Farm equipment stolen from farmhouse
ಚಿಂತಾಮಣಿ: ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯ ನಿವಾಸಿ ಶ್ರೀನಿವಾಸರೆಡ್ಡಿ ಎಂಬುವರಿಗೆ ಸೇರಿದ ತೋಟದ ಮನೆಯಲ್ಲಿಟ್ಟಿದ್ದ ಕೃಷಿ ಉಪಕರಣಗಳನ್ನು ಕಳವು ಮಾಡಲಾಗಿದೆ.
ಚಿಂತಾಮಣಿ-&ಮದನಪಲ್ಲಿ ರಾಜ್ಯ ಹೆದ್ದಾರಿಯಲ್ಲಿರುವ ನಾಚಗಡ್ಡ ಗ್ರಾಮದಲ್ಲಿ ಶ್ರೀನಿವಾಸರೆಡ್ಡಿ ತೋಟವಿದ್ದು, ಅಲ್ಲಿಯ ಮನೆಗೆ ಶುಕ್ರವಾರ ರಾತ್ರಿ ಕಳ್ಳರು ಮನೆಯ ಕಿಟಕಿ ಬಾಗಿಲುಗಳನ್ನು ಮುರಿದು ಕೃಷಿ ಉಪಕರಣಗಳು, ತಾಮ್ರದ ಹಂಡೆಯನ್ನು ದೋಚಿದ್ದಾರೆ. ಶನಿವಾರ ಬೆಳಗ್ಗೆ ಮಾಲೀಕ ತೋಟಕ್ಕೆ ಹೋದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.
ಗೌನಪಲ್ಲಿ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸ್ಥಳ ಪರಿಶೀಲಿಸಿ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.