ಖರ್ಚಖೇಡದ ಅಂಗಡಿಗಳ ಮೇಲೆ ಆಹಾರ ಸುರತಾ ಇಲಾಖೆ ಅಧಿಕಾರಿ ಅರವಿಂದಕುಮಾರ ದಿಢೀರ್​ ದಾಳಿ ನಡೆಸಿ ಅವಧಿ ಮುಗಿದ ಬಿಸ್ಕತ್ತು ಪ್ಯಾಕೆಟ್​ಗಳನ್ನು ವಶಕ್ಕೆ ಪಡೆದರು. 
ರಾಜ್ಯ

ಅವಧಿ ಮುಗಿದು ಪದಾರ್ಥ ವಶಕ್ಕೆ

ಪ್ರಮುಖ ಮುಖ್ಯಾಂಶಗಳು

  • ವರದಿ ಮಾಡಿದ್ದ ವಿಜಯವಾಣಿ ಪತ್ರಿಕೆ
ಚಿಂಚೋಳಿ: ಖರ್ಚಖೇಡ ಗ್ರಾಮದ ಅಂಗಡಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿ ಅರವಿಂದಕುಮಾರ ಮಂಗಳವಾರ ದಿಢೀರ್​ ದಾಳಿ ನಡೆಸಿ ಅವಧಿ ಮುಗಿದ ಪದಾರ್ಥಗಳನ್ನು ವಶಕ್ಕೆ ಪಡೆದರು. ದಾಳಿ ವೇಳೆ ಅಂಗಡಿಗಳಲ್ಲಿ ಅವಧಿ ಮೀರಿದ ಆಹಾರ ಸಾಮಗ್ರಿ ಹಾಗೂ ಬಿಸ್ಕತ್ತುಗಳು ಸಿಕ್ಕಿದ್ದು, ಅವುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೆ ಮಕ್ಕಳ ಹಾಗೂ ಸಾರ್ವಜನಿಕರ ಆರೋಗ್ಯದ ಜತೆ ಆಟವಾಡುವುದು ಗಂಭೀರ ಅಪರಾಧ. ಯಾವುದೇ ಕಾರಣಕ್ಕೂ ಅವಧಿ ಮುಗಿದ ಆಹಾರ ಪದಾರ್ಥ ಮಾರಾಟ ಮಾಡಬಾರದು. ಮುಂದಿನ ದಿನಗಳಲ್ಲಿ ಹೀಗೆ ಆದರೆ ಅಂಗಡಿ ಪರವಾನಗಿ ರದ್ದುಪಡಿಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಂಗಡಿಗಳಲ್ಲಿ ಅವಧಿ ಮೀರಿರುವ ಬಿಸ್ಕತ್ತು ಮಾರಾಟ ಮಾಡುತ್ತಿರುವ ಬಗ್ಗೆ ಜು.27ರ ಸಂಚಿಕೆಯಲ್ಲಿ "ಅವಧಿ ಮುಗಿದ ಬಿಸ್ಕತ್ತು ಮಾರಾಟ' ತಲೆಬರಹದಡಿ ವರದಿ ಪ್ರಕಟಿಸಿರುವುದನ್ನು ಸ್ಮರಿಸಬಹುದು.