ಚಿಂತಾಮಣಿ ನಗರದಲ್ಲಿ ಜಿಇಎಫ್ ಕಣ್ಣಿನ ಆಸ್ಪತ್ರೆಯಿಂದ ಜಾಗೃತಿ ಜಾಥಾ ನಡೆಯಿತು.
ಚಿಂತಾಮಣಿ: ಸಾವಿನ ನಂತರವೂ ಮತ್ತೊಬ್ಬರ ಬಾಳಿಗೆ ಬೆಳಕಾಗುವ ಪವಿತ್ರ ಕಾರ್ಯವೇ ನೇತ್ರದಾನ ಎಂದು ಅರಿವು ಮೂಡಿಸುವ ಉದ್ದೇಶದಿಂದ ನಗರದ ಭೂರಗಮಾಕಲಹಳ್ಳಿಯಲ್ಲಿನ ಜಿಇಎಫ್ ಕಣ್ಣಿನ ಆಸ್ಪತ್ರೆ ಹಾಗೂ ಸ್ಥಳಿಯರ ಸಹಯೋಗದಲ್ಲಿ 41ನೇ ರಾಷ್ಟ್ರೀಯ ನೇತ್ರದಾನ ಪಾಕ ಸಪ್ತಾಹದ ಅಂಗವಾಗಿ ಬೃಹತ್ ಜಾಗೃತಿ ನಡೆಯಿತು
ಜಿಇಎಫ್ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಸಂತೋಷ್ ಮಾತನಾಡಿ, ಆಸ್ಪತ್ರೆ ಸಿಬ್ಬಂದಿ ವ್ಯಕ್ತಿ ಮರಣ ಹೊಂದಿದ ಬಳಿಕ ಅವರ ಕುಟುಂಬ ಸದಸ್ಯರು ಎಷ್ಟು ಬೇಗ ಮಾಹಿತಿ ನೀಡುತ್ತಾರೋ ಅಷ್ಟು ಉತ್ತಮ. ಮರಣದ ನಂತರ 6 ಗಂಟೆಯೊಳಗೆ ಕಣ್ಣುಗಳನ್ನು ಪಡೆದು ರಾಜಕುಮಾರ್ ಐ ಬ್ಯಾಂಕ್ಗೆ ತಲುಪಿಸಲಾಗುತ್ತದೆ. ನಿಗದಿತ ಸಮಯದೊಳಗೆ ಕಣ್ಣುಗಳನ್ನು ಸಂಗ್ರಹಿಸಿದರೆ ಕಾರ್ನಿಯಾ ಪದರವು ಉತ್ತಮ ಸ್ಥಿತಿಯಲ್ಲಿದ್ದು, ದೃಷ್ಟಿ ಹೀನರಿಗೆ ಕಸಿ ಮಾಡುವ ಮೂಲಕ ದೃಷ್ಟಿ ನೀಡಲು ಅನುಕೂಲವಾಗುತ್ತದೆ ಎಂದರು.
ನೇತ್ರದಾನ ಮಾಡಿದ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಸರ್ಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳಿಂದ ಪ್ರಮಾಣಪತ್ರ ನೀಡಲಾಗುತ್ತದೆ. ಇದು ಕುಟುಂಬದ ಮಕ್ಕಳಲ್ಲಿ ಹಾಗೂ ಮುಂದಿನ ಪೀಳಿಗೆಯಲ್ಲಿ ನೇತ್ರದಾನದ ಕುರಿತು ಅರಿವು ಮೂಡಿಸಲು, ಇತರರಿಗೆ ಪ್ರೇರಣೆಯಾಗಲು ಸಹಕಾರಿಯಾಗಲಿದೆ.
ಪ್ರತಿಯೊಬ್ಬರೂ ನೇತ್ರದಾನದ ಮಹತ್ವವನ್ನು ಅರಿತುಕೊಂಡು ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಲಾಯಿತು.