ಕಾಳಗಿ ಬರಪೀಡಿತ ತಾಲೂಕು ೂಷಣೆ ಮಾಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಉಯಿಸಿ ಕಾಳಗಿಯ ಡಾ.ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ತಡೆದು ರೈತರು ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದರು. 13&07ಕಾಳಗಿ 01 (ಎ)/ ಹೋರಾಟದ ಮಧ್ಯದಲ್ಲಿ ಮುಖ್ಯರಸ್ತೆಯಲ್ಲಿಯೇ ರೊಟ್ಟಿ, ಪುಂಡಿ ಪಲ್ಯೆ ಸವಿಯುತ್ತಿರುವ ರೈತರು.
- ಕಾಳಗಿಯಲ್ಲಿ ಅನ್ನದಾತರಿಂದ ಬೃಹತ್ ಪ್ರತಿಭಟನೆ
- ತಹಸೀಲ್ದಾರ್ಗೆ ಮನವಿಪತ್ರ ಸಲ್ಲಿಕೆ
ಕಾಳಗಿ: ಮಳೆಯಿಲ್ಲದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಈ ಕೂಡಲೇ ತಾಲೂಕವನ್ನು ಬರಪೀಡಿತ ಪ್ರದೇಶವೆಂದು ೂಷಣೆ ಮಾಡಬೇಕು. ರೈತರಿಗೆ ಸೂಕ್ತ ಬೆಳೆ ನಷ್ಟ ಪರಿಹಾರ ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ಸಾವಿರಾರು ರೈತರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ತಡೆದು ಸೋಮವಾರ ಬೃಹತ್ ಹೋರಾಟ ನಡೆಸಿದರು.
ಈ ವರ್ಷ ಸಮರ್ಪಕ ಮಳೆ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಅಧಿಕಾರಿಗಳ ಮೂಲಕ ಬೆಳೆ ಹಾನಿ ಸಮೀೆ ನಡೆಸಲು ಮುಂದಾಗಬೇಕು. ಕೃಷಿ ಸಾಲಮನ್ನಾ ಮಾಡಬೇಕು. ಬಾಕಿ ಉಳಿಸಿಕೊಂಡಿರುವ ಬೆಳೆ ವಿಮೆ ಪರಿಹಾರ ಶ್ರೀ ಬಿಡುಗಡೆ ಮಾಡಬೇಕು. ಕುಡಿವ ನೀರು ಹಾಗೂ ಜಾನುವಾರುಗಳಿಗೆ ಮೇವು ವ್ಯವಸ್ಥೆ ಸೇರಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಸಂ ಹಾಗೂ ರೈತ ಸೇನೆ ತಾಲೂಕು ಅಧ್ಯ ಮಾತನಾಡಿ, ಮಳೆಗಾಲವಿದ್ದರೂ ರಣಬಿಸಿಲಿನ ತಾಪಮಾನಕ್ಕೆ ಭೂಮಿಯಲ್ಲಿ ತೇವಾಂಶ ಕಡಿಮೆಯಾಗಿದೆ. ಉದ್ದು&ಹೆಸರು, ತೊಗರಿ ಸಂಪೂರ್ಣ ಹಾಳಾಗಿದೆ. ಅನ್ನದಾತನಿಗೆ ಏನು ಮಾಡಬೇಕು ಎಂಬುದು ತೋಚದಂತಾಗಿದ್ದು, ಸರ್ಕಾರ ಬರ ೂಷಿಸಿ ರೈತರ ನೆರವಿಗೆ ಧಾವಿಸುವುದು ಅಗತ್ಯವಾಗಿದೆ ಎಂದು ಮನವಿ ಮಾಡಿದರು.
ತಹಸೀಲ್ದಾರ್ ಪೃಥ್ವಿರಾಜ್ ಪಾಟೀಲ್ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಮಂಗಲಗಿ, ತೆಂಗಳಿಯ ಶ್ರೀ ಶಾಂತಸೋಮನಾಥ ಶಿವಾಚಾರ್ಯ, ರಟಕಲ್ ನಡುವಿನ ಮಠದ ರೇವಣಸಿದ್ಧ ಶಿವಾಚಾರ್ಯ, ಕೋಡ್ಲಿಯ ಶ್ರೀ ಬಸವಲಿಂಗ ಶಿವಾಚಾರ್ಯ, ರಟಕಲ್ ಗೌರಿಗುಡ್ಡದ ಶ್ರೀ ರೇವಣಸಿದ್ಧ ಶರಣರು ಸಾಥ್ ಕೊಟ್ಟರು.
ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ್ ಗೊಣಗಿ, ಪ್ರಶಾಂತ ರಾಜಾಪುರ, ಚಂದ್ರಶೇಖರ ಹರಸೂರ, ಅವಿನಾಶ ಗುತ್ತೇದಾರ್, ಮಾರುತಿ ಗಂಜಗಿರಿ, ಮೋಹನ ಚಿನ್ನಾ ಕೊಡದೂರ, ಸುಂದರ ಡಿ.ಸಾಗರ, ಭರತ ಬುಳ್ಳಾ, ಮಲ್ಲಿಕಾರ್ಜುನ ಪೊಲೀಸ್ ಪಾಟೀಲ್, ಪೃಥ್ವಿ ನಾಮದಾರ, ಕರಣ ರಾಜಾಪುರ, ಭೀಮರಾಯ ಮಲಘಾಣ, ಸಾಬಣ್ಣ ಪೂಜಾರಿ, ಶರಣು ಬೇಲೂರ, ಕಾಳಪ್ಪ ಕರೆಮನೋರ, ರಾಜು ಸಿಳ್ಳಿನ, ಮಲ್ಲಿಕಾರ್ಜುನ ಪಾಟೀಲ್ ಹುಳಗೇರಿ, ಮಶಾಖ್ ಪಟೇಲ್, ರಮೇಶ ಹೆಬ್ಬಾಳ, ಮಲ್ಲು ಹೂಗಾರ, ದಯಾನಂದ ಪಾಟೀಲ್, ರಾಜು ಹೊಸ್ಸಳ್ಳಿ, ಹಣಮಂತರಾವ ಪಾಟೀಲ್, ಸಿದ್ದಪ್ಪ ಪಾಟೀಲ್, ಶೇಖರ ಮಾನಶೆಟ್ಟಿ, ಶಿವು ಸಾಲಿಮಠ, ಚಂದ್ರಕಾಂತ ಚವ್ಹಾಣ್, ಮಲ್ಲಿಕಾರ್ಜುನ ಪಾಟೀಲ್ ಹಲಚೇರಿ, ದತ್ತು ಗುತ್ತೇದಾರ್, ಶ್ರೀಮಂತ ಹಡಪದ, ಧನಸಿಂಗ್ ಚವ್ಹಾಣ್, ಸಿದ್ರಾಮಪ್ಪ ಕಮಲಾಪುರ, ವೀರಭದ್ರಪ್ಪ ಸಲಗೂರ ಇತರರಿದ್ದರು.
ಪಿಎಸ್ಐ ತಿಮ್ಮಯ್ಯ ಬಿ.ಕೆ. ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಎತ್ತಿನ ಬಂಡಿ, ಟ್ರಾಕ್ಟರ್ನೊಂದಿಗೆ ಬೃಹತ್ ಮೆರವಣಿಗೆ
ಕಾಳಗಿ ಪಟ್ಟಣ ಸೋಮವಾರ ಸಂಪೂರ್ಣ ರೈತಮಯವಾಗಿತ್ತು. ಸುಮಾರು 70ಕ್ಕೂ ಹೆಚ್ಚು ಹಳ್ಳಿಗಳ ರೈತರು ನೇಗಿಲು, ಗಳ್ಯಾದಿಂಡು, ಎತ್ತಿನ ಬಂಡಿ, ಟ್ರಾಕ್ಟರ್ ಸೇರಿ ವಿವಿಧ ಕೃಷಿ ಪರಿಕರಗಳನ್ನು ತೆಗೆದುಕೊಂಡು, ಬಾರುಕೋಲುಗಳನ್ನು ಬೀಸುತ್ತಾ ಬೃಹತ್ ಮೆರವಣಿಗೆ ನಡೆಸಿದರು. ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ ಡಾ.ಅಂಬೇಡ್ಕರ್ ವೃತ್ತ ತಲುಪಿ ಸಮಾವೇಶಗೊಂಡಿತು.
