ಮಮದಾಪುರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀೆ ಪೂರ್ವ ಸಿದ್ಧತೆ ಕಾರ್ಯಕ್ರಮದಲ್ಲಿ ತಾಪಂ ಇಒ ಪರಶುರಾಮ ಸ್ತೆ ಮಾತನಾಡಿದರು. ಸಿ.ಎಂ.ಪಟಾತ್, ಎಂ.ಬಿ.ಹಾದಿಮನಿ. ಈರಣ್ಣ ಕಮತ ಇತರರಿದ್ದರು.
ಮಮದಾಪುರ: ಪರೀೆ ದಿನಗಳು ಹತ್ತಿರವಾಗುತ್ತಿವೆ ಎಂದು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಪರೀೆ ಎದುರಿಸುವ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಾಪಂ ಇಒ ಪರಶುರಾಮ ಸ್ತೆ ಕಿವಿಮಾತು ಹೇಳಿದರು.
ಗ್ರಾಮದ ಅನುದಾನಿತ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಪರೀೆ ಪೂರ್ವ ತಯಾರಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಲಿತಾಂಶ ಉತ್ತಮಗೊಳಿಸುವ ನಿಟ್ಟಿನಲ್ಲಿ ಶಾಲಾವಧಿ ಮುಗಿದ ಬಳಿಕವೂ ಗ್ರಾಮ ಪಂಚಾಯಿತಿ ಸಹಕಾರದೊಂದಿಗೆ ಶಿಕ್ಷಕರು ಕಳೆದೊಂದು ತಿಂಗಳಿಂದ ನಿತ್ಯ ಸಂಜೆ 6ರಿಂದ 8 ಗಂಟೆವರೆಗೆ "ಓದುವ ಮನೆ' ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದ್ದಾರೆ. ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಪಿಡಿಒ ವಿನಾಯಕ ಮಾಳಿ ಮಾತನಾಡಿ, ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಗೌರವಿಸಲಾಗುವುದು ಎಂದರು.
ಗ್ರಾಮೀಣ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಈರಣ್ಣ ಜನ್ಮಟ್ಟಿ, ಮುಖ್ಯಶಿಕ ಸಿ.ಎಂ.ಪಟಾತ್, ಎಂ.ಬಿ.ಹಾದಿಮನಿ, ಈರಣ್ಣ ಕಮತ, ಜಿ.ಎನ್.ಹುಣಸಿಗಿಡದ, ಎಂ.ವಿ.ಕಡಕೋಳ, ಸುಜಾತಾ ಕೆಂಚನ್ನವರ, ಎಂ.ಎ.ಪಟ್ಟಣ, ಎಸ್.ಕೆ.ಕಪರಟ್ಟಿ ಇತರರಿದ್ದರು.