Online Harassment Bengaluru
- 33 ವರ್ಷದ ಮಹಿಳೆಯ ಫೋಟೋ ಬಳಸಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿದ ಕಿರಾತಕರು
- ಮಹಿಳೆಗೆ ಲೈಂಗಿಕ ಕಾರ್ಯಕರ್ತೆ ಎನ್ನುವ ಅರ್ಥದಲ್ಲಿ ನಿಂದಿಸಿದ ದುಷ್ಕರ್ಮಿಗಳು
- ಜಾಲಹಳ್ಳಿ ಪೊಲೀಸರಿಗೆ ಈ ವಿರುದ್ಧ ದೂರು ಕೊಟ್ಟ 33 ವರ್ಷದ ನೊಂದ ಮಹಿಳೆ
ಬೆಂಗಳೂರು: ತಮ್ಮದೇ ಹೆಸರಿನ ಪ್ರೊಫೈಲ್ ಹಾಗೂ ಫೋಟೋ ಬಳಕೆ ಮಾಡಿಕೊಂಡು ಇನ್ಸ್ಟಾಗ್ರಾಮ್ ನಕಲಿ ಖಾತೆ ಸೃಷ್ಟಿಸಿ(Online Harassment Bengaluru), ಕಿರುಕುಳ ನೀಡುತ್ತಿದ್ದಾರೆ ಎಂದು 33 ವರ್ಷದ ಬೆಂಗಳೂರಿನ ಜಾಲಹಳ್ಳಿಯ ಮಹಿಳಾ ನಿವಾಸಿಯೊಬ್ಬರು ದೂರು ಕೊಟ್ಟಿದ್ದಾರೆ. ಸದ್ಯ ಪೊಲೀಸರು ದೂರು ದಾಖಲಿಸಿದ್ದು ತನಿಖೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ಲೈಂಗಿಕ ಕಾರ್ತಕರ್ತೆ ಎಂದು ನಿಂದನೆ
ಜೂನ್ 3ರಂದಯ ತಮ್ಮ ಫೋಟೋವುಳ್ಳ ನಕಲಿ ಪ್ರೊಫೈಲ್ನಿಂದ ಮೆಸೇಜ್ ಬಂದಿದೆ. ಇದರ ಮೂಲಕ ಮೆಸೇಜ್ ಮಾಡಿದ ದುಷ್ಕರ್ಮಿಗಳು ಲೈಂಗಿಕ ಕಾರ್ಯಕರ್ತೆ ಎಂದು ಉಲ್ಲೇಖಿಸಿದ್ದಾರೆ. ಇದರಿಂದ ಮಾನಸಿಕವಾಗಿ ನೊಂದು, ಮುಜುಗರಕ್ಕೆ ಒಳಗಾಗಿದ್ದೇನೆ ಎಂದು ದೂರು ನೀಡಿದ್ದಾರೆ.
ತಪ್ಪಿತಸ್ಥರ ವಿರುದ್ಧ ದೂರು
ಇಷ್ಟೇ ಅಲ್ಲದೆ ನನ್ನ ಪತಿ ಹಾಗೂ ಸಹೋದರನ ಮೊಬೈಲ್ ಸಂಖ್ಯೆಯನ್ನು ನಕಲಿ ಪ್ರೊಫೈಲ್ನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ತೀರ ಬೇಸರವಾಗಿದೆ. ಮಾನಸಿಕವಾಗಿ ನೊಂದಿದ್ದೇನೆ ಎಂದು FIRನಲ್ಲಿ ಉಲ್ಲೇಖಿಸಿದ್ದಾರೆ. ಮುಂದುವರೆದು, ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಕಲಿ ಇನ್ಸ್ಟಾಗ್ರಾಮ್ ಖಾತೆ ಡಿಲೀಟ್ ಮಾಡುವಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮಹಿಳೆ ಕೊಟ್ಟ ದೂರಿನ ಮೇರೆಗೆ ಜೂನ್4ರಂದು ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡಿದ್ದಾರೆ. ಈಗಾಗಲೇ ದುಷ್ಕರ್ಮಿಗಳ ಪತ್ತೆ ಹಚ್ಚುವ ಕಾರ್ಯ ಮುಂದುವರೆಸಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್)