ನಕಲಿ ಕಂಪನಿಯ ಉತ್ಪನ್ನಗಳು. 
ರಾಜ್ಯ

ನಕಲಿ ಆಯಿಲ್​ ತಯಾರಿಸುತ್ತಿದ್ದ ಟಕ ಪತ್ತೆ

ಚಿಕ್ಕಬಳ್ಳಾಪುರ: ಸರ್ಕಾರದ ಸಬ್ಸಿಡಿ ದರದಲ್ಲಿ ಕೃಷಿಗೆ ಪೂರೈಕೆಯಾಗುವ ಯೂರಿಯಾ ಗೊಬ್ಬರ ಬಳಸಿ ನಕಲಿ ಆಯಿಲ್​ ತಯಾರಿಸುತ್ತಿದ್ದ ಟಕವನ್ನು ಪತ್ತೆ ಹಚ್ಚಿರುವ ಅಧಿಕಾರಿಗಳು, ಕೋಟ್ಯಂತರ ರೂ.ಮೌಲ್ಯದ ಮಾಲು ವಶಪಡಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಸಮೀಪದ ಟಕದಲ್ಲಿ ಅಕ್ರಮವಾಗಿ ದಾಸ್ತಾನಿಟ್ಟಿದ್ದ ರಸಗೊಬ್ಬರ ಮೂಟೆಗಳು.
ಚದಲಪುರ ಹಾಗೂ ಕೊಂಡೇನಹಳ್ಳಿ ಮಾರ್ಗದ ರಸ್ತೆಗೆ ಹೊಂದಿಕೊಂಡಿರುವ ಟಕದಲ್ಲಿ ಕೃಷಿ ಬಳಕೆಯ 260 ಯೂರಿಯಾ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನಿಟ್ಟುಕೊಳ್ಳಲಾಗಿತ್ತು. ಇದನ್ನು ಬಳಸಿಕೊಂಡು ನಕಲಿ ಆಯಿಲ್​ ತಯಾರಿಸಲಾಗುತ್ತಿತ್ತು. ಇದರ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕುಶಾಲ್​ ಚೌಕ್ಸೆ, ಉಪ ವಿಭಾಗಾಧಿಕಾರಿ ಡಿ.ಎಚ್​.ಅಶ್ವಿನ್​, ತಹಸೀಲ್ದಾರ್​ ರಶ್ಮಿರನ್ನೊಳಗೊಂಡ ಜಾಗೃತ ದಳ ತಂಡವು ಕಾರ್ಯಾಚರಣೆ ಕೈಗೊಂಡಿದೆ.

ಚಿಕ್ಕಬಳ್ಳಾಪುರ ತಾಲೂಕಿನ ಚದಲಪುರ ಬಳಿ ನಕಲಿ ಆಯಿಲ್​ ಉತ್ಪನ್ನ ತಯಾರಿಕೆ ಟಕದ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ದಾಳಿ ನಡೆಸಿ ಮಾಲನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ನಡೆಸಿ, ಕ್ರಮ ಕೈಗೊಳ್ಳಲಾಗುವುದು.

— ಕುಶಾಲ್​ ಚೌಕ್ಸೆ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ
ಅನ್ಯ ರಾಜ್ಯದ ಮಾಲು: ರಾಜಸ್ಥಾನ, ಮಧ್ಯ ಪ್ರದೇಶ, ಗುಜರಾತಿನ ಖ್ಯಾತ ರಸಗೊಬ್ಬರ ಮಾರಾಟದ ಕಂಪನಿಗಳಿಗೆ ಸಬ್ಸಿಡಿಯಡಿ ಪೂರೈಕೆಯಾದ ರಸಗೊಬ್ಬರದ ಮೂಟೆಗಳನ್ನು, ವಾಹನ ತಯಾರಿಕಾ ಕಂಪನಿಗಳ ಲೇಬಲ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲ್ಲಿನ ಉಮೇಶ್​ ಎಂಬುವವರ ಜಾಗದಲ್ಲಿ ರಾಜಸ್ಥಾನದ ಮೂಲದ ದಂಧೆಕೋರರು ಟಕ ಸ್ಥಾಪಿಸಿದ್ದು ಇದಕ್ಕೆ ಯಾವುದೇ ಪರವಾನಗಿ ಪಡೆದುಕೊಂಡಿರಲಿಲ್ಲ. ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ. ನಂದಿ ಗಿರಿಧಾಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ರ್ಕಾರದ ಸಬ್ಸಿಡಿಯಡಿ ಪೂರೈಕೆಯಾಗುತ್ತಿದ್ದ ರಸಗೊಬ್ಬರವನ್ನು ದಾಸ್ತಾನಿಟ್ಟುಕೊಳ್ಳಲು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಆದರೆ, ಕಾರ್ಯಾಚರಣೆಯಲ್ಲಿ ಪತ್ತೆಯಾದ ಟಕವು ಪರವಾನಗಿ ಪಡೆಯದೇ ಕಾರ್ಯ ನಿರ್ವಹಿಸುತ್ತಿರುವುದು ತಿಳಿದು ಬಂದಿದೆ.

— ಡಿ.ಎಚ್​.ಅಶ್ವಿನ್​ ಉಪ ವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ
ನಕಲಿ ದಂಧೆ: ರಾಜಾರೋಷವಾಗಿ ವಾಹನಗಳಿಗೆ ಬಳಸಲು ನಕಲಿ ಆಯಿಲ್​ ತಯಾರಿಸುತ್ತಿದ್ದು, ಇದನ್ನು ಬಳಸುವುದರಿಂದ ಇಂಧನ ಕಾರ್ಯಕ್ಷಮತೆ ಣವಾಗಿ ವಾಹನ ನಿಷ್ಕಿ$ಯಗೊಳ್ಳುವ ಸಾಧ್ಯತೆ ಹೆಚ್ಚು. ಆದರೂ ಕಡಿಮೆ ದರದಲ್ಲಿ ಪ್ರತಿಷ್ಠಿತ ಕಂಪನಿಗಳ ಉತ್ಪನ್ನ ಎಂಬುದಾಗಿ ಬಿಂಬಿಸಿ ಮಾರಲಾಗುತ್ತಿತ್ತು ಎನ್ನಲಾಗಿದೆ. ಪ್ರಸ್ತುತ ಜಾಗದ ಮಾಲೀಕರ ವಿಚಾರಣೆ ನಡೆಸಿದ್ದು ರಾಜಸ್ಥಾನ ಮೂಲದವರು ಬಾಡಿಗೆಗೆ ಪಡೆದು, ಟಕವನ್ನು ಸ್ಥಾಪಿಸಿದ್ದರು ಎನ್ನುವುದು ತಿಳಿದು ಬಂದಿದೆ.