ವೃಷಭಾವತಿ ನದಿಯಲ್ಲಿ ಪತ್ತೆಯಾದ ನಕಲಿ ನೋಟುಗಳು. 
ರಾಜ್ಯ

ವೃಷಭಾವತಿ ನದಿಯಲ್ಲಿ ನಕಲಿ ನೋಟುಗಳು ಪತ್ತೆ!

ತಿಮ್ಮೇಗೌಡನದೊಡ್ಡಿಯಿಂದ ತುಸು ದೂರದಲ್ಲಿರುವ ವೃಷಭಾವತಿ ನದಿಯಲ್ಲಿ ಬುಧವಾರ ನಕಲಿ ನೋಟುಗಳು ಪತ್ತೆಯಾಗಿವೆ.

ನದಿಯಲ್ಲಿ 500 ರೂ. ಮುಖ ಬೆಲೆಯ ನೋಟುಗಳ ಬಂಡಲ್ಗಳನ್ನು ಬಿಸಾಡಲಾಗಿತ್ತು. ಇದನ್ನು ನೋಡಿದ ಜನರು ಕೆಲಕಾಲ ನಿಜವಾದ ನೋಟುಗಳೆಂದು ಭಾವಿಸಿ ಅಚ್ಚರಿಗೊಂಡಿದ್ದರು.
ವಿಷಯ ತಿಳಿದು ಸ್ಥಳಕ್ಕಾಗಮಿಸಿ ಬಿಡದಿ ಪೊಲೀಸರು ನೋಟುಗಳ ಕಂತೆಯನ್ನು ನದಿಯಿಂದ ಹೊರ ತೆಗೆದು ಪರಿಶೀಲಿಸಿದಾಗ ನಕಲಿ ನೋಟುಗಳು ಎಂದು ತಿಳಿದು ಬಂದಿದೆ. ನೋಟುಗಳ ಮೇಲೆ ಚಿಲ್ಡ ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಲಾಗಿದ್ದು, ಮಕ್ಕಳ ಶಾಲಾ ಪ್ರಾಜೆಕ್ಟ್‌ಗಳಿಗೆ ಬಳಸುವ ಆಟಿಕೆ ನೋಟುಗಳು ಎಂದು ಕೂಡ ಬರೆಯಲಾಗಿತ್ತು.