ವಿಜಯಪುರದ ಶ್ರೀ ಸುಬ್ಬಮ್ಮ ಚೆನ್ನಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಆಷಾಢ ಶಾಪಿಂಗ್ ಆಹಾರ ಹಾಗೂ ಮಾವು ಮೇಳಕ್ಕೆ ಪುರಸಭೆ ಅಧ್ಯೆ ಭವ್ಯ ಮಹೇಶ್ ಚಾಲನೆ ನೀಡಿದರು. ಇನ್ನರ್ವೀಲ್ ಕ್ಲಬ್ ಮಾಜಿ ಅಧ್ಯೆ ಪ್ರೀತಿ ಮಹೇಶ್
ವಿಜಯಪುರ : ಮಹಿಳೆಯರು ಕರಕುಶಲ, ಗೃಹಬಳಕೆ ವಸ್ತು ಹಾಗೂ ವೈವಿಧ್ಯಮ ಖ್ಯಾದ್ಯಗಳನ್ನು ತಯಾರಿಸಿ ಮೇಳಗಳಲ್ಲಿ ಉತ್ಪನ್ನಗಳಿಗೆ ಬೇಡಿಕೆ ಸೃಷ್ಟಿಸಿಕೊಳ್ಳಬೇಕು, ಸ್ವಾವಲಂಬಿ ಬದಕು ಕಟ್ಟಿಕೊಳ್ಳಬೇಕು ಎಂದು ಪುರಸಭೆ ಅಧ್ಯೆ ಭವ್ಯಾ ಮಹೇಶ್ ಕರೆ ನೀಡಿದರು.
ಪಟ್ಟಣದ ಸುಬ್ಬಮ್ಮ ಚೆನ್ನಪ್ಪ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ "ಆಷಾಢ ಶಾಪಿಂಗ್, ಆಹಾರ ಹಾಗೂ ಮಾವು ಮೇಳ ಮತ್ತು ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಉತ್ಪನ್ನಗಳಿಗೆ ಮಾರುಕಟ್ಟೆ ಸಿಗಲಿಲ್ಲವೆಂದು ಯಾರೂ ಚಿಂತಿಸಬೇಕಿಲ್ಲ. ಸಂ&ಸಂಸ್ಥೆಗಳು ಆಯೋಜಿಸುವ ಮೇಳಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ನೋಂದಾಯಿಸಿಕೊಳ್ಳುವ ಮೂಲಕ ಉತ್ಪನ್ನಗಳಿಗೆ ಮಾರುಕಟ್ಟೆ ಪಡೆಯಬೇಕು ಎಂದು ಸಲಹೆ ನೀಡಿದರು.
ಮೇಳದ ಆಯೋಜಕ ಗುರುರಾಜ್ ಮಾತನಾಡಿ, ಸಾರ್ವಜನಿಕರು ಹತ್ತಾರು ಕಡೆ ಅಲೆದಾಡಿ ಖರೀದಿಸಬೇಕಾದ ವೈವಿಧ್ಯಮಯ ವಸ್ತುಗಳು ಪ್ರದರ್ಶನದಲ್ಲಿ ಒಂದೇ ಸೂರಿನಡಿ ಲಭ್ಯವಾಗುತ್ತವೆ. ವಿಶೇಷವಾಗಿ, ಯಾವುದೇ ಕೃತಕ ಬಣ್ಣ, ರಾಸಾಯನಿಕ ಬಳಸದೆ ಸಿದ್ಧಪಡಿಸಿದ ತಿಂಡಿ&ತಿನಿಸು, ಕರಕುಶಲ ವಸ್ತುಗಳು, ಮಗ್ಗದ ಸೀರೆಗಳು, ಮಕ್ಕಳ ಆಟಿಕೆಗಳು ಇಲ್ಲಿ ದೊರೆಯಲಿವೆ. ಸಾರ್ವಜನಿಕರು ಮೇಳಕ್ಕೆ ಭೇಟಿ ನೀಡಿ, ಖರೀದಿಸುವುದರಿಂದ ಸ್ವಂತ ಉದ್ಯೋಗ ನೆಚ್ಚಿಕೊಂಡಿರುವ ಮಹಿಳೆಯರಿಗೆ ಹಾಗೂ ಸ್ತ್ರೀ ಶಕ್ತಿ, ಸ್ವ&ಸಹಾಯ ಸಂಗಳ ಶ್ರಮಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಶನಿವಾರ, ಭಾನುವಾರವೂ ಮೇಳ ನಡೆಯಲಿದೆ. ಮಾವಿನ ಮೇಳದಲ್ಲಿ ವಿವಿಧ ತಳಿಯ, ನೈಸರ್ಗಿಕವಾಗಿ ಹಣ್ಣಾದ ಮಾವಿನಹಣ್ಣುಗಳು ಹಾಗೂ ಉತ್ಪನ್ನಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಮೊದಲ ದಿನವೇ ನೂರಾರು ಸಾರ್ವಜನಿಕರು ಹಾಗೂ ಮಹಿಳೆಯರು ಆಗಮಿಸಿ ಮಾವು ಖರೀದಿಸಿದರು.
ಮಂಡ್ಯ, ಮೈಸೂರು, ಬೆಂಗಳೂರು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದ 60ಕ್ಕೂ ಹೆಚ್ಚು ಮಂದಿ ಮಳಿಗೆಗಳನ್ನು ತೆರೆದಿದ್ದಾರೆ.