ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದ ಪುನರ್ ವಸತಿ ಕಚೇರಿಯ ನೌಕರ ನೀಲಕಂಠ ಅಂಕದ ಅವರ ಮೇಲೆ ಚಪ್ಪಲಿಯಿಂದ ಹೊಡೆದ ರೈತ ಬಸಪ್ಪ ದೊಡ್ಡಮನಿ.
ಬಾಗಲಕೋಟೆ: ಭೂಸ್ವಾಽÃನಗೊಂಡ ಜಮೀನಿಗೆ ಸಂಬAಽಸಿದAತೆ ಪರಿಹಾರದ ವಿಚಾರವಾಗಿ ದಶಕಗಳಿಂದಲೂ ಸಮಸ್ಯೆ ಬಗೆಹರಿಸುತ್ತಿಲ್ಲವೆಂದು ಆಕ್ರೋಶಗೊಂಡ ರೈತರೊಬ್ಬರು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕರದ ಪುನರ್‌ವಸತಿ ಕಚೇರಿ ನೌಕರಿಗೆ ಕಚೇರಿಯಲ್ಲೆ ಚಪ್ಪಲಿಯಿಂದ ಹೊಡೆದಿರುವ ಘಟನೆ ಶನಿವಾರ ನಡೆದಿದೆ.
ಬಸಪ್ಪ ದೊಡ್ಡಮನಿ ಎನ್ನುವ ರೈತ ಆರ್‌ಒ ಕಚೇರಿ ನೌಕರ ನೀಲಕಂಠಪ್ಪ ಅಂಕದ ಎನ್ನುವವರಿಗೆ ಕಚೇರಿಗೆ ನುಗ್ಗಿ ಚಪ್ಪಲಿಯಿಂದ ಹೊಡೆದಿದ್ದಾರೆ.
ಶನಿವಾರ ಬಿಟಿಡಿಎನಲ್ಲಿ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಹಾಗೂ ಶಾಸಕ ಉಮೇಶ ಮೇಟಿ ಅವರು ಸಂತ್ರಸ್ತರಿಗೆ ಹಕ್ಕು ಪತ್ರ ಹಾಗೂ ಇ-ಸ್ವತ್ತು ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಕಾರ್ಯಕ್ರಮಕ್ಕೂ ಆರಂಭಕ್ಕೂ ಮುನ್ನ ಬಿಟಿಡಿಎಗೆ ಕೆಲವರು ಪ್ರತಿಭಟನೆಗೆ ಮುಂದಾಗಿದ್ದರು. ಇದೇ ವೇಳೆ ರೈತ ಬಸಪ್ಪ ದೊಡ್ಡಮನಿ ಸಹ ನೌಕರ ಅಂಕದ ಜೊತೆಗೆ ತನ್ನ ಪ್ರಕರಣ ವಿಚಾರವಾಗಿ ಮಾತಿನ ಚಕುಮಕಿ ನಡೆಸಿದ್ದರು. ಮಾತಿಗೆ ಮಾತು ಬೆಳೆದು ರೈತ ತನ್ನ ಚಪ್ಪಲಿ ತೆಗೆದುಕೊಂಡು ನೌಕರಿಗೆ ಕಪಾಳಮೋಕ್ಷ ಮಾಡಿದರು.
