ವಡಗೇರಾದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಶಿಬಿರವನ್ನು ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್ ಉದ್ಘಾಟಿಸಿದರು. ಯೋಜನಾಽಕಾರಿ ಶೋಭಾ ಹೋಲಿ, ಡಾ.ಕೆ.ಸಿದ್ದರಾಜು, ಡಾ.ಶ್ರೀವಿದ್ಯಾ, ಬಸವರಾಜ ಸಾಹುಕಾರ ಸೊನ್ನದ, ಶಿವಕುಮಾರ ಕೊಂಕಲ್ ಇತರರಿದ್ದರು.
- ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಸಲಹೆ
- ವಡಗೇರಾದಲ್ಲಿ ಉಚಿತನ ನೇತ್ರ ತಪಾಸಣಾ ಶಿಬಿರ
ವಡಗೇರಾ : ಕಣ್ಣು ಮನುಷ್ಯನ ಜÁ್ಞನೇಂದ್ರಿಯಗಳಲ್ಲಿ ಅತ್ಯಂತ ಪ್ರಮುಖ ಅಂಗವಾಗಿದ್ದು, ಅದರ ಆರೋಗ್ಯ ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಬೀದರ್- ಕಲಬುರಗಿ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಸಿದ್ದಣ್ಣಗೌಡ ಕಾಡಂನೋರ್ ಹೇಳಿದರು.
ಪಟ್ಟಣದ ಬಸವಣ್ಣ ಗುಡಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿಸಿ ಟ್ರಸ್ಟ್) ಹಾಗೂ ವೇದ ಕಣ್ಣಿನ ಆಸ್ಪತ್ರೆ ಯಾದಗಿರಿ ಆಶ್ರಯದಿಂದ ಬುಧವಾರ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣಿನ ತಪಾಸಣೆ ನಿಯಮಿತವಾಗಿ ಮಾಡಿಸಿಕೊಳ್ಳುವುದರಿಂದ ಅನೇಕ ದೃಷ್ಟಿದೋಷಗಳು ಆರಂಭದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ಪಡೆಯಬಹುದು. ಕಣ್ಣಿನ ಸಮಸ್ಯೆಗಳು ವ್ಯಕ್ತಿಯ ಆರೋಗ್ಯ ಮತ್ತು ಜೀವನದ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುತ್ತವೆ. ಡಾ.ವೀರೇಂದ್ರ ಹೆಗಡೆ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಜನರ ಆರೋಗ್ಯಕ್ಕಾಗಿ ಇಂತಹ ಉಚಿತ ಶಿಬಿರ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ತಾಲೂಕು ಯೋಜನಾಽಕಾರಿ ಶೋಭಾ ಹೋಲಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ ಆರೋಗ್ಯ, ಶಿಕ್ಷಣ, ಜ್ಞಾನವಿಕಾಸ ಸೇರಿ ವಿವಿಧ ಸಾಮಾಜಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಸುತ್ತಿದ್ದು, ಮಾತೃಶ್ರೀ ಹೇಮಾವತಿ ಅಮ್ಮನ ಅವರ ಕನಸಿನ ಯೋಜನೆಗಳ ಮೂಲಕ ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ವೇದ ಕಣ್ಣಿನ ಆಸ್ಪತ್ರೆ ವೈದ್ಯಾಽಕಾರಿ ಡಾ.ಕೆ.ಸಿದ್ದರಾಜು ಮಾತನಾಡಿ, ಕಣ್ಣಿನ ಆರೋಗ್ಯದ ಮಹತ್ವ, ದೃಷ್ಟಿದೋಷಗಳ ತಡೆ ಹಾಗೂ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವ ಅಗತ್ಯ ಕುರಿತು ಮಾಹಿತಿ ನೀಡಿದರು. ಉಚಿತ ಕಣ್ಣಿನ ತಪಾಸಣೆ ಶಿಬಿರದ ಸೌಲಭ್ಯª ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಶಿಬಿರದಲ್ಲಿ ವಡಗೇರಾ ಸರ್ಕಾರಿ ಆಸ್ಪತ್ರೆಯ ದಂತ ವೈದ್ಯಾಽಕಾರಿ ಡಾ.ಶ್ರೀವಿದ್ಯಾ ಅವರ ತಂಡ ಹಲ್ಲು, ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ (ಶುಗರ್) ತಪಾಸಣೆ ಮಾಡಿದರು. ಈ ವೇಳೆ ಬಸವರಾಜ ಸಾಹುಕಾರ ಸೊನ್ನದ, ಶಿವಕುಮಾರ ಕೊಂಕಲ್, ಸ್ಥಳೀಯ ಸೇವಾಪ್ರತಿನಿಽ ಶಿವರಾಜಪ್ಪ, ಆಶೀಪ್, ಜ್ಯೋತಿ, ಸ್ವಸಹಾಯ ಸಂಘಗಳ ಸದಸ್ಯರು ಸೇರಿ ಅನೇಕರು ಇದ್ದರು. ವಲಯದ ಮೇಲ್ವಿಚಾರಕ ಶ್ರೀಕಾಂತ ನಿರೂಪಿಸಿ, ವಂದಿಸಿದರು.