Extracurricular activities are essential for children's development.
ಗುಬ್ಬಿ : ಚಿಕ್ಕ ವಯ್ಸಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರ ಹಾಗೂ ಸಂಸತಿ ನೀಡುವ ಕೆಲಸವನ್ನು ಪಾಲಕರು ಮಾಡಬೇಕು ಎಂದು ಬೆಟ್ಟದಹಳ್ಳಿ ಗವಿಮಠ ಅಧ್ಯ ಶ್ರೀ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಗುಬ್ಬಿ ತಾಲೂಕಿನ ಬಾಗೂರು ಗುರುಶ್ರೀ ಆಂಗ್ಲ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಉಚಿತ ಬೇಸಿಗೆ ಶಿಬಿರ ಹಾಗೂ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಶಿಣದ ಜತೆಯಲ್ಲಿ ಪಠ್ಯೇತರ ಚಟುವಟಿಕೆ ಬಹಳ ಮುಖ್ಯ. ರಜಾ ದಿನಗಳಲ್ಲಿ ಕೇವಲ ಮೊಬೈಲ್ ಹಿಡಿದುಕೊಂಡು ಮಕ್ಕಳು ಕಾಲ ಕಳೆಯುವುದಕ್ಕಿಂತ ಇಂತಹ ಶಿಬಿರಗಳಲ್ಲಿ ಭಾಗವಹಿಸಿ ಸಂಸ್ಕಾರ ಶಿಣ, ಆಧುನಿಕ ತಂತ್ರಾನ ಕುರಿತು ಮಾಹಿತಿ ಪಡೆಯುತ್ತಾರೆ ಎಂದರು.
ಡಿಡಿಪಿಐ ರುಚಂದ್ರ ಮಾತನಾಡಿ, ಮಕ್ಕಳು ದೊಡ್ಡ ಮಟ್ಟದ ಕನಸನ್ನ ಕಾಣಬೇಕು ಕನಸು ಕಾಣುವಂತೆ ಬದುಕನ್ನು ನಡೆಸಬೇಕ ಎಂದರೆ ಶಿಣದ ಜತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಅವರು ಹೆಚ್ಚು ಭಾಗವಹಿಸಬೇಕಾಗಿದೆ. ಇದಕ್ಕೆ ಇಂತಹ ಬೇಸಿಗೆ ಶಿಬಿರಗಳು ಪೂರಕವಾಗಿದೆ ಎಂದರು.