ಒಂದೇ ವೇದಿಕೆಯಲ್ಲಿ ಬಣ ಪ್ರದರ್ಶನ Faction
ಮುಳಬಾಗಿಲು: ಪ್ರತಿಯೊಬ್ಬರೂ ಒಗ್ಗಟ್ಟಾಗಿ ಹಬ್ಬ ಮಾಡಬೇಕು. ರಾಜಕೀಯ ವಿಚಾರ ಬಂದಾಗಲೂ ಎಲ್ಲರೂ ಒಗ್ಗಟ್ಟಾಗಿ ಜೆಡಿಎಸ್ ಪರ ನಿಲ್ಲಬೇಕು ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಕಾಡೇನಹಳ್ಳಿ ಕೆ.ಎನ್.ನಾಗರಾಜ್ ಹೇಳಿದರು.Faction
ತಾಲೂಕಿನ ಕನ್ನಸಂದ್ರ ಗ್ರಾಮದಲ್ಲಿ ಇತ್ತೀಚಿಗೆ ಹಮ್ಮಿಕೊಂಡಿದ್ದ ಸತ್ಯಮ್ಮ, ಗಂಗಮ್ಮ ಹಾಗೂ ಯಲ್ಲಮ್ಮ ದೇವರ ಕರಗ ಮಹೋತ್ಸವದಲ್ಲಿ ಮಾತನಾಡಿ, ಚುನಾವಣೆಗಳಲ್ಲಿ ಕನ್ನಸಂದ್ರ ಗ್ರಾಮ ಜೆಡಿಎಸ್ ಕೈ ಹಿಡಿದಿದೆ. ಮುಂದೆಯೂ ಸಹ ಜೆಡಿಎಸ್ ಪರವಾಗಿರುತ್ತದೆ ಎಂಬ ವಿಶ್ವಾಸ ಇದೆ ಎಂದರು.
ಕಾಡೇನಹಳ್ಳಿ ನಾಗರಾಜ್ ಜತೆ ದಳಪತಿಗಳಾದ ಕೋಮುಲ್ ನಿರ್ದೇಶಕ ಬಿ.ವಿ.ಸಾಮೇಗೌಡ, ಜೆಡಿಎಸ್ ವಕ್ತಾರ ವಕೀಲ ಎಂ.ಎಸ್.ಶ್ರೀನಿವಾಸರೆಡ್ಡಿ, ಜೆಡಿಎಸ್ ಮುಖಂಡರಾದ ಎಂ.ಗೊಲ್ಲಹಳ್ಳಿ ಪ್ರಭಾಕರ್, ಕಾಡೇನಹಳ್ಳಿ ಅಶೋಕ್, ಗ್ರಾಮ ಪಂಚಾಯಿತಿ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷ ಶಂಕರ್, ಆಲಂಗೂರು ಭೋಗೇಶ್ಗೌಡ, ಪೆದ್ದೂರು ವರದಪ್ಪ, ಗೊಲ್ಲಹಳ್ಳಿ ಶ್ರೀನಾಥ್, ಗ್ರಾಮದ ಮುಖಂಡರಾದ ಚಿನ್ನಣ್ಣ ,ನಾಗರಾಜ್, ಘಂಟಪ್ಪ, ಶ್ರೀರಾಮ ರೆಡ್ಡಿ , ವೆಂಕಟರಾಮ್, ಬಾಬು ಇದ್ದರು.
ಕಾಡೇನಹಳ್ಳಿ ನಾಗರಾಜ್ ಬಣದ ಒಂದು ಗುಂಪು ಗ್ರಾಮಕ್ಕೆ ಬಂದು ಹೋದಮೇಲೆ ಸಂಜೆ 8 ಗಂಟೆಗೆ ರಸಮಂಜರಿ ಕಾರ್ಯಕ್ರಮಕ್ಕೆ ಶಾಸಕ ಸಮೃದ್ಧಿ ಮಂಜುನಾಥ್ ಗುಂಪಿನಲ್ಲಿ ಗುರುತಿಸಿಕೊಂಡಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ನಲ್ಲೂರು ರಘುಪತಿ ರೆಡ್ಡಿ, ಕೋಲಾರ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಬಂಡಹಳ್ಳಿ ಲಕ್ಷಿ$್ಮನಾರಾಯಣ, ಗೊಲ್ಲಹಳ್ಳಿ ಜಗದೀಶ್, ನಗವಾರ ಎನ್.ಆರ್.ಸತ್ಯಣ್ಣ, ಎಮ್ಮೆನತ್ತ ರೆಡ್ಡಪ್ಪರೆಡ್ಡಿ, ರಘು ಪ್ರತ್ಯೇಕವಾಗಿ ಪಾಲ್ಗೊಂಡಿದ್ದರಿಂದ ಜೆಡಿಎಸ್ನಲ್ಲಿ ಗುಂಪುಗಾರಿಕೆ ಇರುವುದು ಬಹಿರಂಗವಾಗಿದೆ.
ದಳದ ಎರಡು ಬಣಗಳು ಬಂದು ಹೋದ ನಂತರ ಕಾಂಗ್ರೆಸ್ ಮುಖಂಡ ಎಸ್.ವೈ.ಶಾಂಭಯ್ಯ ಭೇಟಿ ನೀಡಿದರು.