ರೈತ ಸಂಘದ ಹನೂರು ತಾಲೂಕು ಘಟಕ ಹಾಗೂ ಹಸಿರು ಸೇನೆಗೆ ಅಜ್ಜೀಪುರದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ರಾಜಣ್ಣ, ಶಾಂತಿ, ಪ್ರದೀಪ್, ಮುತ್ತುಲಕ್ಷ್ಮೀ ಇತರರಿದ್ದರು.
- ಅಜ್ಜೀಪುರ ಗ್ರಾಮ
- ಗೌರವಾಧ್ಯಕ್ಷರಾಗಿ ಚಿನ್ನಸ್ವಾಮಿ, ಅಧ್ಯಕ್ಷರಾಗಿ ರಾಜಣ್ಣ
ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ಬುಧವಾರ ರೈತ ಸಂಘದ ತಾಲೂಕು ಘಟಕ ಹಾಗೂ ಹಸಿರು ಸೇನೆ (ಮೂಲ ಸಿದ್ಧಾಂತ) ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು.
ಗೌರವಾಧ್ಯಕ್ಷರಾಗಿ ಚಿನ್ನಸ್ವಾಮಿ, ಅಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ರತ್ನವೇಲು, ರವಿ, ಈರಣ್ಣ, ಮಹದೇವಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸೂರ್ಯ, ಸಹ ಕಾರ್ಯದರ್ಶಿಯಾಗಿ ವೆಂಕಟೇಶ್, ಖಜಾಂಚಿಯಾಗಿ ವಿಜಯ್, ಸಂಘಟನಾ ಕಾರ್ಯದರ್ಶಿಗಳಾಗಿ ಶಿವಮೂರ್ತಿ, ವರದರಾಜು, ಜಡೇಸ್ವಾಮಿ, ರಾಮೇಗೌಡ, ಸಹ ಕಾರ್ಯದರ್ಶಿಗಳಾಗಿ ಶಿವಣ್ಣ, ನಾಗರಾಜು ಅವರನ್ನು ನೇಮಕ ಮಾಡಲಾಯಿತು. ಅಂತೆಯೇ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿ ಪ್ರಿಯಾ, ಅಧ್ಯಕ್ಷೆಯಾಗಿ ಮುತ್ತುಲಕ್ಷ್ಮೀ, ಉಪಾಧ್ಯಕ್ಷರಾಗಿ ಶಾಂತಿ, ಸುಧಾಮಣಿ, ಮೈನಾ, ಪ್ರಧಾನ ಕಾರ್ಯದರ್ಶಿಯಾಗಿ ಬೇಬಿ, ಸಂಘಟನಾ ಕಾರ್ಯದರ್ಶಿಗಳಾಗಿ ಕಲಾವತಿ, ಶಾಂತಿ ಅವರನ್ನು ನೇಮಕ ಮಾಡಲಾಯಿತು.
ಯುವ ಘಟಕದ ಅಧ್ಯಕ್ಷರಾಗಿ ಪ್ರದೀಪ್, ಉಪಾಧ್ಯಕ್ಷರಾಗಿ ತಂಗರಾಜು, ಗೋವಿಂದರಾಜು, ಪ್ರಧಾನ ಕಾರ್ಯದರ್ಶಿಯಾಗಿ ಚಂದನ್ ಹಾಗೂಸಂಘಟನಾ ಕಾರ್ಯದರ್ಶಿಯಾಗಿ ರಿಜ್ವಾನ್ ಅವರನ್ನು ಆಯ್ಕೆ ಮಾಡಲಾಯಿತು.
ಹಿರಿಯ ರೈತ ಮುಖಂಡರಾದ ಲೋಕೇಶ್‌ಗೌಡ, ಗೌಡೇಗೌಡ, ಅಮ್ಜಾದ್‌ಖಾನ್ ಇತರರಿದ್ದರು.