ಶಹಾಬಾದ್ನ ಸರ್ಕಾರಿ ಪ್ರೌಢಶಾಲೆಯ ಅಡುಗೆ ಕೋಣೆಯಲ್ಲಿರುವ ಅವಧಿ ಮೀರಿದ ಸಿಂಧೂರಿ ಎಣ್ಣೆ ಪ್ಯಾಕೇಟ್ನ ಜಿಪಿಎಸ್ ಪೋಟೋಗಳು. 16 7 ಎಸ್ಬಿಡಿ 2(ಎ) ಶಹಾಬಾದ್ ಸರ್ಕಾರಿ ಪ್ರೌಢಶಾಲೆಯಲ್ಲಿ ದೊರೆತ ಸಿಂಧೂರಿ ಅಡುಗೆ ಎಣ್ಣೆ ಪಾಕೆಟ್ ಮೇಲಿರುವ ಬ್ಯಾಚ್ ಸಂಖ್ಯೆ, ಪ್ಯಾಕಿಂಗ್ ಹಾಗೂ ಬಳಕೆಯ ಕೊನೆ ದಿನಾಂಕ.
- ಶಹಾಬಾದ್ನ ಪ್ರೌಢಶಾಲೆಯಲ್ಲಿ ಮಿಡ್ ಡೇ ಮೀಲ್ಸ್ ಯೋಜನೆಯಡಿ ಅವಡ
ಶಹಾಬಾದ್: ಚಿತ್ತಾಪುರ ತಾಲೂಕಿನ ದಂಡೋತಿ ಮುರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಕಳಪೆ ಆಹಾರ ಸೇವಿಸಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಧಗೊಂಡಿರುವ ಪ್ರಕರಣ ಮರೆಮಾಸುವ ಮುನ್ನವೇ ಅಂತಹದ್ದೆ ಒಂದು ದೊಡ್ಡ ದುರಂತ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿರುವುದ ಗುರುವಾರ ಬೆಳಕಿಗೆ ಬಂದಿದೆ.
ಸರ್ಕಾರಿ ಪ್ರೌಢಶಾಲೆಯಲ್ಲಿ ಸರ್ಕಾರದ ಮಿಡ್ ಡೇ ಮೀಲ್ಸ್ ಯೋಜನೆಯಡಿ ಅವಧಿ ಮೀರಿದ ಅಡುಗೆ ಎಣ್ಣೆ ವಿತರಿಸಿದ್ದು, ಅದರಲ್ಲೇ ಮಕ್ಕಳಿಗೆ ಆಹಾರ ಸಿದ್ಧಪಡಿಸಿ ನೀಡಿರುವ ಅಂಶ ಬೆಳಕಿಗೆ ಬಂದಿದೆ. ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಶಾಲೆಗೆ ಸಿಂಧೂರಿ ರಿಫೈನ್ಡ್ ಸನ್ಪ್ಲವರ್ ಎಣ್ಣೆ ನೀಡಲಾಗಿದೆ. ಆದರೆ ಇದರ ಅವಧಿ ಮುಗಿದು ತಿಂಗಳಾಗಿದ್ದು, ಹಾಗೆಯೇ ಬಳಕೆ ಮಾಡುವ ಮೂಲಕ ಮಕ್ಕಳ ಆರೋಗ್ಯದೊಂದಿಗೆ ಚಲ್ಲಾಟವಾಡಲಾಗಿದೆ.
ಅಡುಗೆ ಕೋಣೆಯಲ್ಲಿ ಬಿಸಿಯೂಟಕ್ಕೆ ಬಳಸಿದ ಎಣ್ಣೆಯ ಪಾಕೆಟ್ ಲಭ್ಯವಾಗಿದ್ದು, ಪ್ಯಾಕೇಟ್ ಮೇಲೆ ಶ್ರೀ ಬಾಲಾಜಿ ಟ್ರೇಡ್ಲಿಂಕ್ಸ್ ಹುಬ್ಬಳ್ಳಿ ಕಂಪನಿಯಿಂದ ಸಿಂಧೂರ ರಿಫೈನ್ಡ್ ಸನ್ಫ್ಲವರ್ ಆಯಿಲ್ ಸರಬರಾಜು ಆಗಿದೆ. ಪಾಕೆಟ್ ಅನ್ನು 2026ರ ಜನವರಿ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದು, ಬಳಕೆ ಅವಧಿ 2026ರ ಜೂ.2 ಎಂದು ನೀಡಲಾಗಿದೆ. ಬ್ಯಾಚ್ ಸಂ.9, ಸಪ್ಲೆಯರ್ ಕೋಡ್ ಯು 32625 ಆಗಿದೆ. ಅದರೆ ಅವಧಿ ಮುಗಿದ ನಂತರ ಸುಮಾರು 40 ದಿನ ಇದೇ ಎಣ್ಣೆ ಮಕ್ಕಳ ಊಟಕ್ಕೆ ಬಳಸಲಾಗಿದೆ.