ಬಸಪ್ಪ ದೊಡ್ಡಮನಿ ಅವರ ಜಮೀನು ನವನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಾಗಿ ಜಮೀನು ಕಳೆದುಕೊಂಡಿದ್ದರು. ಅದಕ್ಕೆ ಸಂಬAಽಸಿದAತೆ ಪರಿಹಾರ ವಿಚಾರದಲ್ಲಿ ಸಮಸ್ಯೆ ಆಗಿದ್ದು, ಕೋರ್ಟ್ಗೆ ಹೋಗಿದೆ ಎಂದು ಹೇಳಲಾಗುತ್ತಿದೆ. ಆದರೆ, ರೈತ ಮಾತ್ರ ದಶಕಗಳಿಂದಲೂ ಬಿಟಿಡಿಎ ಕಚೇರಿ, ತಹಸೀಲ್ದಾರ ಕಚೇರಿ, ಉಪ ವಿಭಾಗಾಽಕಾರಿ ಕಚೇರಿಗೆ ಅಲೆಯುತ್ತಲೇ ಇದ್ದಾರೆ. ಇದೇ ವಿಚಾರವಾಗಿ ಅನೇಕ ಸಲ ಪ್ರತಿಭಟನೆ, ತಾನು ಕಳೆದುಕೊಂಡಿರುವ ಜಮೀನಿನಲ್ಲಿ ನಿರ್ಮಾಣವಾಗಿರುವ ರಸ್ತೆ ಬಂದ್ ಮಾಡಿದ್ದು ಇದೆ. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
ಇದರಿಂದ ತಾಳ್ಮೆ ಕಳೆದುಕೊಂಡಿರುವ ರೈತ ಶನಿವಾರ ಬಿಟಿಡಿಎ ಕಚೇರಿಗೆ ತೆರಳಿ ಪುನರ್ ವಸತಿ ಕಚೇರಿಯ ನೌಕರ ನೀಲಕಂಠಪ್ಪ ಅಂಕದ ಅವರೊಂದು ಜಗಳ ಮಾಡಿದ್ದಾನೆ. ರೈತನ ಪ್ರಕರಣಕ್ಕೂ ತನಗೂ ಸಂಬAಧ ಇಲ್ಲ ಎಂದರೂ ಇದಕ್ಕೆಲ್ಲ ನೀನೇ ಕಾರಣವೆಂದು ಸಿಟ್ಟಿನಿಂದ ಕೂಗಾಡುತ್ತ ಚಪ್ಪಲಿಯಿಂದ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ.
ಕರ್ತವ್ಯದಲ್ಲಿ ಇರುವಾಗಲೇ ಕಚೇರಿಗೆ ನುಗ್ಗಿ ಚಪ್ಪಲಿಯಿಂದ ಹೊಡೆದು ಜೀವ ಬೆದರಿಕೆ ಹಾಕಿರುವ ಬಗ್ಗೆ ನೌಕರ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆ ನಡೆದ ಬಳಿಕ ಪೊಲೀಸರು ರೈತ ಬಸಪ್ಪ ದೊಡ್ಡಮನಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಇನ್ನು ಬಿಟಿಡಿಎ ನೌಕರನ ಮೇಲೆ ಹಲ್ಲೆ ಮಾಡಿದ್ದರಿಂದ ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಸಹ ಠಾಣೆಗೆ ಭೇಟಿ ನೀಡಿ ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಿಟಿಡಿಎನಲ್ಲಿ ಶನಿವಾರ ರೈತ ಬಸಪ್ಪ ದೊಡ್ಡಮನಿ ಕಾನೂನು ಕೈಗೆ ತೆಗೆದುಕೊಂಡು ಹಲ್ಲೆ ಮಾಡಿರುವುದು ಸರಿಯಾದ ಕ್ರಮವಲ್ಲ. ಅಽಕಾರಿಯಿಂದ ತೊಂದರೆ ಆಗಿದ್ದರೆ ಆ ಬಗ್ಗೆ ದೂರು ಕೊಡಬೇಕು. ಅದನ್ನು ಬಿಟ್ಟು ಹೀಗೆ ಹಲ್ಲೆ ನಡೆಸುವುದು ಒಳ್ಳೆಯದಲ್ಲ. ಬಟಿಡಿಎ ಅಧ್ಯಕ್ಷನಾಗಿ ನಮ್ಮ ಸಂಸ್ಥೆಯ ಅಽಕಾರಿ ಮತ್ತು ಸಿಬ್ಬಂದಿ ರಕ್ಷಣೆ ನಮ್ಮ ಆದ್ಯತೆ ಆಗಿರುತ್ತದೆ. ನಮ್ಮ ಎದುರಿನಲ್ಲೆ, ಸಾರ್ವಜನಿಕರ ಎದುರು ಸರ್ಕಾರಿ ನೌಕರನ ಮೇಲೆ ಹಲ್ಲೆ ನಡೆಸುವ ಮೂಲಕ ಅವರ ಹಾಗೂ ಇತರೆ ಸಿಬ್ಬಂದಿ ಆತ್ಮವಿಶ್ವಾಸ ಕುಗ್ಗಿಸುವ ಇಂಥ ಕೃತ್ಯಸಹಿಸಲು ಸಾಧ್ಯವಿಲ್ಲ. ಹೀಗಾಗಿ ಅವರ ಪರವಾಗಿ ಠಾಣೆಗೆ ಹೋಗಿ ಘಟನೆ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ತಿಳಿಸಿದರು.