ದೇವನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಮಾಜೋತ್ಸವದಲ್ಲಿ ಶ್ರೀಕಾಂತ್ ಶೆಟ್ಟಿ ಮತ್ತು ಮಹದೇವ ಸ್ವಾಮೀಜಿ, ಡಾ. ಎಲ್.ಎನ್. ಅಂಬರೀಶಗೌಡ, ಯಂಬ್ರಹಳ್ಳಿ ಅಂಬರೀಶ್, ಎಚ್.ಎಂ. ರವಿಕುಮಾರ್, ದೇಸೂ ನಾಗರಾಜ್, ಆರ್.ಕೆ ನಂಜೇಗೌಡ ಇತರರು ಇದ್ದರು.
ದೇವನಹಳ್ಳಿ : ಜಗತ್ತಿನ ಸಂಸತಿ ನಾಗರಿಕತೆ ಹಾಗೂ ಬದುಕುವ ಕಲೆಯನ್ನು ಹೇಳಿಕೊಟ್ಟವರು ಭಾರತೀಯರು. ದೇಶ ಉಳಿಯಬೇಕೆಂದರೆ ಹಿಂದೂ ಧರ್ಮ ಉಳಿಯಬೇಕು. ಈ ನಿಟ್ಟಿನಲ್ಲಿ ಹಿಂದೂ ಸಮಾಜೋತ್ಸವಗಳು ದೇಶದಲ್ಲಿ ಎಲ್ಲ ಕಡೆ ನಡೆಯಬೇಕು ಎಂದು ಕಾರ್ಕಳದ ಶ್ರೀಕಾಂತ ಶೆಟ್ಟಿ ಹೇಳಿದರು.
ದೇವನಹಳ್ಳಿ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆಟದ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿ, ಪುರಾತನವಾದ ನಮ್ಮ ಹಿಂದೂ ಧರ್ಮವನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಹಿಂದೂ ಧರ್ಮ ಇನ್ನೂ ಸಾವಿರಾರು ವರ್ಷ ಕಳೆದರೂ ಇದ್ದೇ ಇರುತ್ತದೆ. ಬೃಹತ್ ಶೋಭಾಯಾತ್ರೆಯಲ್ಲಿ ಪಾತೀತ ಜಾತ್ಯತಿತವಾಗಿ ಸಹಸ್ರಾರು ಸಂಖ್ಯೆಯಲ್ಲಿ ಮಹಿಳೆೆಯರು, ಪುರುಷರು ಭಾಗವಹಿಸಿ ಸಮಾಜೋತ್ಸವ ಯಶಸ್ಸಿಗೆ ಸಾಯಾಗಿದ್ದಾರೆ. ಹಿಂದೂ ಧರ್ಮದ ಐಕ್ಯತೆ ಹಿಂದೂಗಳ ಒಗ್ಗಟು ಪ್ರದರ್ಶನ ಧರ್ಮದ ಉಳಿವಿಗಾಗಿ ಧರ್ಮ ಜಾಗೃತಿಗಾಗಿ ಸಮಾಜೋತ್ಸವಗಳು ನಡೆಯುತ್ತಿವೆ ಎಂದರು.
ವಿಜಯಪುರ ಬಸವಕಲ್ಯಾಣ ಮಠದ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜವನ್ನು ಇನ್ನಿಷ್ಟು ಗಟ್ಟಿಗೊಳಿಸಬೇಕು. ಹಿಂದುಗಳು ಒಗ್ಗಟ್ಟಾಗಬೇಕು ಹಾಗೂ ಜಾಗೃತಿಗೊಳಿಸಲು ಎಲ್ಲೆಡೆ ಜಾಗೃತಿ ಹಮ್ಮಿಕೊಳ್ಳಬೇಕು. ದೇಶದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿ ಹಿಂದೂ ಎಂಬ ಭಾವನೆ ಮೂಡಬೇಕು. ನಾವು ಭಾರತೀಯರು ಎಲ್ಲರನ್ನೂ ಸಮಾನರೆಂದು ಕಾಣುತ್ತಿದ್ದೇವೆ. ಧರ್ಮ ಉಳಿದರೆ ನಾವು ಉಳಿಯಲು ಸಾಧ್ಯ ಎಂದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ತಾಲೂಕು ಕಚೇರಿ ಆಂಜನೇಯಸ್ವಾಮಿ ದೇವಾಲಯದಿಂದ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಕಾಲೇಜು ಆಟದ ಮೈದಾನದವರೆಗೂ ವಿವಿಧ ಕಲಾತಂಡ ಮತ್ತು ಸಾಂಸತಿಕ ಕಾರ್ಯಕ್ರಮಗಳೊಂದಿಗೆ ಶೋಭಾಯಾತ್ರೆ ನಡೆಯಿತು. ಚಿಣ್ಣರಿಗೆ ವಿವಿಧ ದೇವತೆಗಳ ದೇಶಭಕ್ತರ ವೇಷಭೂಷಣದ ಅಲಂಕಾರ ನೋಡುಗರ ಗಮನ ಸೆಳೆಯಿತು.
ಹಿಂದೂ ಸಮಾಜೋತ್ಸವದ ಎಚ್.ಎಂ. ರವಿಕುಮಾರ್, ಎಲ್.ಎನ್. ಅಂಬರೀಶಗೌಡ, ಜಿ. ಚಂದ್ರಣ್ಣ, ಚನ್ನಕೇಶವ, ಆರ್.ಕೆ. ನಂಜೇಗೌಡ, ಅಂಬರೀಶ್ ಕೃಷ್ಣಮೂರ್ತಿ, ದೇಶೂ ನಾಗರಾಜ್, ಆರ್.ಪುನೀತ, ಎಸ್.ಆರ್. ವಿಜಯ ಕುಮಾರ್, ಓಬದೇನಹಳ್ಳಿ ಮುನಿಯಪ್ಪ ಗಂಗಾಧರ್ ಮತ್ತಿತರರು ಇದ್ದರು.