ಉಗ್ರರ ಜಾಲ ವಿಸ್ತರಣೆ DESK
ರಾಜ್ಯ

ಕರ್ನಾಟಕದಲ್ಲಿ ಉಗ್ರರ ಜಾಲ ವಿಸ್ತರಣೆ

ಕರಾವಳಿ, ಉತ್ತರ ಕರ್ನಾಟಕಕ್ಕೆ ಶಂಕಿತರನ್ನು ಕಳುಹಿಸಿ ತರಬೇತಿ , ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಡಗಿರುವ ಶಂಕಿತರು,ಕೇಂದ್ರ ಮತ್ತು ರಾಜ್ಯ ಗುಪ್ತಚರ ಇಲಾಖೆ ತೀವ್ರ ನಿಗಾ

ಬೆಂಗಳೂರು: ಪ್ರಮುಖ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಂಡು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದರೆಂಬ ಆರೋಪದಡಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ, ಬೆಂಗಳೂರನ್ನು ಬಳಸಿಕೊಂಡು ಭಯೋತ್ಪಾದಕ ಜಾಲ ವಿಸ್ತರಿಸುವ ಪ್ರಯತ್ನ ನಡೆದಿರುವ ಶಂಕೆ ತನಿಖಾ ಸಂಸ್ಥೆಗಳಲ್ಲಿ ಮೂಡಿದೆ.

ಕೇಂದ್ರ ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳು ಬೆಂಗಳೂರಿನಲ್ಲಿ ಗುರುತಿಸಿರುವ ಶಂಕಿತ ಸ್ಲೀಪರ್ ಸೆಲ್‌ಗಳ ಪೈಕಿ ಹಲವು ಘಟಕಗಳಿಗೆ ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಉತ್ತರ ಮತ್ತು ಪೂರ್ವ ಭಾರತದ ಪ್ರದೇಶಗಳಿಂದ ಯುವಕರನ್ನು ಕರೆತಂದು ನಗರದಲ್ಲಿ ಆಶ್ರಯ ಕಲ್ಪಿಸಲಾಗುತ್ತಿದೆ ಎನ್ನಲಾಗಿದೆ.

ಈ ಯುವಕರನ್ನು ಕೆಲ ತಿಂಗಳು ಬೆಂಗಳೂರಿನಲ್ಲೇ ಇರಿಸಿ, ಬಳಿಕ ದಕ್ಷಿಣ ಕನ್ನಡ, ಕರಾವಳಿ ಪ್ರದೇಶ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಸ್ಥಳಾಂತರಿಸಿ, ಭಯೋತ್ಪಾದಕ ಚಟುವಟಿಕೆಗಳಿಗೆ ಅಗತ್ಯವಾದ ಸಂಪರ್ಕ, ತರಬೇತಿ ಹಾಗೂ ಸಂಘಟನಾ ಜಾಲ ರೂಪಿಸುವ ಪ್ರಯತ್ನ ಸದ್ದಿಲ್ಲದೇ ನಡೆಯುತ್ತಿರುವ ಶಂಕೆ ವ್ಯಕ್ತವಾಗಿದೆ.

30 ವರ್ಷದೊಳಗಿನವರೇ ಟಾರ್ಗೆಟ್:

ಇತ್ತೀಚಿನ ಪ್ರಕರಣಗಳ ತನಿಖೆಯಲ್ಲಿ 30 ವರ್ಷದೊಳಗಿನ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ವಿಶೇಷವಾಗಿ ಸಾಮಾಜಿಕ ಜಾಲತಾಣ, ಇಂಟರ್‌ನೆಟ್, ತಾಂತ್ರಿಕ ಕ್ಷೇತ್ರ ಹಾಗೂ ಎನ್‌ಸ್ಕ್ರಿಪ್ಟ್ ಮೆಸೇಜಿಂಗ್ ಸಂವನದಲ್ಲಿ ಪರಿಣತಿ ಹೊಂದಿರುವ ಯುವಕರನ್ನು ಗುರುತಿಸಿ ಅವರನ್ನು ಭಯೋತ್ಪಾದನೆಗೆ ಕರೆತರಲಾಗುತ್ತಿದೆ.

ಚಿಕ್ಕಬಳ್ಳಾಪುರ, ಹಾಸನದಲ್ಲಿ ನಿನ್ನೆ ಮೂವರು ಶಂಕಿತರ ಬಂಧನದ ಪ್ರಕರಣದಲ್ಲಿಯೂ ಟೆಲಿಗ್ರಾಂ ಗುಂಪುಗಳ ಮೂಲಕ ಉಗ್ರ ಚಟುವಟಿಕೆ, ನೇಮಕಾತಿ ಹಾಗೂ ಹಣ ಸಂಗ್ರಹಕ್ಕೆ ಸಂಬಂಧಿಸಿದ ಚರ್ಚೆಗಳು ನಡೆದಿರುವುದು ಬೆಳಕಿಗೆ ಬಂದಿದೆ. ಬಂಧಿತರಲ್ಲಿ ಒಬ್ಬ ಉತ್ತರ ಭಾರತ ಮೂಲದವನಾಗಿದ್ದಾನೆ.

ಬೆಂಗಳೂರಿನಲ್ಲೇ ಸಂಪರ್ಕ ಜಾಲ?

