Facility within a week if applied
ಬುಕ್ಕಾಪಟ್ಟಣ: ವಿಧವಾ ವೇತನ, ವೃದ್ಧಾಪ್ಯ ವೇತನ ಹಾಗೂ ವಿಶೇಷ ವೇತನಗಳಿಗೆ ಅರ್ಜಿ ಸಲ್ಲಿಸುವವರು ಕುಂದು&ಕೊರತೆಗಳ ಸಭೆಗೆ ಹಾಜರಾಗಿ ಅರ್ಜಿ ನೀಡಿದಲ್ಲಿ ವಾರದೊಳಗೆ ಮಂಜೂರು ಪತ್ರ ನೀಡಲಾಗುವುದು ಎಂದು ಸಾರ್ವಜನಿಕರಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಮಾಹಿತಿ ನೀಡಿದರು. ಶಿರಾ ತಾಲೂಕು ಕಚೇರಿಯಲ್ಲಿ ಮಂಗಳವಾರ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳ ಉಪಸ್ಥಿತಿಯಲ್ಲಿ ಬುಕ್ಕಾಪಟ್ಟಣ ಹೋಬಳಿಯ ರೈತರು ಹಾಗೂ ಸಾರ್ವಜನಿಕರ ಜನಸಂಪರ್ಕ ಸಭೆ ನಡೆಸಿ, ರೈತರು ಮತ್ತು ಸಾರ್ವಜನಿಕರ ಕುಂದು&ಕೊರತೆ ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿದರು.
ತಹಸೀಲ್ದಾರ್ ಆನಂದ್ ಕುಮಾರ್, ತಾಪಂ ಇಒ ಹರೀಶ್, ಬುಕ್ಕಾಪಟ್ಟಣ ಪ್ರಭಾಕರ ಕಂದಾಯ ಅಧಿಕಾರಿ ಪವನ್, ಮುಖಂಡರಾದ ಹೊಸಪಾಳ್ಯ ಸತ್ಯನಾರಾಯಣ, ಬಿ.ಜೆ.ಶಾಂತಕುಮಾರ್, ಮುದ್ದು ಗಣೇಶ್, ಮಾದೇನಹಳ್ಳಿ ಲೋಕೇಶ್ ಮತ್ತಿತರರು ಇದ್ದರು.