8 ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ 
ರಾಜ್ಯ

8 ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

ಹುಬ್ಬಳ್ಳಿ ಕೊಲ್ಲಂ ರೈಲಿನ ವೇಳಾಪಟ್ಟಿ ಬದಲಾವಣೆ

ಬೆಂಗಳೂರು : ನೈಋತ್ಯ ರೈಲ್ವೆಯು ಬೆಂಗಳೂರುತಿರುವನಂತಪುರಂ ನಾರ್ತ್ ಮಾರ್ಗದ ಆರು ಹಾಗೂ ಹುಬ್ಬಳ್ಳಿ ಕೊಲ್ಲಂ ಮಾರ್ಗದ ಎರಡು ಸೇರಿದಂತೆ ಒಟ್ಟು ಎಂಟು ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಿಸಲಾಗಿದೆ.

ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ತಿರುವನಂತಪುರಂ ನಾರ್ತ್ ರೈಲುಗಳ ಪೈಕಿ ರೈಲುಸಂಖ್ಯೆ 06555ರ ಸಂಚಾರವನ್ನು ಡಿ.4ರಿಂದ ಜ.29ರವರೆಗೆ, ರೈಲು ಸಂಖ್ಯೆ 06523ರ ಸಂಚಾರವನ್ನು ಡಿ.7ರಿಂದ ಜ.25ರವರೆಗೆ ಹಾಗೂ ರೈಲುಸಂಖ್ಯೆ 06547ರ ಸಂಚಾರವನ್ನು ಡಿ.2ರಿಂದ ಜ.27ರವರೆಗೆ ವಿಸ್ತರಿಸಲಾಗಿದೆ. ಮತ್ತು ತಿರುವನಂತಪುರಂ ನಾರ್ತ್‌ನಿಂದ ಬೆಂಗಳೂರಿಗೆ ಸಂಚರಿಸುವ ರೈಲು ಸಂಖ್ಯೆ 06556ರ ಸೇವೆ ಡಿ.6ರಿಂದ ಜ.31ರವರೆಗೆ, 06524ರ ಸೇವೆ ಡಿ.8ರಿಂದ ಜ.26ರವರೆಗೆ ಹಾಗೂ 06548ರ ಸೇವೆ ಡಿ.3ರಿಂದ ಜ.28ರವರೆಗೆ ಮುಂದುವರಿಯಲಿದೆ.

ಹುಬ್ಬಳ್ಳಿಕೊಲ್ಲಂ ವಿಶೇಷ ರೈಲು ಸಂಖ್ಯೆ 07313ರ ಸಂಚಾರವನ್ನು ಡಿ.6ರಿಂದ ಜ.17ರವರೆಗೆ ಹಾಗೂ ಕೊಲ್ಲಂ ಹುಬ್ಬಳ್ಳಿ ರೈಲು ಸಂಖ್ಯೆ 07314ರ ಸಂಚಾರವನ್ನು ಡಿ.7ರಿಂದ ಜ.18ರವರೆಗೆ ವಿಸ್ತರಿಸಲಾಗಿದೆ.

ವೇಳಾಪಟ್ಟಿ ಬದಲಾವಣೆ: ಹುಬ್ಬಳ್ಳಿ ಕೊಲ್ಲಂ ರೈಲು ಸಂಖ್ಯೆ 07313ರ ವೇಳಾಪಟ್ಟಿ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ವೇಳಾಪಟ್ಟಿಯಂತೆ ರೈಲು ಸೇಲಂ, ಈರೋಡ್, ತಿರುಪ್ಪೂರ್, ಪಾಲಕ್ಕಾಡ್, ತ್ರಿಶೂರ್, ಎರ್ನಾಕುಲಂ ಟೌನ್, ಕೊಟ್ಟಾಯಂ ಸೇರಿದಂತೆ ವಿವಿಧ ನಿಲ್ದಾಣಗಳಲ್ಲಿ ನಿಗದಿತ ಸಮಯಕ್ಕೆ ನಿಲುಗಡೆ ನೀಡಲಿದ್ದು, ಅಂತಿಮವಾಗಿ ಮಧ್ಯಾಹ್ನ 3 ಗಂಟೆಗೆ ಕೊಲ್ಲಂ ತಲುಪಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.