former 
ರಾಜ್ಯ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿವೆ. ಬೇಸಾಯಕ್ಕೆ ಅನುಕೂಲಕರ ಹವಾಮಾನ ಮತ್ತು ರೈತರ ಅನುಕೂಲಕ್ಕಾಗಿ ಸರ್ಕಾರ ಕೈಗೊಂಡ ವಿವಿಧ ಯೋಜನೆ ರೈತರ ಬಾಳಲ್ಲಿ ಮಂದಹಾಸ ಮೂಡಿಸಿವೆ.
ರೈತರು ಸಾವಿರಾರು ರೂಪಾಯಿ ಸಾಲ ಅಥವಾ ಕೂಡಿಟ್ಟ ಹಣದಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಕಾರ್ಮಿಕರು, ಯಂತ್ರೋಪಕರಣ ಬಾಡಿಗೆ ಎಂದು ಖರ್ಚು ಮಾಡಿ ಸಲಿನ ಮೇಲೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಇದರ ನಡುವೆ ಏನಾದರೂ ಹವಾಮಾನ ವೈಪರೀತ್ಯವಾಗಿ ಬೆಳೆ ಕೈ ಸೇರದೇ ಇದ್ದರೆ ಅಥವಾ ಸೂಕ್ತ ಬೆಲೆ ಸಿಗದೇ ಇದ್ದರೆ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಸಹಾಯಕ್ಕೆ ಬಾರದಿದ್ದರೆ ರೈತರು ಆತ್ಮಹತ್ಯೆಯ ನಿರ್ಧಾರಕ್ಕೆ ಬರಲಿದ್ದಾರೆ. ಇದೇ ರೀತಿಯಾಗಿ 2022-23ನೇ ಸಾಲಿನಲ್ಲಿ 1049 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ 2023-24ನೇ ಸಾಲಿನಲ್ಲಿ 1257, 2024-25ರಲ್ಲಿ 1194 ರೈತರು ಮತ್ತು 2025- 26ರಲ್ಲಿ 671 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಆದರೆ, ರೈತರ ಆತ್ಮಹತ್ಯೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ವಿವಿಧ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿಕೊಳ್ಳುವ ಮೂಲಕ ರೈತರಲ್ಲಿ ಆತ್ಮವಿಶ್ವಾಸ ತುಂಬುತ್ತಾ ಬಂದಿದೆ. ಪ್ರಮುಖವಾಗಿ ಬಿತ್ತನೆ ಬೀಜಗಳ ಪೂರೈಕೆ ಯೋಜನೆಯಡಿ ವಿವಿಧ ಬೆಳೆಗಳ ಗುಣಮಟ್ಟದ ಬೀಜಗಳ ವಿತರಣೆ ಮಾಡುವ ಜತೆಗೆ ಸಬ್ಸಡಿ ದರದಲ್ಲಿ ನೀಡಲಾಗುತ್ತಿದೆ.
ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಅನುವು ಮಾಡಿಕೊಡಲು ಮತ್ತು ಕೂಲಿ ಕಾರ್ಮಿಕರ ಮೇಲಿನ ಅವಲಂಬನೆ ಕಡಿಮೆ ಮಾಡಲು ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ನೀಡಲಾಗಿದೆ. ಅದೇ ರೀತಿಯಾಗಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆ, ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಶೇ.50 ರಿಯಾಯಿತಿ ದರದಲ್ಲಿ ಜೈವಿಕ ಪೀಡೆನಾಶಕ, ಸಿರಿಧಾನ್ಯಗಳ ಉತ್ಪಾದನೆಗೆ ಪ್ರೋತ್ಸಾಹ, ಸಾವಯವ ಇಂಗಾಲ ಅಭಿಯಾನ, ಕೇಂದ್ರ ಸರ್ಕಾರವು ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿಗೆ ಮುಂಚಿತವಾಗಿ ಬೆಂಬಲ ಬೆಲೆ ೋಷಣೆ ಮಾಡುತ್ತಿದೆ.
ಪಿಎಂ ಕಿಸಾನ್ ಯೋಜನೆಯಡಿ ರೈತ ಕುಟುಂಬಕ್ಕೆ ವರ್ಷಕ್ಕೆ 6 ಸಾವಿರ ರೂ. ಬೆಳೆ ಪರಿಹಾರ, ಕೃಷಿ ಆವರ್ತ ನಿಧಿ, ಬೆಳೆ ಸಾಲಕ್ಕೆ ಸಹಾಯಧನ, ಕೃಷಿ ಭಾಗ್ಯ, ಹೈಟೆಕ್ ಹಾರ್ವೆಸ್ಟರ್ ಹಬ್ ಮತ್ತು ರಾಷ್ಟ್ರೀಯ ಆಹಾರ ಸುರಕ್ಷಾ ಅಭಿಯಾನ ಮತ್ತು ಖಾದ್ಯ ತೈಲ ಅಭಿಯಾನ ಹಮ್ಮಿಕೊಂಡಿರುವ ಪರಿಣಾಮ ರೈತರ ಆತ್ಮಹತ್ಯೆ ಪ್ರಕರಣಗಳು ಇಳಿಮುಖವಾಗಿವೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಡಿಸಿ ಅಧ್ಯಕ್ಷತೆಯಲ್ಲಿ ಸಮಿತಿ:

ರೈತ ಕುಟುಂಬಗಳಿಗೆ ಸಾಂತ್ವನ/ಆತ್ಮಸ್ಥೈರ್ಯ ತುಂಬಲು ಇನ್‌ಸ್ಪೆಕ್ಟ್, ತಹಸೀಲ್ದಾರ್ ಮತ್ತು ಸಹಾಯಕ ಕೃಷಿ ನಿರ್ದೇಶಕರು ಒಳಗೊಂಡ ಅಪರ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ. ರೈತರ ಮನೆಗಳಿಗೆ ಹೋಗಿ ಅವರಿಗೆ ಆತ್ಮವಿಸ್ವಾಸ ತುಂಬುವ ಕೆಲಸ ಮಾಡಲಿದ್ದಾರೆ.

ರೈತ ಕುಟುಂಬಕ್ಕೆ ಪರಿಹಾರ

2015ನೇ ಸಾಲಿನಿಂದ ರೈತ ಆತ್ಮಹತ್ಯೆ ಪ್ರಕರಣದಲ್ಲಿ ಅರ್ಹ ರೈತ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. 2023-24ನೇ ಸಾಲಿನಲ್ಲಿ 1090 ಲಾನುಭವಿಗಳಿಗೆ 54 ಕೋಟಿ ರೂ., 2024- 25ನೇ ಸಾಲಿನಲ್ಲಿ 986 ಸಂತ್ರಸ್ತ ಕುಟುಂಬಕ್ಕೆ 49.30 ಕೋಟಿ ರೂ. ಮತ್ತು 2025-26ನೇ ಸಾಲಿನಲ್ಲಿ ೆಬ್ರವರಿ-2ರ ಅಂತ್ಯಕ್ಕೆ 23.40 ಕೋಟಿ ರೂ. ಪರಿಹಾರ ನೀಡಲಾಗಿದೆ.