ಚಿಂತಾಮಣಿ: (Farmer dies after being electrocuted) ತಾಲೂಕಿನ ಎಸ್.ರಾಗುಟ್ಟಹಳ್ಳಿ ಗ್ರಾಪಂ ವ್ಯಾಪ್ತಿಯ ಬುಜಂಗರಾಯನ ಕೋಟೆ ಮಜರಾ ಗುಡಿವಾಪನಹಳ್ಳಿಯ ರೈತ ಎನ್.ಶಂಕರರೆಡ್ಡಿ ವಿದ್ಯುದಾಘಾತದಿಂದ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ.
ತೋಟದಲ್ಲಿರುವ ದಾಳಿಂಬೆ ಗಿಡಗಳಿಗೆ ನೀರು ಹಾಯಿಸಲು ಶನಿವಾರ ಬೆಳಗ್ಗೆ ಪತ್ನಿ ಕೆ.ಸೌಭಾಗ್ಯ ಜತೆ ಶಂಕರರೆಡ್ಡಿ ಹೋಗಿದ್ದರು ಎನ್ನಲಾಗಿದೆ, ತೋಟಕ್ಕೆ ನೀರು ಹಾಯಿಸಲು ಕೊಳವೆಬಾವಿ ಪ್ಯಾನಲ್ ಬೋರ್ಡ ಬಳಿ ಹೋಗಿ ಸ್ವಿಚ್ ಆನ್ ಮಾಡಿದ ಸಂದರ್ಭದಲ್ಲಿ ಶಾಕ್ ಹೊಡೆದ ಕಿರುಚಿ ಬಿದ್ದಿದ್ದಾರೆ. ಪತ್ನಿ ಸೌಭಾಗ್ಯ ಪಕ್ಕದ ಜಮೀನಿನಲ್ಲಿದ್ದ ರೈತ ಮಹೇಶ್ ಮತ್ತು ಮಲ್ಲಿರೆಡ್ಡಿ ಅವರನ್ನು ಕರೆದು ವಿದ್ಯುತ್ ಸ್ಥಗಿತಗೊಳಿಸಿ ಶಂಕರರೆಡ್ಡಿಯನ್ನು ಬಟ್ಲಹಳ್ಳಿ ಆಸ್ಪತ್ರೆಗೆ, ನಂತರ ನಗರದ ಡೆಕ್ಕನ್ ಆಸ್ಪತ್ರೆಗೆ ದಾಖಲು ಮಾಡುವಷ್ಟರಲ್ಲಿ ಮೃತಪಟ್ಟಿದ್ದಾರೆ.
ಸೌಭಾಗ್ಯ ನೀಡಿದ ದೂರಿನ ಮೇಲೆ ಬಟ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಮರಣೋತ್ತರ ಪರೀೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.