ಯಾದಗಿರಿ ವಾಲ್ಮೀಕಿ ನಗರದಲ್ಲಿರುವ ದಂಡಗುಂಡ ಬಸವಣ್ಣ ದೇವಸ್ಥಾನ ಜಾತ್ರಾ ಮಹೋತ್ಸವ ಧಾರ್ಮಿಕ ಸಭೆಯನ್ನು ಅಬ್ಬೆತುಮಕೂರಿನ ಶ್ರೀ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ಶ್ರೀ ಚನ್ನವೀರ ಸ್ವಾಮೀಜಿ, ಶ್ರೀ ಕುಮಾರ ಸ್ವಾಮೀಜಿ, ಎಸ್.ಬಿ.ನಾಯಕ, ದೇವಿಂದ್ರಪ್ಪ ಯರಗೋಳ, ಬಸವರಾಜ ಪಾಟೀಲ್, ನರಸಪ್ಪ ಬುಡ್ಡಯ್ಯನೊರ, ವಿಶ್ವನಾಥ ನಾಯಕ ಇತರರಿದ್ದರು. 
ರಾಜ್ಯ

ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ನಡೆಯಿರಿ

ಚನ್ನಬಸಯ್ಯ ಗುರುವಿನ

ಪ್ರಮುಖ ಮುಖ್ಯಾಂಶಗಳು

  • ಯಾದಗಿರಿಯಲ್ಲಿ ದಂಡಗುAಡ ಬಸವಣ್ಣ ಜಾತ್ರೆ
  • ಅಬ್ಬೆತುಮಕೂರಿನ ಶಿವಶೇಖರ ಶ್ರೀ ಸಲಹೆ
ಯಾದಗಿರಿ: ಭಾರತೀಯ ಅಧ್ಯಾತ್ಮಕ್ಕೆ ಇಡೀ ವಿಶ್ವದಲ್ಲಿಯೇ ವಿಶೇಷ ಸ್ಥಾನವಿದ್ದು, ಅನಾದಿ ಕಾಲದಿಂದಲೂ ಋಷಿ ಮುನಿಗಳು ಸಮಾಜಕ್ಕೆ ಆಧ್ಯಾತ್ಮಿಕ ಚಿಂತನೆ ಮತ್ತು ಮಾನವೀಯ ಮೌಲ್ಯಗಳ ಸಂದೇಶ ನೀಡಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ಸನ್ಮಾರ್ಗದಲ್ಲಿ ಬದುಕು ನಡೆಸಬೇಕು ಎಂದು ಅಬ್ಬೆತುಮಕೂರಿನ ಅನುಗ್ರಹ ಕ್ಷೇತ್ರದ ಕಿರಿಯ ಶ್ರೀ ಶಿವಶೇಖರ ವಿಶ್ವಾರಾಧ್ಯ ಶಿವಾಚಾರ್ಯರು ನುಡಿದರು.
ನಗರದ ವಾಲ್ಮೀಕಿ ನಗರದ (ಹಿರೇಅಗಸಿ) ಬೆಟ್ಟದ ಮೇಲಿರುವ ದಂಡಗುAಡ ಬಸವಣ್ಣ ದೇವಸ್ಥಾನದ ಜಾತ್ರೆ ನಿಮಿತ್ತ ಸೋಮವಾರ ಹಮ್ಮಿಕೊಂಡ ಧರ್ಮಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ತಮ್ಮ ಬದುಕಿನಲ್ಲಿ ಕಾಯಕದ ಜತೆಗೆ ಧರ್ಮಾಚರಣೆಯಲ್ಲಿ ಬದುಕು ಸಾಗಿಸಿ, ಸಮಾಜಕ್ಕೆ ತಮ್ಮದೇಯಾದ ಕೊಡುಗೆ ನೀಡಬೇಕು ಎಂದು ಹೇಳಿದರು.
