ಮಾಜಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು.
ಉಡುಪಿ: ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ವಿಶ್ವಕರ್ಮ ಸಹಕಾರ ಬ್ಯಾಂಕ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸತ ವಿಷ್ಣುಮೂರ್ತಿ ಫ್ರೆಂಡ್ಸ್ ದೊಡ್ಡಣ್ಣಗುಡ್ಡೆ, ವಿಷ್ಣುಮೂರ್ತಿ ಮಹಿಳಾ ಘಟಕ, ನಾಥ ಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಸಹಯೋಗದಲ್ಲಿ ಸಿದ್ದ ಕಣ್ಣಿನ ಹನಿ ವಿತರಣಾ ಕಾರ್ಯಕ್ರಮ ದೊಡ್ಡಣ್ಣಗುಡ್ಡೆ ಸಾರ್ವಜನಿಕ ಆಟದ ಮೈದಾನದ ವಠಾರದಲ್ಲಿ ನಡೆಯಿತು.
ಮಾಜಿ ಶಾಸಕ ರಘುಪತಿ ಭಟ್ ಉದ್ಘಾಟಿಸಿದರು. ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ, ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ , ವಿಶ್ವಕರ್ಮ ಸಹಕಾರಿ ಬ್ಯಾಂಕ್ ನಿರ್ದೇಶಕ ಜಗದೀಶ್ ಆಚಾರ್ಯ, ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ ಅಧ್ಯೆ ಅನುಪಮಾ ಎಂ. ಜೋಗಿ, ಜೋಗಿ ಸಮಾಜ ಸೇವಾ ಸಮಿತಿ ಗೌರವಾಧ್ಯಕ್ಷ ಹರಿಶ್ಚಂದ್ರ ಜೋಗಿ, ಕುಂದಾಪುರ ಜೋಗಿ ಸಮಾಜ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಎಚ್.ಎಸ್, ಸಿದ್ದ ಕಣ್ಣಿನ ಹನಿ ಕಾರ್ಯಕ್ರಮದ ನಿರ್ವಾಹಕ ಶಿವಕುಮಾರ್ ಮತ್ತು ನವೀನ್ ಕುಮಾರ್, ವಿಷ್ಣುಮೂರ್ತಿ ಫ್ರೆಂಡ್ಸ್ ಅಧ್ಯಕ್ಷ ರಾಧಾಕೃಷ್ಣನ್ ಉಪಸ್ಥಿತರಿದ್ದರು.