ಯಾದಗಿರಿಯಲ್ಲಿ ಮಂಗಳವಾರ ಹಮ್ಮಿಕೊಂಡ ಅಧ್ಯಯನ ಮತ್ತು -Àಲಿತಾಂಶಗಳ ಅವಲೋಕನ ಕಾರ್ಯಾಗಾರವನ್ನು ಜಿಪಂ ಸಿಇಒ ಲವೀಶ ಒರ್ಡಿಯಾ ಉದ್ಘಾಟಿಸಿದರು. ಪ್ರಶಾಂತ ಕಾಮತ್ ಇತರರಿದ್ದರು. 
ರಾಜ್ಯ

ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ

ಚನ್ನಬಸಯ್ಯ ಗುರುವಿನ

ಪ್ರಮುಖ ಮುಖ್ಯಾಂಶಗಳು

  • All work together unitedly
  • Let's all work together with unity
ಯಾದಗಿರಿ : ಇಲಾಖೆಗಳು ಮತ್ತು ಪಾಲುದಾರರು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಅಭಿವೃದ್ಧಿಯ ವೇಗ ಹೆಚ್ಚಾಗಿ ಯೋಜನೆಗಳು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಸಾಧ್ಯ ಎಂದು ಜಿಪಂ ಸಿಇಒ ಲವೀಶ್ ಒರ್ಡಿಯಾ ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ಟಾಟಾ ಟ್ರಸ್ಟ್ನ ಅಂಗ ಸಂಸ್ಥೆಯಾದ ಕಲಿಕೆ, ಜಿಲ್ಲಾಡಳಿತದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲೆಯಲ್ಲಿ ಜÁರಿಗೊಂಡ ಸಮಗ್ರ ಬಹುಕ್ಷೇತ್ರ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದ ಅಧ್ಯಯನ ಮತ್ತು -Àಲಿತಾಂಶಗಳ ಅವಲೋಕನ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳು ತಮ್ಮ ತಮ್ಮ ಗುರಿ ಸಾಧನೆಯ ಜೊತೆಗೆ ಸಹಯೋಗಿ ಇಲಾಖೆಗಳ ಜೊತೆ ಯಶಸ್ವಿ ಸಂವಹನ ಏರ್ಪಡಿಸಿಕೊಳ್ಳುವುದರಿಂದ ಸಮುದಾಯದ ಅಭಿವೃದ್ಧಿಯೂ ಸಹ ಸಮಗ್ರವಾಗಿ ಆಗುತ್ತದೆ ಎಂದು ನುಡಿದರು.
ಬಾಲ್ಯ ವಿವಾಹ, ಶಾಲಾ ಶಿಕ್ಷಣದಿಂದ ಹೊರಗುಳಿಯುವಿಕೆ, ಅಪೌಷ್ಟಿಕತೆ, ಆರೋಗ್ಯ ಸಮಸ್ಯೆಗಳು, ಜೀವನೋಪಾಯ ಹಾಗೂ ಋತುಮಾನ ವಲಸೆ ಮುಂತಾದ ಸಾಮಾಜಿಕ ಸಮಸ್ಯೆಗಳು ವಿವಿಧ ಇಲಾಖೆಯ ವ್ಯಾಪ್ತಿಗೆ ಬರುತ್ತಿದ್ದರೂ ಪರಸ್ಪರ ಸಂಬAಧ ಹೊಂದಿವೆ. ಈ ಎಲ್ಲ ಕಾರ್ಯಕ್ರಮಗಳ ಯಶಸ್ವಿಯಾಗಲು ಇಲಾಖೆಗಳ ಮಧ್ಯೆ ಹಾಗೂ ಪಾಲುದಾರಿಕೆ ಹೊಂದಿರುವ ಟ್ರಸ್ಟ್ ಗಳ ಮದ್ಯೆ ಸಂವಹನ ಪ್ರಮುಖ ಪಾತ್ರ ವಹಿಸುತ್ತದೆ ಬಹುಕ್ಷೇತ್ರ ಸಹಯೋಗದಿಂದ ಮಾತ್ರ ಶಾಶ್ವತ ಪರಿಹಾರ ಸಾಧ್ಯ ಎಂಬುದನ್ನು ಸಹಭಾಗಿತ್ವದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಅರಿತಿರಬೇಕಾಗಿರುವುದು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಜೀವನೋಪಾಯ ಕ್ಷೇತ್ರಗಳಲ್ಲಿ ಸಮಗ್ರವಾಗಿ ಕೈಗೊಂಡ ಕಾರ್ಯಕ್ರಮಗಳು ಜಿಲ್ಲೆಯ ಅಭಿವೃದ್ಧಿಯಲ್ಲಿ ಮಹತ್ವದ ಬದಲಾವಣೆ ತಂದಿವೆ ಇವು ಇನ್ನು ಹೆಚ್ಚು ಪರಿಣಾಮಕಾರಿಯಾಗಲು ಇನ್ನಷ್ಟು ಸಂವಹನ ಸಹಯೋಗ ಅಗತ್ಯ ಎಂದು ಸಲಹೆ ನೀಡಿದರು.ಕಲಿಕೆ ಟಾಟಾ ಟ್ರಸ್ಟ್ ಕಾರ್ಯನಿರ್ವಾಹಕ ಅಽಕಾರಿ ಶಿವುಕುಮಾರ ಮಾತನಾಡಿ, ೨೦೧೫-೨೦೨೧ರ ಅವಽಯಲ್ಲಿ ಮಿಷನ್ ೨೦೨೦ ಉಪಕ್ರಮದಡಿ ಜÁರಿಗೊಂಡ ಸಮಗ್ರ ಬಹುಕ್ಷೇತ್ರ ಅಭಿವೃದ್ಧಿ ಕಾರ್ಯಕ್ರಮಗಳಿಂದ ಸಾಽಸಿದ ಯಶಸ್ಸಿನ ಕುರಿತು ವಿವರಿಸಿದರು.ಇನ್ನು ಹೆಚ್ಚಿನ -Àಲಿತಾಂಶ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯಾಗಾರದಲ್ಲಿ ಚಿಂತನ ಮಂಥನ ನಡೆಯಲಿದೆ ಎಂದು ಹೇಳಿದರು.ಸರ್ಕಾರ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಸಮುದಾಯದ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಾಗಾರದಲ್ಲಿ ಚರ್ಚೆ ನಡೆದವು.ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳ ಸಂಶೋಧಕರು, ಮುಂಚೂಣಿ ಕಾರ್ಯಕರ್ತರು, ಸಮುದಾಯದ ಪ್ರತಿನಿಽಗಳು ಸೇರಿದಂತೆಯೇ ಇತರರಿದ್ದರು. ಪ್ರಕಾಶ ಕಾಮತ್ ಕಾರ್ಯಕ್ರಮ ನಿರೂಪಿಸಿದರು.