ಸವದತ್ತಿಯ ಕೆಎಲ್ಇ ಸಂಸ್ಥೆ ಎಸ್.ಕೆ. ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜಗದೀಶ ಶಿಂತ್ರಿ ಉದ್ಘಾಟಿಸಿದರು. ರವೀಂದ್ರ ಕರ್ಲೆಪ್ಪನವರ, ಎ.ಬಿ.ಮೇಟಿ, ಎಂ.ಬಿ.ಪಾಟೀಲ, ಎಸ್.ಬಿ.ಗುಡೆನ್ನವರ ಇತರರಿದ್ದರು.
ವಿಜಯವಾಣಿ ಸುದ್ದಿಜಾಲ ಸವದತ್ತಿ
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ ಕ್ರೀಡೆ, ಸಾಂಸತಿಕ, ಸಾಹಿತ್ಯ ಹಾಗೂ ಇತರ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಮಗ್ರ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು ಎಂದು ಕೆಎಲ್ಇ ಸಂಸ್ಥೆ ಸ್ಥಾನಿಕ ಆಡಳಿತ ಮಂಡಳಿ ಅಧ್ಯ ಜಗದೀಶ ಶಿಂತ್ರಿ ಹೇಳಿದರು.
ಕೆಎಲ್ಇ ಸಂಸ್ಥೆ ಎಸ್.ಕೆ. ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2026&27ನೇ ಶೆಣಿಕ ವರ್ಷದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಮತ್ತು ಇಐಎ ಕ್ಲಬ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯತೆ ವಹಿಸಿ ಅವರು ಮಾತನಾಡಿದರು.
ಶಿಣ ವಿದ್ಯಾರ್ಥಿಗಳ ಬದುಕಿನ ಭದ್ರ ಬುನಾದಿಯಾಗಿದೆ. ಕಾಲೇಜಿನಲ್ಲಿ ದೊರೆಯುವ ಪ್ರತಿಯೊಂದು ಅವಕಾಶವನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಂಡು ಪ್ರತಿಭೆ ಅನಾವರಣಗೊಳಿಸಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕ ರವೀಂದ್ರ ಕರ್ಲೆಪ್ಪನವರ ಮಾತನಾಡಿ, ಜ್ಞಾನಕ್ಕೆ ಕೌಶಲ ಮತ್ತು ಆತ್ಮವಿಶ್ವಾಸದ ಬೆಂಬಲ ದೊರೆತಾಗ ಮಾತ್ರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀೆ ಹಾಗೂ ಉದ್ಯೋಗ ೇತ್ರದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಸ್ಥಾನಿಕ ಆಡಳಿತ ಮಂಡಳಿ ಸದಸ್ಯರಾದ ಎ.ಬಿ.ಮೇಟಿ, ಎಂ.ಬಿ.ಪಾಟೀಲ ಹಾಗೂ ಎಸ್.ಬಿ.ಗುಡೆನ್ನವರ, ಪ್ರಾಚಾರ್ಯ ಬಿ.ಕೆ.ಕಠಾರೆ, ಒಕ್ಕೂಟದ ಕಾರ್ಯಾಧ್ಯ ಎಸ್.ಬಿ.ಹುನ್ನೂರ, ಎಂ.ಬಿ.ವಾಲಿ,
ಎನ್.ಬಿ.ಸಕ್ರಪ್ಪನವರ ಇತರರಿದ್ದರು.