Farmer hands over cable thief to police
ಚಿಂತಾಮಣಿ: ತಾಲೂಕಿನ ದಿಗವಗೊಲ್ಲಪಲ್ಲಿ ಗ್ರಾಮದ ದೇವರಾಜರೆಡ್ಡಿ ಎಂಬುವರ ಕೊಳವೆಬಾವಿಯ ಕೇಬಲ್ ಕಳವು ಮಾಡಿದ್ದವನನ್ನು ಹಿಡಿದ ಜಮೀನು ಮಾಲೀಕ ಭಾನುವಾರ ಕೆಂಚಾರ್ಲಹಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಮಂಚಿನೀಳಕೋಟದ ನಿವಾಸಿ ಕೃಷ್ಣ (36) ಆರೋಪಿ.
ಕೊಳವೆಬಾವಿ ಕೇಬಲ್ ಕಳವು ಮಾಡಿದ್ದ ಈತ, ಚಿಂತಾಮಣಿ-&ಚೇಳೂರು ಮುಖ್ಯರಸ್ತೆಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ. ಈ ವೇಳೆ ದೇವರಾಜರೆಡ್ಡಿ ಅವರನ್ನು ನೋಡಿ ಓಡಿ ಹೋಗಲು ಯತ್ನಿಸಿದ್ದಾನೆ. ತಕ್ಷಣ ಆತನನ್ನು ಹಿಡಿದು, ಚೀಲ ನೋಡಿದಾಗ ಕೇಬಲ್ಗಳು ಕಂಡು ಬಂದಿವೆ. ಕೆಂಚಾರ್ಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.