ಬೆಳಗಾವಿ: ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭ ಕೊಡಿಸುವುದಾಗಿ ನಂಬಿಸಿ ಒಟ್ಟು 7.70 ಲಕ್ಷ ರೂ. ಆನ್‌ಲೈನ್ ಮೂಲಕ ತುಂಬಿಸಿಕೊಂಡು ವಂಚಿಸಿರುವ ಬಗ್ಗೆ ರಾಮದುರ್ಗ ತಾಲೂಕಿನ ಮುದೇನಕೊಪ್ಪದ ರೈತ ಮೌನೇಶ್ವರ ಕಂಬಾರ (60) ಜಿಲ್ಲಾ ಸೈಬರ್ ಅಪರಾಧಗಳ ಠಾಣೆಗೆ ದೂರು ಸಲ್ಲಿಸಿದ್ದಾರೆ.
ತಮ್ಮನ್ನು ಬುಲ್ 360 ಕಂಪನಿ ಪ್ರತಿನಿಧಿ ಎಂದು ಪರಿಚಯಿಸಿಕೊಂಡು ವಿವಿಧ ಮೊಬೈಲ್ ಸಂಖ್ಯೆಗಳು ಹಾಗೂ ವಾಟ್ಸಾಪ್ ಮೂಲಕ ಸಂಪರ್ಕಿಸಿದ ಕೆಲವರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಆದಾಯ ಸಿಗುತ್ತದೆ ಎಂದು ನಂಬಿಸಿ ಜ.1ರಿಂದ ಮೇ 25ರವರೆಗೆ ಒಟ್ಟು 7,71,213 ರೂ. ಆನ್‌ಲೈನ್ ಮೂಲಕ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ.
ಒಮ್ಮೆ ಮಾತ್ರ 934 ರೂ. ವಾಪಸ್ಸು ನೀಡಿ ಉಳಿದ ಹಣ ನೀಡಿದರೆ ಇನ್ನಷ್ಟು ಹಣ ಪಾವತಿಸಿ ಎಂದು ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.