ಶಹಾಬಾದ್​ನಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನವನ್ನು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ್​ ಉದ್ಘಾಟಿಸಿದರು. ಶಂಕರಗೌಡ ಪಾಟೀಲ್​, ವೀರೇಂದ್ರ ಪಾಟೀಲ್​, ವನಿತಾ ಸೀತಾಳೆ, ಪರಶುರಾಮ ವನಂಜಕರ ಇದ್ದರು.  
ರಾಜ್ಯ

ಡ್ರಗ್ಸ್​ಮುಕ್ತ ಕಲಬುರಗಿಗೆ ಎಲ್ಲರ ಸಹಕಾರ ಅಗತ್ಯ

ಶಹಾಬಾದ್​: ಡ್ರಗ್ಸ್​ ಮಾರಾಟ ಸೇರಿ ಇನ್ನಿತರ ಚಟುವಟಿಕೆ ತಡೆಗಟ್ಟಲು ಪೊಲೀಸ್​ ಇಲಾಖೆಗೆ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ಡಿವೈಎಸ್​ಪಿ ಶಂಕರಗೌಡ ಪಾಟೀಲ್​ ಹೇಳಿದರು.
ಶರಣಬಸವೇಶ್ವರ ಜ್ಞಾನ ವಿಕಾಸ ಪೀಠದ ಸಭಾಗೃಹದಲ್ಲಿ ನಗರ ಪೊಲೀಸ್​ ಇಲಾಖೆಯಿಂದ ಗುರುವಾರ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ವಿರೋಧಿ ಜಾಗೃತಿ ಅಭಿಯಾನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸೋಷಿಯಲ್​ ಮಿಡಿಯಾ, ಸ್ನೇಹಿತರ ಒತ್ತಡದಿಂದಾಗಿ ಯುವ ಜನತೆ ದಾರಿ ತಪ್ಪುತ್ತಿದ್ದಾರೆ. ಇಂತಹ ಯುವಕರನ್ನು ಸರಿದಾರಿಗೆ ತರಲು ಆಪರೇಷನ್​ ರೈಸ್​ ಮತ್ತು ಬೇಡ ಬ್ರೋ ಎಂಬ ಯುವ ಸ್ನೇಹಿ ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.
ಅಬಕಾರಿ ಡಿವೈಎಸ್​ಪಿ ವೀರೇಂದ್ರ ಪಾಟೀಲ್​, ಪಿಐ ವನಿತಾ ಸೀತಾಳೆ ಮಾತನಾಡಿದರು. ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಂತೋಷ ಪಾಟೀಲ್​ ಉದ್ಘಾಟಿಸಿದರು. ಅಬಕಾರಿ ಪಿಎಸ್​ಐ ಮಹೇಶ ಕುಮಾರ, ಮುಖ್ಯಗುರು ಸುವರ್ಣಾ ನಾಯಕ, ಪಿಎಸ್​ಐ ಚಂದ್ರಕಾಂತ ಮಕಾಲೆ ಇತರರಿದ್ದರು. ವಿವಿಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಿಐ ಪರಶುರಾಮ ವನಂಜಕರ್​ ಸ್ವಾಗತಿಸಿದರು. ಪಿಎಸ್​ಐ ಚೇತನಾ ನಿರೂಪಣೆ ಮಾಡಿದರು. ನಿಸ್ಮೀತಾ ವಂದಿಸಿದರು.