ಸಾವಿರಾರು ರೈತರು ಬೆಳಗ್ಗೆ ಮನೆಯಿಂದಲೇ ಬುತ್ತಿ ಕಟ್ಟಿಕೊಂಡು ಬಂದು ಹೋರಾಟದಲ್ಲಿ ಭಾಗಿಯಾಗಿದ್ದರು. ರಣಬಿಸಿಲಿನ ಮಧ್ಯೆಯೇ ಮಧ್ಯಾಹ್ನ ಮುಖ್ಯರಸ್ತೆಯಲ್ಲಿಯೇ ಸಾಮೂಹಿಕವಾಗಿ ಪುಂಡಿ ಪಲ್ಲೆ, ಸಜ್ಜೆ/ಜೋಳ ರೊಟ್ಟಿ ಸವಿದರು. ಬಳಿಕ ಮತ್ತೆ ಹೋರಾಟಕ್ಕೆ ಕುಳಿತರು.
ನಾಲ್ಕು ಗಂಟೆ ಸಂಚಾರ ಸ್ಥಗಿತ
ಕಾಳಗಿ ಹೃದಯ ಭಾಗವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಾವಿರಾರು ರೈತರು ಜಮಾಯಿಸಿ ಸಂಚಾರ ತಡೆದು ಹೋರಾಟಕ್ಕೆ ಕುಳಿತರು. ಬೆಳಗ್ಗೆ 10.30ಕ್ಕೆ ಶುರುವಾದ ಪ್ರತಿಭಟನೆ ಮಧ್ಯಾಹ್ನ 3.30ರವರೆಗೂ ಸಾಗಿತು. ರಣ ಬಿಸಿಲಿಗೂ ಬಗ್ಗದೇ ಪ್ರತಿಭಟನೆ ಮುಂದುವರಿಸಿದರು. ತಮ್ಮ ನೋವನ್ನು ಅಧಿಕಾರಿಗಳ ಮುಂದಿಟ್ಟರು. ಬಳಿಕ ತಹಸೀಲ್ದಾರ್ ಪೃಥ್ವಿರಾಜ ಪಾಟೀಲ್ ಅವರ ಭರವಸೆ ಮೇರೆಗೆ ಹೋರಾಟ ಮೊಟಕುಗೊಳಿಸಲಾಯಿತು.
ಮಾನವೀಯತೆ ಮೆರೆದ ಕೃಷಿಕರು
ತಮ್ಮ ನೋವನ್ನು ಸರ್ಕಾರದ ಗಮನಕ್ಕೆ ತರಲು ಹೋರಾಟಕ್ಕಿಳಿದ ರೈತರು ಪ್ರತಿಭಟನೆ ಮಧ್ಯೆ ಆಂಬುಲೆನ್ಸ್ಗಳಿಗೆ ದಾರಿ ಕಲ್ಪಿಸುವ ಮೂಲಕ ಮಾನವೀಯತೆ ಮೆರೆದ ಪ್ರಸಂಗ ಸೋಮವಾರ ಕಂಡುಬಂತು. ಡಾ.ಅಂಬೇಡ್ಕರ್ ವೃತ್ತದಲ್ಲಿ ಸಂಚಾರ ತಡೆದು ಪ್ರತಿಭನೆಗೆ ಕುಳಿತಾಗ ತುರ್ತು ಚಿಕಿತ್ಸೆಗಾಗಿ ರೋಗಿಗಳನ್ನು ಕಲಬುರಗಿಗೆ ಕರೆದೊಯ್ಯುತ್ತಿದ್ದ ಮೂರು ಆಂಬುಲೆನ್ಸ್ಗಳು ಬಂದಿದ್ದು, ಕೂಡಲೇ ರೈತಾಪಿ ವರ್ಗ ದಾರಿ ಮಾಡಿಕೊಟ್ಟಿದ್ದಾರೆ.
"
ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣ ಮರೆತಿದೆ. ಆರ್ಎಸ್ಎಸ್ ಸೇರಿ ಇನ್ನಿಲ್ಲದ ವಿಷಯಗಳತ್ತ ಗಮನಹರಿಸುವ ಮೂಲಕ ಸಮಯ ಹಾಳು ಮಾಡುತ್ತಿದೆ. ರೈತಾಪಿ ವರ್ಗ ಮಳೆ, ಬೆಳೆಯಿಲ್ಲದೆ ರಸ್ತೆಗೆ ಬಂದಿದೆ. ರಾಜಕಾರಣ ಬಿಟ್ಟು ಅನ್ನದಾತರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಿ.
— > ರೈತ ಮಲ್ಲೀಕಾರ್ಜುನ, ರುದನೂರ