ಆಲೂರು ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಏರ್ಪಸಲಾಗಿದ್ದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಸಿಮೆಂಟ್ ಮಂಜು ಉದ್ಘಾಟಿಸಿದರು. ಡಾ. ಸಿ. ಎಸ್. ಯತೀಶ್ವರ್, ಕೆ.ಎಸ್.ಮಂಜೇಗೌಡ, ಶಾಂತಕೃಷ್ಣ, ಅಬ್ಬನ ಕೃಷ್ಣಮೂರ್ತಿ, ನಟರಾಜ್, ಬಿ. ಮಂಜೇಗೌಡ ಉಪಸ್ಥಿತರಿದ್ದರು.
ಆಲೂರು: ಪಠ್ಯೇತರ ಚಟುವಟಿಕೆಗಳು ಮಕ್ಕಳ ಸಮಗ್ರ ಬೆಳವಣಿಗೆಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಶೈಕ್ಷಣಿಕತೆಯನ್ನು ಮೀರಿ ಅಮೂಲ್ಯವಾದ ಅವಕಾಶಗಳನ್ನು ನೀಡುತ್ತವೆ ಎಂದು ಶಾಸಕ ಸಿಮೆಂಟ್ ಮಂಜು ತಿಳಿಸಿದರು.
ಪಟ್ಟಣದ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ಏರ್ಪಸಿಲಾಗಿದ್ದ ಪತ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಹಾಸನ ಎವಿಕೆ ಕಾಲೇಜು ಪ್ರಾಂಶುಪಾಲ ಡಾ. ಸಿ.ಜೆ. ಯತೀಶ್ವರ್ ದಿಕ್ಕೂಚಿ ಭಾಷಣ ಮಾಡುತ್ತಾ, ಶಿಕ್ಷಣ, ಜ್ಞಾನ ಎಂಬುದು ವ್ಯಕ್ತಿ, ಸಮಾಜ ಮತ್ತು ದೇಶದ ಆಡಿಪಾಯ. ಶಿಕ್ಷಣಕ್ಕೆ ಮಹತ್ವ ನೀಡದ ಸಮಾಜ ಪ್ರಗತಿಯತ್ತ ಸಾಗುವುದಿಲ್ಲ. ಜ್ಞಾನವೆಂಬುದು ಪರಿಣಾಮಕಾರಿ ಆಯುಧ ಎಂದು ಡಾ. ನೆಲ್ಸನ್ ಮಂಡೇಲ ಹೇಳಿದ್ದಾರೆ. ಗುರುಕುಲ ಶಿಕ್ಷಣ ಪದ್ಧತಿಯಿಂದ ಆಧುನಿಕ ಶಿಕ್ಷಣ ಪದ್ಧತಿವರೆಗೆ ನಡೆದು ಬಂದಿದ್ದೇವೆ. ಭರತ ಖಂಡದ ಮೇಲೆ ದಾಳಿ ಮಾಡಿದವರು ಸಂಪತ್ತು ಹೊತ್ತೊಯ್ದರೆ ಹೊರತು, ಆಧ್ಯಾತ್ಮಿಕ ಸಂಪತನ್ನು ಹೊತ್ತೊಯ್ಯಲು ಸಾಧ್ಯವಾಗಲಿಲ್ಲ. ಇದಕ್ಕೆ ವೇದ, ಉಪನಿಷತ್ತು, ಭಗವದ್ಗೀತೆ, ರಾಮಾಯಣ, ಮಹಾಭಾರತ, ಭಾಗವತ ಕಾರಣವಾಗಿದೆ. ಅಖಂಡ ಭಾರತ ನಿಂತಿರುವುದು ಜ್ಞಾನದ ಭಂಡಾರದ ಮೇಲೆ, ಜ್ಞಾನ ಭಂಡಾರ ಬೆಳೆದಂತೆ ವ್ಯಕ್ತಿತ್ವ ವಿಕಸನ ವೃದ್ಧಿಯಾಗುತ್ತದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ, ದತ್ತಿದಾನಿ ಕೆ.ಎಸ್. ಮಂಜೇಗೌಡ ಮಾತನಾಡಿದರು. ಪ್ರಾಂಶುಪಾಲ ಟಿ.ಪಿ. ಪುಟ್ಟರಾಜು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ದತ್ತಿದಾನಿ ಶಾಂತಕೃಷ್ಣ, ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿ. ಮಂಜೇಗೌಡ, ಬಿಜೆಪಿ ಮುಖಂಡ ಅಬ್ಬನ ಕೃಷ್ಣಮೂರ್ತಿ, ವಿವಿಧ ಸಮಿತಿ ಸಂಚಾಲಕ ಡೀನ್ ಕೆ.ಎಚ್. ರಮೇಶ್, ಪ್ರೊ. ನಟರಾಜ್, ಅತಿಥಿ ಉಪನ್ಯಾಸಕಿ ಸರಿತಾ, ಪ್ರೊ. ರಾಘವೇಂದ್ರ ಉಪಸ್ಥಿತರಿದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಕಾರ್ಯಕ್ರಮದಲ್ಲಿ ದತ್ತಿದಾನಿ ಶಾಂತಕೃಷ್ಣ, ಲಯನ್ ಸಂಸ್ಥೆ ಅಧ್ಯಕ್ಷ ಮಂಜೇಗೌಡ, ಆಲೂರು ಕಟ್ಟಾಯ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಬ್ಬನ ಕೃಷ್ಣಮೂರ್ತಿ, ವಿವಿಧ ಸಮಿತಿ ಸಂಚಾಲಕ ಡಿ.ಕೆ ರಮೇಶ್, ಪ್ರೊ.ನಟರಾಜ್, ಅತಿಥಿ ಉಪನ್ಯಾಸಕಿ ಸರಿತಾ, ಪ್ರೊ.ರಾಘವೇಂದ್ರ ಇತರರು ಹಾಜರಿದ್ದರು.