ಪ್ರತಿಯೋಬ್ಬರೂ ನಂದಿನಿ ಉತ್ಪನ್ನ ಬಳಸಿ Nandini products 
ರಾಜ್ಯ

ಪ್ರತಿಯೋಬ್ಬರೂ ನಂದಿನಿ ಉತ್ಪನ್ನ ಬಳಸಿ Nandini products

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳೀಕೆ
ಬೂದಿಕೋಟೆ: ಯಾವುದೇ ಗ್ರಾಮದಲ್ಲಿ ಗ್ರಾಮಸ್ಥರು ಡೇರಿ ತೆರಿಯಬೇಕು ಎಂದು ಮನವಿ ಕೊಟ್ಟರೆ ಡೇರಿ ಪ್ರಾರಂಭಿಸಲು ಸಿದ್ಧರಿದ್ದೇವೆ. ನಂದಿನಿ ಉತ್ಪನ್ನಗಳನ್ನು ಪ್ರತಿಯೊಬ್ಬರೂ ಬಳಸಿ ರೈತರ ಸಂಸ್ಥೆ ಉಳಿಸಿ ಎಂದು ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಹೇಳಿದರು.Nandini products
ತಾಲೂಕಿನ ಆಲಂಬಾಡಿ, ಜೊತೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೀರೆಕರಪನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಹಾಗೂ 3,000 ಲೀ. ಶೇಖರಣೆಯಾಗುವ ಬಿಎಂಸಿಯನ್ನು ಉದ್ಘಾಟಿಸಿ ಮಾತನಾಡಿ, ಡೇರಿ ಪ್ರಾರಂಭದ ದಿನಗಳಲ್ಲಿ 200 ಲೀ. ಹಾಲು ಶೇಖರಣೆ ಆಗುತ್ತಿತ್ತು. ಇಂದು 2,000 ಲೀ. ಶೇಖರಣೆಯಾಗುತ್ತಿದೆ ಎಂದರು.
ಮಹಿಳೆಯರ ಕೈಗೆ ಸೇರುವ ಹಣ ಯಾವುದಾದರೂ ಇದ್ದರೆ ಅದು ಹಾಲು ಡೇರಿ ಹಣ ಮಾತ್ರ. ನೇರವಾಗಿ ಖಾತೆಗೆ ಹಣ ಬರುತ್ತದೆ. ನಮ್ಮ ಸರ್ಕಾರ ಬಂದ ನಂತರ ಉತ್ಪಾದಕರಿಗೆ ಬೋನಸ್​ ನೀಡುತ್ತಿದ್ದೇವೆ. ಮೃತಪಟ್ಟ ಹಸುಗಳಿಗೆ ಇನ್ಸೂರೆನ್ಸ್​ ