Farmer-friendly decision for the benefit of milk producers. 
ರಾಜ್ಯ

ಹಾಲು ಉತ್ಪಾದಕರ ಲಾಭಕ್ಕಾಗಿ ರೈತ ಸ್ನೇಹಿ ನಿರ್ಣಯ

ಕೋಲಾರ: ಜಿಲ್ಲೆಯಲ್ಲಿ ಮಳೆ ಕೊರತೆ ಎದುರಾಗಿದ್ದು, ಮೇವಿನ ಅಭಾವ ಸೃಷ್ಟಿಯಾಗಿ ಹೈನೋದ್ಯಮದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರದಂತೆ ಒಕ್ಕೂಟದ ಆಡಳಿತ ಮಂಡಳಿಯಿಂದ ರೈತ ಸ್ನೇಹಿ ರ್ನಿಣಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೋಮುಲ್​ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಹೇಳಿದರು.
ಹೈನೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಒಕ್ಕೂಟದಿಂದ ಬರಗಾಲದಲ್ಲಿ ಪ್ರೋತ್ಸಾಹಧನ ನೀಡಲು ತೀಮಾರ್ನಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 
ರಾಜ್ಯದ್ಯಂತ ಮಳೆಯ ಕೊರತೆಯಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆಯಾಗದಂತೆ. ಹಾಲು ಉತ್ಪಾದನೆ, ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಹಸಿರುಮೇವು ಬೆಳೆಯಲು ಕಾರ್ಯಕ್ರಮ ರೂಪಿಸಿದ್ದು, 1 ಎಕರೆಗೆ 3 ಸಾವಿರ ರೂ. ಪ್ರೋತ್ಸಾಹ ಧನ ಹಾಗೂ ಶೇ.50 ಸಬ್ಸಿಡಿಯಲ್ಲಿ ಮೇವಿನ ಬಿತ್ತನೆ ಬೀಜ ನೀಡುತ್ತಿದ್ದೆವು. ಇದೀಗ ಪ್ರತಿ ಎಕರೆಗೆ 5 ಸಾವಿರರೂ ಪ್ರೋತ್ಸಾಹ ಧನ ನೀಡಲು ತೀಮಾರ್ನ ತೆಗೆದುಕೊಳ್ಳಲಾಗಿದೆ ಎಂದರು. 
ಈ ಮೊದಲು 50 ಹಸಿರು ಮೇವು ಉತ್ಪಾದಕ ಘಟಕಗಳಿಗೆ ಅವಕಾಶವಿತ್ತು ಈಗ ಅದನ್ನೂ ವಿಸ್ತರಿಸಿದ್ದು, 25,000 ರೂ. ಪ್ರೋತ್ಸಾಹಧನ ನೀಡಲಾಗುವುದು. ಹಾಗೆಯೇ ಈ ಹಿಂದೆ 100 ಅಜೋಲ ತೊಟ್ಟಿ ನಿಮಾರ್ಣಕ್ಕೆ ಅವಕಾಶವಿದ್ದು, 3 ಸಾವಿರ ರೂ.ಪ್ರೋತ್ಸಾಹಧನವನ್ನು 5 ಸಾವಿರ ರೂ.ಗೆ ಏರಿಸಲಾಗಿದೆ. ಎಲ್ಲ ಹೈನುಗಾರರೂ ಇದನ್ನು ನಿರ್ಮಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದರು. 
ಒಕ್ಕೂಟದ ಗೋದಾಮಿನಲ್ಲಿರುವ ಸೂಪರ್​ನೇಪಿಯರ್​ ಹುಲ್ಲಿನ ಕಡ್ಡಿಗಳನ್ನು 10 ಸಾವಿರ ಕಡ್ಡಿಗಳಿಗೆ 500 ರೂ.ಗಳಂತೆ ಪಾವತಿಸಿಕೊಂಡು ಹಾಲು ಉತ್ಪಾದಕರಿಗೆ ವಿತರಿಸಲಾಗುತ್ತಿದ್ದು, ಅದನ್ನು ಈ ಸಾಲಿಗೆ ಉಚಿತವಾಗಿ ನೀಡಲು ತೀಮಾರ್ನಿಸಲಾಗಿದೆ ಎಂದರು.
ಟೀಕೆ, ಟಿಪ್ಪಣಿಗೆ ತಲೆಕೆಡಿಸಿಕೊಳ್ಳಲ್ಲ
ಒಕ್ಕೂಟದ ವಿವಿಧ ಹುದ್ದೆಗೆ ನೇಮಕಾತಿ ವಿಚಾರಕ್ಕೆ ಸಂಬಂಧಿಸಿ ನೂರು ಟೀಕೆ&ಟಿಪ್ಪಣಿ ಬರಲಿ ಅದರ ಬಗ್ಗೆ ಎಂತಹವರು ಮಾತನಾಡುತ್ತಿದ್ದಾರೆ ಎಂದು ಗೊತ್ತಿದೆ. ಅವರ ಕಷ್ಟ ಬಾಧೆಗೆ ನಾವು ಸೊಪ್ಪು ಹಾಕಲ್ಲ ಎಂದು ನಂಜೇಗೌಡ ತಿರುಗೇಟು ನೀಡಿದರು. ನೇಮಕಾತಿ ಪ್ರಕ್ರಿಯೆ ನಡೆದು 2 ವರ್ಷ ಕಳೆದಿವೆ, ಟೀಕೆ ಟಿಪ್ಪಣಿಗಳಿಗೆ ಪ್ರತಿಕ್ರಿಯೆ ನೀಡುತ್ತಾ ಹೋದರೆ ಕೆಲಸ ಮಾಡಲಾಗುವುದಿಲ್ಲ, ಸಂಗಳು, ಒಕ್ಕೂಟ ಹಾಗೂ ರೈತರ ಬಗ್ಗೆಯಷ್ಟೇ ನಮ್ಮ ಆಲೋಚನೆ. ಆರೋಪಗಳಿಗೆಲ್ಲ ಒಂದು ದಿನ ಉತ್ತರ ಕೊಡುತ್ತೇವೆ. 
ಸರ್ಕಾರದ ಗಮನ ಸೆಳೆಯಬೇಕಿದೆ 
ಹಾಲು ಉತ್ಪಾದನೆ ಹೆಚ್ಚಾದಾಗ ಸಾಂಪ್ರದಾಯಿಕವಾಗಿ ದರ ಕಡಿಮೆ ಮಾಡುವುದು ವಾಡಿಕೆ. 5 ರೂ. ಪ್ರೋತ್ಸಾಹ ಧನ ಒಂದು ತಿಂಗಳು ಸಮಸ್ಯೆ ಆಗಿದ್ದು ಶೀಘ್ರ  ಬಗೆಹರಿಯಲಿದೆ. ಇದನ್ನು 10 ರೂ.ಗೆ ಏರಿಕೆ ಮಾಡಲು ಒತ್ತಾಯ ಮಾಡುತ್ತಿದ್ದು, ಬಮುಲ್​ ಅಧ್ಯಕ್ಷ ಡಿ.ಕೆ.ಸುರೇಶ್​ ಕುಮಾರ್​ ಸೇರಿ ಎಲ್ಲ ಅಧ್ಯಕ್ಷರು ಸರ್ಕಾರದ ಗಮನಕ್ಕೆ ತರಬೇಕು ಎಂದು ನಂಜೇಗೌಡ ಹೇಳಿದರು. ಮಾಲೂರಿನಲ್ಲಿ ಮುಖ್ಯಮಂತ್ರಿಗಳ ಕಾರ್ಯಕಮಕ್ಕೆ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ. ಈ ತಿಂಗಳಲ್ಲೇ ಮಾಲೂರಿಗೆ ಆಗಮಿಸಲಿದ್ದು, ದಿನಾಂಕ ನಿಗದಿಯಾಗಲಿದೆ. ಅಲ್ಲದೆ ಮುಂದಿನ ತಿಂಗಳು ಕೋಲಾರಕ್ಕೆ ಬಂದು ಎಂವಿಕೆ ಗೋಲ್ಡನ್​ ಡೇರಿ, ಸೋಲಾರ್​ ಘಟಕ ಉದ್ಘಾಟಿಸಲಿದ್ದಾರೆ ಎಂದರು.
"

5 ಸಾವಿರ ಎಮ್ಮೆ ಖರೀದಿಗೆ ಪ್ರೋತ್ಸಾಹ 

ಹಾಲಿನ ಉತ್ಪಾದನೆಯಲ್ಲಿ 8.25 ಲಕ್ಷ ಲೀಟರ್​ ಗುರಿ ತಲುಪಿದ್ದೇವೆ. ಒಂದು ವರ್ಷದಲ್ಲಿ ಅದು 10 ಲಕ್ಷ ಲೀಟರ್​ಗೆ ತಲುಪಬೇಕು. ಅದಕ್ಕಾಗಿ ಪ್ರತಿ ಹಳ್ಳಿಯಲ್ಲೂ ಸಂಘ ಆರಂಭವಾಗಬೇಕು ಎಂದು ಕೆ.ವೈ.ನಂಜೇಗೌಡ ತಿಳಿಸಿದರು.ಹಸುಗಳಿಂದ ಗುಣಮಟ್ಟದ ಹಾಲು ಲಭ್ಯವಾಗುತ್ತಿಲ್ಲ. ಎಮ್ಮೆಗಳ ಸಂಖ್ಯೆ ಕಡಿಮೆಯಿದ್ದು, ಅವು ಇಲ್ಲದೆ ಹಾಲಿನ ಗುಣಮಟ್ಟದಲ್ಲೂ ಗುರಿ ಮುಟ್ಟಲು ಆಗುತ್ತಿಲ್ಲ. ಹೀಗಾಗಿ ಷೇರುದಾರರು ಮುಂದೆ ಬಂದರೆ ಎಮ್ಮೆ ಕಟ್ಟಿಕೊಳ್ಳಲು 30 ಸಾವಿರ ಪ್ರೋತ್ಸಾಹಧನ ನೀಡಲಾಗುತ್ತದೆ. ಒಂದು ವರ್ಷಕ್ಕೆ 1 ಸಾವಿರ ಎಮ್ಮೆ ಖರೀದಿ ಗುರಿ ಹೊಂದಲಾಗಿದ್ದು, 5 ವರ್ಷದ ಯೋಜನೆಯಿದು. ಸಾವಿರ ಎಮ್ಮೆ ಖರೀದಿಗೆ 3 ಕೋಟಿ ಅಂದರೆ 5 ವರ್ಷಕ್ಕೆ 15 ಕೋಟಿ ವೆಚ್ಚವಾಗಲಿದ್ದು, ಒಕ್ಕೂಟದಿಂದಲೇ ಭರಿಸಲಾಗುವುದು ಎಂದು ವಿವರಿಸಿದರು.


ಕೋಲಾರ ಹಾಲು ಒಕ್ಕೂಟದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರೂ ಹಾಗೂ ಶಾಸಕ ಕೆ.ವೈ.ನಂಜೇಗೌಡ ಮಾತನಾಡಿದರು. ನಿರ್ದೇಶಕ ಕೆ.ಕೆ.ಮಂಜು, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎನ್​.ಗೋಪಾಲಮೂರ್ತಿ, ಶ್ರೀನಿವಾಸ್​ ಇದ್ದರು.