ ನೀರು ಬಿಡಲಾಯಿತು. ಮುಖ್ಯ ಇಂಜಿನಿಯರ್ ಜಿ.ಜಿ.ಪವಾರ್, ಎಸ್.ಸಿ.ರಮೇಶ ರಾಠೋಡ, ಇಇ ಹಣಮಂತ ಕೊಣ್ಣೂರು, ಎಇಇ ರಾಘವೇಂದ್ರ ಕುಲಕರ್ಣಿ, ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯ, ಬಾಲಚಂದ್ರ ಚವ್ಹಾಣ್, ಮಲ್ಲಿಕಾರ್ಜುನ, ಮಹೇಶ್ವರಿ ಪತ್ತಾರ ಇತರರಿದ್ದರು. 
ರಾಜ್ಯ

ಅನ್ನದಾತರ ಚಿತ್ತ ಈಗ ಐಸಿಸಿ ಸಭೆಯತ್ತ

ಹುಣಸಗಿ : ಕೃಷ್ಣಾ ನದಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಒಳಹರಿವು ಹೆಚ್ಚಾಗಿ ನಾರಾಯಣಪುರದ ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಶನಿವಾರ ಕ್ರಸ್ಟ್ ಗೇಟ್‌ಗಳಿಗೆ ಪೂಜೆ ಸಲ್ಲಿಸಿ ೮ ಗೇಟ್‌ಗಳ ಮೂಲಕ ೧೮,೫೬೦ ಕ್ಯೂಸೆಕ್ ನೀರು ಕೃಷ್ಣೆಗೆ ಹರಿಬಿಡಲಾಯಿತು.
ಯಾದಗಿರಿ ಸೇರಿ ಇತರ ಜಿಲ್ಲೆಗಳಲ್ಲಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದರು. ಆದರೀಗ ಬಸವಸಾಗರ ಭರ್ತಿಯಾಗಿದ್ದರಿಂದ ಕಾಲುವೆಗೆ ನೀರು ಹರಿಸುವ ದಿನಾಂಕ ನಿಗದಿ ಕುರಿತು ರೈತರ ಚಿತ್ತ ಐಸಿಸಿ ಸಭೆಯತ್ತ ನೆಟ್ಟಿದೆ. ಆಲಮಟ್ಟಿಯಿಂದ ೩೫ ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಬಸವಸಾಗರದಲ್ಲಿ ಶನಿವಾರ ೩೧.೭೭ ಟಿಎಂಸಿ ಮತ್ತು ಆಲಮಟ್ಟಿ ಜಲಾಶಯದಲ್ಲಿ ೧೦೮.೬೬ ಟಿಎಂಸಿ ನೀರಿದೆ. ಸದ್ಯ ಆಲಮಟ್ಟಿಗೆ ೬೦ ಸಾವಿರ ಕ್ಯೂಸೆಕ್ ಒಳಹರಿವಿದೆ ಎಂದು ನೀರಾವರಿ ಅಽಕಾರಿಗಳು ತಿಳಿಸಿದ್ದಾರೆ.
ಹುಣಸಗಿ, ಶಹಾಪುರ, ಸುರಪುರ ಸೇರಿ ಅಚ್ಚುಕಟ್ಟು ಪ್ರದೇಶದ ರೈತರು ಬಿತ್ತನೆ ಮತ್ತು ಬೆಳೆ ನಿರ್ವಹಣೆಗೆ ಕಾಲುವೆ ನೀರು ಅವಲಂಬಿಸಿದ್ದಾರೆ. ಈಗಾಗಲೇ ಹಲವೆಡೆ ಹೊಲ ಹದಗೊಳಿಸಿದ್ದು, ಕಾಲುವೆಗೆ ನೀರು ಹರಿಸಿದರೆ ಕೃಷಿ ಚಟುವಟಿಕೆ ವೇಗ ಪಡೆದುಕೊಳ್ಳಲಿದೆ. ಜಲಾಶಯ ಭರ್ತಿಯಾಗಿದ್ದರಿಂದ ಶೀಘ್ರ ಐಸಿಸಿ ಸಭೆ ಕರೆದು ಸಂಕಷ್ಟದಲ್ಲಿರುವ ರೈತರಿಗಾಗಿ ಕಾಲುವೆಗೆ ನೀರು ಹರಿಸುವ ದಿನಾಂಕ ಪ್ರಕಟಿಸಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸಿವೆ.
"

ಒಳಹರಿವು ಹೆಚ್ಚಳದಿಂದ ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿದ್ದು, ಅನ್ನದಾತರ ಹಿತದೃಷ್ಟಿಯಿಂದ ಸರ್ಕಾರ ತಡಮಾಡದೆ ಕಾಲುವೆಗೆ ನೀರು ಹರಿಸಬೇಕು.| ನರಸಿಂಹ ನಾಯಕಮಾಜಿ ಸಚಿವ


"

ಜಲಾಶಯಕ್ಕೆ ಹರಿದು ಬರುವ ನೀರಿನಲ್ಲಿ ಏರಿಳತವಿದ್ದು, ಮುಂಗಾರು ದುರ್ಬಲಗೊಂಡಿದೆ. ಕೃಷಿ ಚಟುವಟಿಕೆಗಾಗಿ ತಕ್ಷಣ ಐಸಿಸಿ ಸಭೆ ನಡೆಸಿ ಕಾಲುವೆಗೆ ನೀರು ಹರಿಸಬೇಕು.| ರಾಘವೇಂದ್ರ ಕಾಮನಟಗಿನೀರಾವರಿ ತಜ್ಞ