ಅಬ್ಬೆ ತುಮಕೂರು ವಿಶ್ವರಾಧ್ಯರಿಗೂ ಹಾಗೂ ಇಲ್ಲಿನ ಬಸವಣ್ಣ ದೇವಸ್ಥಾನಕ್ಕೂ ಮೊದಲಿನಿಂದಲೂ ಅವಿನಾಭಾವ ಸಂಬAಧವಿದೆ, ಈ ಭಾಗದಲ್ಲಿ ಅವರು ಸಂಚರಿಸಿ ಮನುಕುಲಕ್ಕೆ ಒಳಿತು ಮಾಡಿದ್ದಾರೆ ಎಂದರು.
ಬಸವಣ್ಣ ರೈತರ ಜೀವಾಳವಾಗಿದ್ದರೆ. ಆತನನ್ನು ಪೂಜಿಸುವುದರಿಂದ ಸರ್ವ ಸಂಕಷ್ಟ ದೂರವಾಗುತ್ತವೆ. ಆ ಭಗವಂತನ ಕೃಪೆಯಿಂದ ನಾಡಿನಲ್ಲಿ ಒಳ್ಳೆಯ ಮಳೆ, ಬೆಳೆ ಆಗಲಿ ಎಂದು ಶುಭ ನುಡಿದರು. ಧಾರ್ಮಿಕ ಜಾತ್ರೆಗಳು ಹೆಚ್ಚಾಗಿ ನಾವೂ ಗ್ರಾಮೀಣ ಭಾಗದಲ್ಲಿ ಕಾಣುತ್ತೇವೆ. ಸದಾ ಒತ್ತಡದಲ್ಲಿ ಜೀವನ ಸಾಗಿಸುತ್ತಿರುವ ನಗರದ ಜನತೆಯಲ್ಲಿ ಇನ್ನೂ ಕೂಡ ಆಧ್ಯಾತ್ಮಿಕ ಒಲವು ಇರುವುದು ನಮಗೆ ಸಂತಸ ತಂದಿದೆ ಎಂದರು.
ಸೊಪ್ಪಿ ಮಠದ ಚನ್ನವೀರ ಸ್ವಾಮೀಜಿ ಹಾಗೂ ಏಕದಂಡಿಗಿ ಕುಮಾರ ಸ್ವಾಮೀಜಿ ಮಾತನಾಡಿದರು. ಪ್ರಸಕ್ತ ದಿನಗಳಲ್ಲಿ ಯುವಜನತೆ ಎಲ್ಲರೂ ಜಾಗೃತರಾಗಿ ಅನಾದಿ ಕಾಲದಿಂದ ನಡೆದು ಬಂದಿರುವ ಧಾರ್ಮಿಕ ಆಚರಣೆಗಳನ್ನು ಮುಂದುವರೆಸಿಕೊAಡು ಹೋಗಬೇಕು, ಆ ಕಾರ್ಯಗಳಿಂದ ನಿಮಗೆ ಆತ್ಮತೃಪ್ತಿ ಸಿಗುವ ಜೊತೆಗೆ ಬದುಕಿನ ಮೌಲ್ಯ ವೃದ್ಧಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಜಾತ್ರೆ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ದೇಗಳಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ಹಾಗೂ ಕಪ್‌ಗಳನ್ನು ನೀಡಿ ಗೌರವಿಸಲಾಯಿತು. ಈ ವೇಳೆ ಎಸ್.ಬಿ.ನಾಯಕ, ದೇವಿಂದ್ರಪ್ಪ ಯರಗೋಳ, ಬಸವರಾಜ ಪಾಟೀಲï, ನರಸಪ್ಪ ಬುಡ್ಡಯ್ಯನೊರ, ವಿಶ್ವನಾಥ ನಾಯಕ ಇತರರಿದ್ದರು. ಇದಕ್ಕೂ ಮೊದಲು ಭವ್ಯ ರಥೋತ್ಸವ ಜರುಗಿತು.