ದೇವರಹಿಪ್ಪರಗಿ-ಇಂಡಿ ರಸ್ತೆಯಲ್ಲಿ ನೀರಿಲ್ಲದೆ ಒಣಗಿ ನಿಂತ ಕಾಲುವೆ. 
ರಾಜ್ಯ

ಕೆರೆ ನೀರು ತುಂಬಿಸಲು ರೈತ ಸಂಘ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಬತ್ತಿದ ಕಾಲುವೆ
  • ರೈತ ಸಂಘ ಆಗ್ರಹ
ದೇವರಹಿಪ್ಪರಗಿ: ಬೇಸಿಗೆಯಲ್ಲಿ ಜನ, ಜಾನುವಾರುಗಳು ಕುಡಿಯವ ನೀರಿಗಾಗಿ ಪರದಾಡುವಂತಾಗಿದ್ದು, ಕಾಲುವೆಗಳ ಮೂಲಕ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬೇಕೆಂದು ಜಿಲ್ಲಾಡಳಿತಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಆಗ್ರಹಿಸಿದೆ.
ಬೇಸಿಗೆ ಬಿಸಿಲು ಮಿತಿ ಮೀರಿದೆ. ಕೆರೆ-ಕಟ್ಟೆಗಳಲ್ಲಿ ನೀರು ಕಡಿಮೆಯಾಗಿದೆ. ಬಿಸಿಲಿನ ಪ್ರಖರತೆಗೆ ಹಳ್ಳ-ಕೊಳ್ಳಗಳೆಲ್ಲ ಬತ್ತಿ ಹೋಗಿವೆ. ಕನಿಷ್ಠ ಜಾನುವಾರುಗಳು, ಪಕ್ಷಿಗಳಿಗೆ ಕುಡಿಯುವುದಕ್ಕಾದರೂ ಕೆರೆಗಳು ತುಂಬಬೇಕು. ಕಾಲುವೆಗಳ ಮೂಲಕ ಹಳ್ಳಗಳಿಗೆ ನೀರು ಬಿಡುವುದರಿಂದ ಹಳ್ಳ ತುಂಬಿ ಹರಿದು, ಸುತ್ತಮುತ್ತಲಿನ ಪ್ರದೇಶಗಳಿಗೂ ನೀರು ಒದಗಿ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ.
ಜಿಲ್ಲೆಯಲ್ಲಿ ಸುಮಾರು 500 ಕೆರೆಗಳಿದ್ದು, ಕೆರೆ ತುಂಬುವ ಯೋಜನೆ ಸಂಪೂರ್ಣ ಅನುಷ್ಠಾನವಾಗಬೇಕು. ಕಾಲುವೆಗಳ ಮೂಲಕ ನೀರು ಹರಿಸಬೇಕು. ಇದರಿಂದ ಮಳೆಗಾಲ ಆರಂಭವಾಗುವವರೆಗೂ ಕಾರ್ಯ ನಿರಂತರವಾಗಿರಬೇಕು.
ಜಿಲ್ಲಾಡಳಿತ ಹಳ್ಳಗಳಿಗೂ ನೀರು ಬಿಟ್ಟು ನೀರಿಲ್ಲದ ಪ್ರದೇಶಗಳಲ್ಲಿ ಕುಡಿಯುವ ನೀರಿನ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ರಾಮನಗೌಡ ಪಾಟೀಲ್, ಮಹದೇವ ಬನಸೋಡೆ, ಸಂಗಪ್ಪ ಟಕ್ಕೆ, ಸಂಪತ್ ಜಮಾದಾರ್, ಅನಮೇಶ್ ಜಮಖಂಡಿ ಶಿವಾನಂದಯ್ಯ ಹಿರೇಮಠ್, ಈರಪ್ಪ ಕುಳೆಕುಮಟಗಿ, ಸುಭಾಷ್ ಸಜ್ಜನ, ನಬಿಲಾಲ್ ಚಿಕ್ಕಸಿಂದಗಿ, ರಾಮಸಿಂಗ್ ರಜಪೂತ, ಬಸವಂತ ಉಮ್ರಾಣಿ, ದಯಾನಂದ ಕೋಳಿ, ಸಾತಲಿಂಗಯ್ಯ ಸಾಲಿಮಠ, ಸುಜಾತಾ ಅವಟಿ, ಸಂಗೀತ ರಾಠೋಡ, ಗಿರಿಜಾ ಮೈತ್ರಿ, ಮಂಜುಳಾ ಪೂಜಾರಿ, ಎಸ್.ಡಿ. ಹೆಬ್ಬಾಳ ಸೇರಿ ರೈತ ಸಂಘದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.