ಸುರಪುರ ನಗರದ ಹಸನಾಪುರ ಕ್ಯಾಂಪ್​ನಲ್ಲಿ ಬುಧವಾರ ನಮ್ಮ ಕ್ಲಿನಿಕ್​ನಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಟಿಎಚ್​ಒ ಡಾ.ಆರ್​.ವಿ.ನಾಯಕ ಉದ್ಘಾಟಿಸಿದರು. ಮೊಹ್ಮದ್​ ಸಲೀಂ, ಡಾ.ಸುರೇಶ ಹಚ್ಚಡ, ಡಾ.ಹರ್ಷವರ್ಧನ ರಫಗಾರ್​, ಡಾ.ಚಂದ್ರಶೇಖರ, ಡಾ.ಬಾಬಾ ಪಟೇಲ್​ ಇದ್ದರು. 
ರಾಜ್ಯ

ಪ್ರತಿಯೊಬ್ಬರೂ ಆರೋಗ್ಯದ ಕಾಳಜಿ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಟಿಎಚ್​ಒ ಡಾ.ಆರ್​.ವಿ.ನಾಯಕ ಸಲಹೆ
  • ನಮ್ಮ ಕ್ಲಿನಿಕ್​ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸುರಪುರ: ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಆರ್​.ವಿ.ನಾಯಕ ಹೇಳಿದರು.
ನಗರದ ಹಸನಾಪುರ ಕ್ಯಾಂಪ್​ನ ನಮ್ಮ ಕ್ಲಿನಿಕ್​ನಲ್ಲಿ ಜಿಲ್ಲಾಡಳಿತ, ಜಿಪಂ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಮತ್ತು ನಮ್ಮ ಕ್ಲಿನಿಕ್​ನಿಂದ ಬುಧವಾರ ಹಮ್ಮಿಕೊಂಡ ವಿಶೇಷ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರೋಗ್ಯದ ಕಾಳಜಿ ವಹಿಸುವುದರ ಜತೆಗೆ ಆಗಾಗ್ಗೆ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಶಿಬಿರಗಳು ಗ್ರಾಮೀಣ ಹಾಗೂ ನಗರ ಪ್ರದೇಶದ ಜನರಿಗೆ ತಲುಪುವ ಮಹತ್ವದ ಸೇವೆಗಳಾಗಿವೆ ಇವುಗಳ ಮೂಲಕ ಸಾಮಾನ್ಯ ಜನರಿಗೆ ಉಚಿತವಾಗಿ ಆರೋಗ್ಯ ತಪಾಸಣೆ, ಸಲಹೆ ಹಾಗೂ ಚಿಕಿತ್ಸೆ ಲಭಿಸಲಿದೆ ಎಂದು ಹೇಳಿದರು.
ಉಚಿತ ಆರೋಗ್ಯ ತಪಾಸಣೆ ಶಿಬಿರದಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ವೈದ್ಯಕಿಯ ಸೇವೆ ಸುಲಭವಾಗಿ ದೊರೆಯುತ್ತದೆ. ರೋಗಗಳನ್ನು ಆರಂಭದಲ್ಲೇ ಪತ್ತೆಹಚ್ಚಲು ಸಹಾಯವಾಗುತ್ತದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ಸಿಗುತ್ತದೆ. ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚುತ್ತದೆ. ಮಹಿಳೆಯರು, ವೃದ್ಧರು ಹಾಗೂ ಮಕ್ಕಳಿಗೆ ವಿಶೇಷ ಆರೈಕೆ ದೊರೆಯುತ್ತದೆ. ಸಾರ್ವಜನಿಕರಗೆ ಆರೋಗ್ಯಕರ ಜೀವನಶೈಲಿಯ ಅರಿವು ಮೂಡುತ್ತದೆ. ಕಾರಣ ಇಂತಹ ಶಿಬಿರಗಳ ಲಾಭ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ(ಡಯಾಬಿಟಿಸ್​), ಎಚ್​ಐವಿ ಪರೀೆಗಳ ಜತೆಗೆ ಆರೋಗ್ಯ ಇಲಾಖೆಯ ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಲಾಯಿತು. ನಮ್ಮ ಕ್ಲಿನಿಕ್​ನಲ್ಲಿ ಜರುಗಿದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 231ಹೊರ ರೋಗಿಗಳ ಆರೋಗ್ಯ ತಪಾಸಣೆ ನಡೆಯಿತು. ಎದೆ ಎಕ್ಸರೆ&76, ಬಿಪಿ, ಶುಗರ್​&21, ದಂತ ಪರೀೆ&42, ನೇತ್ರ ಪರೀೆ&43, ಹೆಚ್​ಐವಿ, ಆರ್​ಬಿಎಸ್​&161 ಪರೀಸಲಾಯಿತು. 
ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಮೊಹ್ಮದ್​ ಸಲೀಂ, ಪಶು ಸಂಗೋಪನಾ ಇಲಾಖೆ ಎಡಿ ಡಾ.ಸುರೇಶ ಹಚ್ಚಡ, ವೈದ್ಯರಾದ ಡಾ.ಹರ್ಷವರ್ಧನ ರಫಗಾರ್​, ಡಾ.ಚಂದ್ರಶೇಖರ, ಡಾ.ಬಾಬಾ ಪಟೇಲ್​ ವೇದಿಕೆಯಲ್ಲಿದ್ದರು. ನೇತ್ರಾಧಿಕಾರಿ ಸಮೀಮ್​, ಆರೋಗ್ಯ ಇಲಾಖೆಯ ಹಣಮಂತ ಅನವಾರ, ರಾವೇಂದ್ರ ನಾಯಕ, ಚಿದಾನಂದ, ಪ್ರದಿಪ್​, ಶ್ರೀಕಾಂತಯ್ಯ, ಸತೀಶ, ವೆಂಕಟೇಶ, ಚೇತನ ಸೇರಿ ಇತರರಿದ್ದರು.
ಸೂಕ್ತ ಚಿಕಿತ್ಸೆಯಿಂದ ಟಿಬಿ ಗುಣಮುಖ
ಕ್ಷಯ ರೋಗವು (ಟಿಬಿ) ವಿಶ್ವದ ಮಾರಣಾಂತಿಕ ಕಾಯಿಲೆಗಳಲ್ಲಿ ಒಂದಾಗಿದೆ. ಇದನ್ನು ಆರಂಭಿಕ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣವಾಗಿ ಗುಣಪಡಿಸಬಹುದು. ಯಾರು ಸಹ ಕ್ಷಯ ರೋಗದ ಬಗ್ಗೆ ಭಯಪಡುವ ಅಗತ್ಯವಿಲ್ಲ. ತೂಕ ಇಳಿಕೆ, ಕಫದಲ್ಲಿ ರಕ್ತ ಬರುವುದು, ರಾತ್ರಿ ವೇಳೆ ಜ್ವರ ಬರುವುದು ಮತ್ತು ಎರಡು ವಾರಕ್ಕಿಂತ ಹೆಚ್ಚಿನ ಕೆಮ್ಮು ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಕಫಾ ಪರೀೆ ಮಾಡಿಸಿಕೊಳ್ಳಬೇಕು ಎಂದು ಕ್ಷಯ ರೋಗ ಮುಕ್ತ ಸಮಾಜಕ್ಕೆ ಟಿಎಚ್​ಒ ಡಾ.ಆರ್​ವಿಎನ್​ ಕರೆ ನೀಡಿದರು. ಶಿಬಿರದಲ್ಲಿ ಹಾಜರಿದ್ದ ಗರ್ಭಿಣಿಯರಿಗೆ ಕಡ್ಡಾಯವಾಗಿ ನಾಲ್ಕು ಬಾರಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮತ್ತು ಸುರತ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಯನ್ನೇ ಆಶ್ರಯಿಸುವಂತೆ ಸೂಚಿಸಲಾಯಿತು. ಆ ಮೂಲಕ ತಾಯಿ ಮತ್ತು ಶಿಶು ಮರಣದ ಪ್ರಮಾಣ ಕಡಿಮೆ ಮಾಡಲು ಅರಿವು ಮೂಡಿಸಲಾಯಿತು.