ಕಾಳಗಿ ತಾಲೂಕಿನ ಕೋಡ್ಲಿಯಲ್ಲಿ ರಾಮಶೆಟ್ಟಿ ಕೋಲಕುಂದಿ ಅವರ 26ನೇ ಪೂಣ್ಯಸ್ಮರಣೆ ನಡೆಯಿತು. ರಾಮಲಿಂಗರೆಡ್ಡಿ ದೇಶಮುಖ, ಮಲ್ಲಿನಾಥ ಕೋಲಕುಂದಿ, ವಿಜಯಕುಮಾರ ಚೇಂಗಟಿ ಇತರರಿದ್ದರು.
- ಶ್ರೀ ಬಸವಲಿಂಗ ಶಿವಾಚಾರ್ಯರು ಸಲಹೆ
- ಕೋಡ್ಲಿ ನೇತ್ರ ತಪಾಸಣೆ ಶಿಬಿರ
ಕಾಳಗಿ: ಪ್ರತಿಯೊಬ್ಬರೂ ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಕೋಡ್ಲಿ ಹಿರೇಮಠದ ಶ್ರೀ ಬಸವಲಿಂಗ ಶಿವಾಚಾರ್ಯ ಹೇಳಿದರು.
ಕೋಡ್ಲಿಯಲ್ಲಿ ರಾಮಶೆಟ್ಟಿ ಕೋಲಕುಂದಿ ಅವರ 26ನೇ ಪೂಣ್ಯಸ್ಮರಣೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣೆ ಶಿಬಿರದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಕಣ್ಣುಗಳು ದೇಹದ ಪ್ರಮುಖ ಅಂಗಗಳಾಗಿದ್ದು, ನೇತ್ರ ಆರೋಗ್ಯದ ಬಗ್ಗೆ ರ್ನಿಲಕ್ಷ ಬೇಡ. ನಿರಂತರ ತಪಾಸಣೆ ಮಾಡಿಕೊಳ್ಳಬೇಕು. ಸಮಸ್ಯೆ ಉಂಟಾಗುವುದಕ್ಕೂ ಮುನ್ನವೇ ವೈದ್ಯರನ್ನು ಕಂಡು ಕಣ್ಣು ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಪ್ರಮುಖರಾದ ಮಲ್ಲಿನಾಥ ಕೋಲಕುಂದಿ, ವಿಜಯಕುಮಾರ ಚೇಂಗಟಿ, ಶಶಿಕಾಂತ ಆಡಕಿ, ಬಸವರಾಜ ಕರಕಮುಕಳಿ, ಸಿದ್ದು ಬುಬಲಿ, ಜಗನ್ನಾಥ ಮಗಿ, ಶಿವು ಸುಲೇಪೇಟ, ಸಿದ್ದಪ್ಪ ಪೆದ್ದಿ, ತುಳಜಪ್ಪ ಮಂತಟ್ಟಿ, ಉಮೇಶ ಯಲಮಡಗಿ, ತೋಟಪ್ಪ ತಾಂಡೂರ ಇತರರಿದ್ದರು.
ಶರಣ ನೇತ್ರಾಲಯದ ಡಾ.ರೋಹಿತ ಪಾಟೀಲ್ ನೇತೃತ್ವದ ತಂಡ ಕಣ್ಣು ತಪಾಸಣೆ ಮಾಡಿತು. 205 ಜನರ ನೇತ್ರ ತಪಾಸಣೆ ಮಾಡಿದ್ದು, ಅವರಲ್ಲಿ 20 ಜನರನ್ನು ಶಸಚಿಕಿತ್ಸೆಗೆ ಆಯ್ಕೆ ಮಾಡಿದರು.