ಚೆನ್ನೂರ(ಜೆ) ಗ್ರಾಮದಲ್ಲಿ ಮಸೀದಿಯನ್ನು ಶ್ರೀ ನಿಜಲಿಂಗ ಸ್ವಾಮೀಜಿ ಶುಕ್ರವಾರ ಉದ್ಘಾಟಿಸಿದರು. ಶ್ರೀನಿವಾಸರಡ್ಡಿ ಪಾಟೀಲ್​ ಚೆನ್ನೂರ, ಮೌಲಾಸಾಬ್​, ಸೂಗೂರೆಡ್ಡಿ ಪೊಲೀಸ್​ ಪಾಟೀಲ್​, ಶಿವಣ್ಣ ಪೂಜಾರಿ, ಬಸವರಾಜ ಪಾಟೀಲ್​, ನಿಂಗಣ್ಣ ದಿನ್ನಿ, ಮರಿಗೌಡ, ಬಸಪ್ಪ ಪೂಜಾರಿ ಇತರರಿದ್ದರು. 
ರಾಜ್ಯ

ಪಟ್ಟಭದ್ರ ಶಕ್ತಿಗಳಿಂದ ಸುಳ್ಳು ಸಂದೇಶ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ನಿಜಲಿಂಗ ಸ್ವಾಮೀಜಿ ಕಳವಳ
  • ಚೆನ್ನೂರ(ಜೆ)ದಲ್ಲಿ ಮಸೀದಿ ಉದ್ಘಾಟನೆ
ವಡಗೇರಾ: ಪಟ್ಟಭದ್ರ ಶಕ್ತಿಗಳು ಸಮಾಜದಲ್ಲಿ ಸುಳ್ಳು ಸಂದೇಶ ಹರಡುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಸದೃಢ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಾಮರಸ್ಯದಿಂದ ಬಾಳಬೇಕು ಎಂದು ದೇವರ ಗುಂಡಗುರ್ತಿ ಶ್ರೀ ಮೈಲಾರಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿಜಲಿಂಗ ಸ್ವಾಮೀಜಿ ನುಡಿದರು.
ಚೆನ್ನೂರ(ಜೆ) ಗ್ರಾಮದಲ್ಲಿ ಶುಕ್ರವಾರ ಮಸೀದಿ ಉದ್ಘಾಟಿಸಿ ಮಾತನಾಡಿದ ಅವರು, ಊರಲ್ಲಿ ಎಲ್ಲರೂ ಒಗ್ಗಟ್ಟಾಗಿ ಮೊಹರಂ ಹಬ್ಬ ಆಚರಿಸುವ ಮೂಲಕ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಬೇಕು ಎಂದರು.
ಜಿಪಂ ಮಾಜಿ ಸದಸ್ಯ ಶ್ರೀನಿವಾಸರಡ್ಡಿ ಪಾಟೀಲ್​ ಚೆನ್ನೂರ ಮಾತನಾಡಿ, ಸರ್ವ ಧರ್ಮಗಳು ಶಾಂತಿ ಮತ್ತು ಸಹಬಾಳ್ವೆ, ಮಾನವೀಯ ಸಂದೇಶಗಳನ್ನು ನೀಡಿವೆ ಎಂದು ಹೇಳಿದರು.
ಪ್ರಮುಖರಾದ ಮೌಲಾಸಾಬ್​, ಸೂಗೂರೆಡ್ಡಿ ಪೊಲೀಸ್​ ಪಾಟೀಲ್​, ಶಿವಣ್ಣ ಪೂಜಾರಿ, ಬಸವರಾಜ ಪಾಟೀಲ್​, ನಿಂಗಣ್ಣ ದಿನ್ನಿ, ಮರಿಗೌಡ, ಬಸಪ್ಪ ಪೂಜಾರಿ, ಶರಣಪ್ಪ ದಾಳಿ, ದೇವಪ್ಪ ಅಂಬಿಗೇರ, ಮರೆಪ್ಪ ಮಡಿವಾಳ ಇತರರಿದ್ದರು.