6.71 ಲಕ್ಷ ಮೌಲ್ಯದ ನಕಲಿ ಸಿಗರೇಟ್ ವಶ Fake cigarettes
ಚಿಂತಾಮಣಿ: ನಗರದ ಚೇಳೂರು ರಸ್ತೆಯಲ್ಲಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ 6,71,484 ರೂ. ಮೌಲ್ಯದ ಐಟಿಸಿ ನಕಲಿ ಕಂಪನಿ ಸಿಗರೇಟ್ ಪ್ಯಾಕೆಟ್ ವಶಕ್ಕೆ ಪಡೆದು, ಮೂವರು ಆರೋಪಿಗಳನ್ನು ನಗರಠಾಣೆ ಪೊಲೀಸರು ಬಂಧಿಸಿದ್ದಾರೆ. Fake cigarettes
ಮಂಡ್ಯ ಜಿಲ್ಲೆಯ ನಂಬಿನಾಯಕನಹಳ್ಳಿಯ ದರ್ಶನ್ (26), ಕೆ.ಆರ್.ಪೇಟೆ ತಾಲೂಕಿನ ನಾಟನಹಳ್ಳಿಯ ಕಾರ್ತಿಕ್ (26) ಮತ್ತು ತಮಿಳುನಾಡು ನಾಮಕಲ್ ಜಿಲ್ಲೆಯ ದೇವನ ಕುರ್ಚಿಯ ಮುಪ್ಪಟ್ಟಮ್ ಪಾಳ್ಯದ ಗೋಪಾಲ್ (38) ಬಂಧಿತರು.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಕುಶಲ್ ಚೌಕ್ಸೆ ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪ ವಿಭಾಗದ ಡಿವೈಎಸ್ಪಿ ಮುರಳೀಧರ್ ಮುಂದಾಳತ್ವದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ವಿಜಿಕುಮಾರ್, ಪಿಎಸ್ಐ ರಮೇಶ್ ಸಿಬ್ಬಂದಿ ಮಂಜುನಾಥ, ಮುನಿರಾಜ, ಶ್ರೀನಿವಾಸ, ಲೋಕೇಶ್, ಗಿರೀಶ್, ಅನೀಲ್ ಕುಮಾರ್, ಸುರೇಶ್ ತಂಡವು ದಾಳಿ ನಡೆಸಿದೆ. ಕೃತ್ಯಕ್ಕೆ ಉಪಯೋಗಿಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.