ಖಾಸಗಿ ಬಿತ್ತನೆ ಬೀಜ ಕಂಪನಿ ಪ್ರಯೋಗಕ್ಕೆ ರೈತರು ಸುಸ್ತು! Farmers
- ಲಾಭದ ಆಸೆ ಹುಟ್ಟಿಸಿ ನೂತನ ತಳಿಗಳ ಪರಿಚಯ
- ಈಗ ಬೆಳೆ ಮಾರಾಟವಾಗದೆ ಬೆಳೆಗಾರರು ಸಂಕಷ್ಟಕ್ಕೆ
ಎನ್. ಮುನಿವೆಂಕಟೇಗೌಡ : ಹೊರ ರಾಜ್ಯಗಳು ಸೇರಿದಂತೆ ವಿದೇಶಗಳಿಗೂ ಗುಣಮಟ್ಟದ ಟೊಮ್ಯಾಟೊ ರಪ್ತು ಮಾಡುತ್ತಿದ್ದ ಕೋಲಾರ ಜಿಲ್ಲೆಯ ರೈತರು, ಖಾಸಗಿ ಬಿತ್ತನೆ ಬೀಜ ಕಂಪನಿಗಳ ಪ್ರಯೋಗಗಳಿಗೆ ತುತ್ತಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. Farmers
ಏಷ್ಯಾದಲ್ಲಿಯೇ ಎರಡನೇ ಅತಿ ದೊಡ್ಡ ಟೊಮ್ಯಾಟೊ ಮಾರುಕಟ್ಟೆ ಹೊಂದಿರುವ ಕೋಲಾರದಲ್ಲಿ ದೇಶ&ವಿದೇಶಗಳ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಟೊಮ್ಯಾಟೊ ರ್ತು ಮಾಡಿ ಸೈ ಎನಿಸಿಕೊಂಡಿದ್ದರು. ಉತ್ತಮ ಇಳುವರಿ ಮತ್ತು ರಫ್ತಿಗೆ ಸೂಕ್ತವಾದ "ಸಾಹು ತಳಿ'ಯ ನಾಟಿ ಟೊಮ್ಯಾಟೊ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಾಹು ತಳಿಯ ಟೊಮ್ಯಾಟೊ ಬೆಳೆ ಕಾಯಿಲೆಗಳಿಗೆ ತುತ್ತಾದ ಪರಿಣಾಮ ರೈತರು ಹೊಸ ತಳಿಗಳತ್ತ ಮುಖ ಮಾಡಿದರು.
ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬೀಜೋತ್ಪನ್ನ ಕಂಪನಿಗಳ ನೂರಾರು ಹೊಸ ತಳಿಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟವು. ಆದರೆ ಆ ಯಾವುದೇ ತಳಿಯೂ ರೈತರಿಗೆ ಸಾಹು ತಳಿಗೆ ಪರ್ಯಾಯವೆನಿಸಲೇ ಇಲ್ಲ. ಅನುಕೂಲಕರ ಫಸಲು ಕೂಡ ನೀಡಲಿಲ್ಲ. ಈ ಟೊಮ್ಯಾಟೊ ರಫ್ತಿಗೂ ಯೋಗ್ಯವಾಗಿಲ್ಲ. ಆದ್ದರಿಂದ ಲಾಂತರ ರೂ. ಬಂಡವಾಳ ಹೂಡಿದ ರೈತರಿಗೆ ದಿಕ್ಕು ತೋಚದಂತಾಗಿದೆ.
ಈ ಟೊಮ್ಯಾಟೋ ಕೇವಲ ಜ್ಯೂಸ್ ್ಯಾಕ್ಟರಿಗಳಿಂದ ಖರೀದಿಸಲ್ಪಡುತ್ತಿದ್ದು, ಬಹುತೇಕ ಬೆಳೆಗಾರರಿಗೆ ಮಾರುಕಟ್ಟೆಯೇ ಇಲ್ಲದಾಗಿದೆ. ಇನ್ನು ಮಾರುಕಟ್ಟೆಯಲ್ಲಿ ಟೊಮ್ಯಾಟೊ ಕೊಳ್ಳುವವರೇ ಇಲ್ಲದೆ, ರೈತರು ಬೆಳೆಗೆ ಹಾಕಿದ್ದ ಬಂಡವಾಳದ ಜತೆಗೆ ಕೂಲಿ ಮತ್ತು ಮಾರುಕಟ್ಟೆಗೆ ಸಾಗಿಸಿದ ಬಾಡಿಗೆಯನ್ನೂ ಕೈಯಿಂದ ಕೊಡಬೇಕಾದ ಪರಿಸ್ಥಿತಿ ಎದುರಾಗಿದೆ.
