ದೊಡ್ಡಬಳ್ಳಾಪುರದ ಡಾ.ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಪತ್ರಕರ್ತರನ್ನು ಅಭಿನಂದಿಸಲಾಯಿತು. ಹಿರಿಯ ಕನ್ನಡ ಪರ ಹೋರಾಟಗರಾರದ ತ.ನ ಪ್ರಭುದೇವ, ಪ್ರಮಿಳಾ ಮಹದೇವ, ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ನಂಜಪ್ಪ, ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರೆಡ್ಡಿ, ರಾಜ್ಯ ಸಮಿತಿ ನಯಾಜ್ ಖಾನ, ಗಂಗರಾಜಪ್ಪ, ರಾಜ್ಯ ಯುವ ಘಟಕದ ಅಜಯ್, ಮಂಜುನಾಥ, ಪ್ರಮೋದ್, ಪೀರ್ ಪಾಷಾ, ಶಿವಕುಮಾರ್ ವೈರ್ ಇದ್ದರು.
ದೊಡ್ಡಬಳ್ಳಾಪುರ : ಕನ್ನಡ ಮನೆ ದೇವರಂತೆ ಆರಾಧಿಸಿ, ವರ್ಷವೀಡಿ ಸ್ಮರಿಸಬೇಕು. ಈ ಮೂಲಕ ಭಾಷೆಯ ಬಳಕೆ ಮತ್ತು ಉಳಿವಿಗೆ ಪ್ರತಿಯೊಬ್ಬರೂ ಕಾಯೋರ್ನ್ಮುಖನಾಗಬೇಕು ಎಂದು ಹಿರಿಯ ಕನ್ನಡಪರ ಹೋರಾಟಗಾರ ರಾಜಘಟ್ಟ ರವಿ ಹೇಳಿದರು.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ಭಾನುವಾರ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಮತ್ತು ಸಂಘಟನೆಯ 3ನೇ ವರ್ಷಾಚರಣೆಯಲ್ಲಿ ಮಾತನಾಡಿದರು. ಕನ್ನಡ ಪಕ್ಷದ ಉಪಾಧ್ಯಕ್ಷ ಸಂಜೀವನಾಯಕ್ ಮಾತನಾಡಿ, ನಮ್ಮ ಅಕ್ಕಪಕ್ಕದ ರಾಜ್ಯಗಳಲ್ಲಿ ಪ್ರಾದೇಶಿಕತೆಯ ಅಸ್ಮಿತೆ ಇಂದಿಗೂ ಜೀವಂತವಾಗಿದೆ. ಅಲ್ಲಿನ ಸಂಸದರು ತಮ್ಮ ರಾಜ್ಯಕ್ಕೆ ಅಪಾಯ ಎದುರಾದರೆ ಒಂದಾಗಿ ಹೋರಾಡಿ ಕೇಂದ್ರದ ಮೇಲೆ ಒತ್ತಡ ಹೇರುತ್ತಾರೆ.
ಆದರೆ ನಮ್ಮ ರಾಜ್ಯದಲ್ಲಿನ ಸಂಸದರು ಮೂಕವಿಸ್ಮಿತರಂತೆ ನೋಡುತ್ತಾರೆ. ಹೀಗಾಗಿ ಮುಂದಿನ ಸ್ಥಳಿಯ ಸಂಸ್ಥೆಗಳಲ್ಲಿ ಪ್ರಾದೇಶಿಕವಾಗಿ ನೆಲ, ಜಲ, ಭಾಷೆ, ಸ್ಥಳಿಯ ಸಮಸ್ಯೆಗಳಿಗೆ ಸ್ಪಂದಿಸುವವರಿಗೆ ಕನ್ನಡಿಗರು ಆದ್ಯತೆ ನೀಡಬೇಕು. ಹೋರಾಟದ ಮೂಲಕ ಎಂತಹ ದೊಡ್ಡ ಸಾಧನೆ ಬೇಕಾದರೂ ಮಾಡಬಹುದು. ನಗರದಲ್ಲಿ ಹೋರಾಟದ ಮೂಲಕವೇ 380 ಮನೆಗಳನ್ನೂ ಮಂಜೂರು ಮಾಡಿಸಲಾಗಿತ್ತು ಎಂದರು.
ಅಲ್ಪಸಂಖ್ಯಾತ ಮುಖಂಡ ಬಿ.ಜೆಡ್.ಫೈರೋಜ್ ಖಾನ್ ಮಾತನಾಡಿ, ಮನೆಗಳಲ್ಲಿ ಯಾವುದೇ ಭಾಷೆ ಮಾತನಾಡಿದರೂ ಸಾರ್ವಜನಿಕವಾಗಿ ಪ್ರತಿಯೊಬ್ಬರು ಕನ್ನಡವನ್ನೇ ಮಾತನಾಡಬೇಕು. ಕನ್ನಡ ಉಳಿಸಲು ನಾವೆಲ್ಲಾ ಒಂದಾಗಿ ದುಡಿಯೋಣ ಎಂದು ಹೇಳಿದರು. ಮಹಿಳೆಯರಿಗೆ ಸೀರೆ ವಿತರಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷ ಸೋಮರಾಜು, ಕಾರ್ಯದರ್ಶಿ ಚಂದ್ರಶೇಖರಯ್ಯ, ವೆಂಕೋಬಾ, ವಿನಯ್ ಪ್ರಸಾದ್, ರಮೇಶ್, ಅಂಜಿನ ಮೂರ್ತಿ, ಅಬ್ದುಲ್ ಕಲೀಮ್, ರಾಧಾಕೃಷ್ಣ, ವೆಂಕಟೇಶ್, ಮಹಿಳಾ ಘಟಕದ ಶಶಿಕಲಾ, ರೇಷ್ಮಾ, ಪದ್ಮಾವತಿ, ತಾಲೂಕು ಅಧ್ಯಕ್ಷೆ ನಾಗರತ್ನಮ್ಮ, ನವ್ಯಾ, ನಗರಾಧ್ಯಕ್ಷೆ ನಾಗವೇಣಿ, ರಾಗಿಣಿ, ವಿಜಯಲಕ್ಷಿ$್ಮ, ಸಂಕಲ್ಪಾ ಇತರರು ಇದ್ದರು.