ತನಿಖಾ ಸಂಸ್ಥೆಗಳ ಅನುಮಾನ ಪ್ರಕಾರ, ಬೆಂಗಳೂರಿನಲ್ಲಿ ನೆಲೆಸಿರುವ ವ್ಯಕ್ತಿಗಳ ಮೂಲಕ ಹೊರರಾಜ್ಯಗಳಿಂದ ಬರುವ ಯುವಕರಿಗೆ ವಸತಿ, ಉದ್ಯೋಗದ ನೆಪ, ಸ್ಥಳೀಯ ಸಂಪರ್ಕ ಮತ್ತು ಸಂವಹನ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದಲ್ಲಿ ಸಾಫ್ಟ್‌ವೇರ್ ಹಾಗೂ ತಾಂತ್ರಿಕ ಉದ್ಯೋಗಕ್ಕೆ ಬರುವ ಯುವಕರ ದೊಡ್ಡ ಸಂಖ್ಯೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ತನಿಖೆಯಲ್ಲಿ ವ್ಯಕ್ತವಾಗಿದೆ.

ಈ ಹಿಂದೆ ಬೆಂಗಳೂರಿನಲ್ಲಿ ಬಂಧಿಸಲ್ಪಟ್ಟ ಶಮಾ ಪರ್ವೀನ್ ಪ್ರಕರಣದಲ್ಲಿಯೂ ಸಾಮಾಜಿಕ ಜಾಲತಾಣದ ಮೂಲಕ ಅಲ್‌ಖೈದಾ ಪರ ಪ್ರಚಾರ ಮತ್ತು ಸಂಪರ್ಕ ನಡೆಸಿದ ಆರೋಪ ತನಿಖೆಯಲ್ಲಿ ಕೇಳಿಬಂದಿತ್ತು. ಗುಜರಾತ್ ಎಟಿಎಸ್ ಅಧಿಕಾರಿಗಳ ತಂಡ ಬೆಂಗಳೂರಿನಲ್ಲಿ ಆಕೆಯನ್ನು ಬಂಧಿಸಿತ್ತು.

ಈ ಲೇಡಿ ಟೆರರಿಸ್ಟ್ ಸ್ಟಾವೇರ್ ಇಂಜಿನಿಯರಿಂಗ್ ಪದವಿ ಹೊಂದಿದ್ದು, ಬೆಂಗಳೂರಿನಲ್ಲಿರುವ ಸಹೋದರನ ಮನೆಯಲ್ಲಿ ಅಡಗಿದ್ದಳು. ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆಯೊಂದಿಗೆ ನಿರಂತರ ಸಂಪರ್ಕ ಹೊಂದಿದ್ದಳು. ಈಗ ಬಂದಿತ ಬಂಧಿತ ಶಂಕಿತರೆಲ್ಲರೂ ಲಷ್ಕರ್-ಎ ತೋಯ್ಬ, ಐಸಿಎಸ್, ಜೈಶ್-ಎ- ಮೊಹಮ್ಮದ್ ಸಂಘಟನೆ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ.

ಹೊರರಾಜ್ಯದಿಂದ ಬರುವವರ ಮೇಲೆ ನಿಗಾ:

ಹೊರರಾಜ್ಯಗಳಿಂದ ಬೆಂಗಳೂರಿಗೆ ಬಂದು ದೀರ್ಘಕಾಲ ನೆಲೆಸುವ ಯುವಕರು, ಪದೇ ಪದೇ ವಾಸಸ್ಥಳ ಬದಲಾಯಿಸುವವರು, ನಕಲಿ ದಾಖಲೆಗಳಲ್ಲಿ ಕೊಠಡಿ ಅಥವಾ ಮನೆ ಬಾಡಿಗೆ ಪಡೆಯುದವರು, ಸಾಮಾಜಿಕ ಜಾಲತಾಣಗಳಲ್ಲಿ ಅನುಮಾನಾಸ್ಪದ ಗುಂಪುಗಳೊಂದಿಗೆ ಸಂಪರ್ಕ ಹೊಂದಿರುವವರ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿದೆ.

ಆದರೆ, ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಸ್ಲೀಪರ್ ಸೆಲ್‌ಗಳಿವೆ. ಹೊರ ರಾಜ್ಯಗಳಿಂದ ಉಗ್ರರನ್ನು ಕರೆತಂದು ತರಬೇತಿ ನೀಡಲಾಗುತ್ತಿದೆ ಎಂಬ ಶಂಕೆ ಇದೆ.

ಕೇಂದ್ರ ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, ಶಹಜಾದ್ ಭಟ್ಟಿ ನೆಟ್‌ವರ್ಕ್‌ಗೆ ಸಂಬಂಧಿಸಿದ ಕಾರ್ಯಾಚರಣೆಯಲ್ಲಿ 14 ರಾಜ್ಯಗಳಲ್ಲಿ 253 ಮಂದಿಯನ್ನು ಬಂಧಿಸಲಾಗಿತ್ತು. ಆ ಪಟ್ಟಿಯಲ್ಲಿ ಕರ್ನಾಟಕವೂ ಇದೆ. ಬೆಂಗಳೂರಿನ ಟೆಕ್ಕಿಯೊಬ್ಬ ಸೇರಿ 23 ಜನರನ್ನು ಭಯೋತ್ಪಾದಕರು ಪಾಕಿಸ್ತಾನಿಗಳಿಗಳೊಂದಿಗೆ ಸೇರಿ ಯುವಕರನ್ನು ಉಗ್ರತ್ವಕ್ಕೆ ಸೇರ್ಪಡೆ, ತರಬೇತಿ, ಒಳನುಸುಳುವಿಕೆ ಮತ್ತು ಲಾಜಿಸ್ಟಿಕ್ಸ್ ಬೆಂಬಲಿದಿಂದ ಹಿಡಿದು ಶಸಾಸ ಪೂರೈಕೆ, ಡ್ರೋನ್ ಆಧಾರಿತ ತರಬೇತಿ ಪಡೆದಿದ್ದಾನೆ ಎನ್ನಲಾಗಿದೆ.