ಟೊಮ್ಯಾಟೊಗೆ ವಿದೇಶಗಳಲ್ಲಿ ಈಗಲೂ ಬೇಡಿಕೆಯಿದೆ. ಕೋಲಾರದಿಂದ ವಿದೇಶಗಳಿಗೆ ರ್ತು ಮಾಡಲು ಯೋಗ್ಯ ಟೊಮ್ಯಾಟೊ ಮಾರುಕಟ್ಟೆಗೆ ಬಾರದ ಕಾರಣ ವ್ಯಾಪಾರಸ್ಥರು ಖರೀದಿಸಲು ಮುಂದಾಗುತ್ತಿಲ್ಲ. ಗುಣಮಟ್ಟದ ಟೊಮ್ಯಾಟೊ ಬಂದರೆ ವ್ಯಾಪಾರಸ್ಥರು ರೈತರಿಗೆ ಉತ್ತಮ ಬೆಲೆ ತೆತ್ತು ಖರೀದಿಸಲು ಸಿದ್ಧರಿದ್ದಾರೆ.
— ಚಂದ್ರಾರೆಡ್ಡಿ ಕೆಎಂಆರ್ ಮಂಡಿ ಮಾಲೀಕ
ಈ ಮೊದಲು ಸಾಹು ತಳಿ ಟೊಮ್ಯಾಟೊ ಬೆಳೆಯಲಾಗುತ್ತಿತ್ತು. ಅದರಿಂದ ಉತ್ತಮ ಫಸಲು ಮತ್ತು ಗುಣಮಟ್ಟದ ಕಾಯಿ ಸಿಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಸಾಹು ಟೊಮ್ಯಾಟೊಗೆ ವೈರಸ್ ಹರಡಿದ್ದರಿಂದ ಬೇರೆ ತಳಿಗಳ ಟೊಮ್ಯಾಟೊ ಬೆಳೆಯುತ್ತಿದ್ದೇವೆ. ಯಾವುದೇ ತಳಿ ನಿರೀತ ಫಸಲು ನೀಡುತ್ತಿಲ್ಲ, ಕೆಲವು ತಳಿಗಳು ಉತ್ತಮ ಸಲು ನೀಡಿದರೂ ಸಹ ರಫ್ತಿಗೆ ಯೋಗ್ಯವಲ್ಲದ ಕಾರಣ ವ್ಯಾಪಾರವಾಗದೆ ವಾಪಸ್ ಕಳುಹಿಸುತ್ತಿದ್ದಾರೆ. ಸಾಹು ತಳಿಗೆ ಈಗಲೂ ಉತ್ತಮ ಬೇಡಿಕೆಯಿದ್ದು, ಒಂದು ಬಾಕ್ಸ್ 400&-500 ರೂ. ಗೆ ಮಾರಾಟವಾಗುತ್ತಿದೆ. ಆದರೆ ಹೊಸ ತಳಿಗಳ ಒಂದು ಬಾಕ್ಸ್ 50&300 ರೂ. ಗೆ ಮಾರಾಟವಾಗುತ್ತಿವೆ. ಇನ್ನೂ ಕೆಲವು ತಳಿಗಳನ್ನು ಕೊಳ್ಳದೆ ವಾಪಸ್ಸು ಕಳುಹಿಸಲಾಗುತ್ತಿದೆ. ಜನವರಿಯಿಂದ ಇದೇ ಪರಿಸ್ಥಿತಿಯಿದ್ದು, ಲಕ್ಷಾಂತರ ರೈತರು ಸಾಲಗಾರರಾಗಿ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
— ಶ್ರೀನಾಥ್ ರೆಡ್ಡಿ ಟೊಮ್ಯಾಟೊ ಬೆಳೆಗಾರ, ಸೋಮಯಾಜಲಹಳ್ಳಿ.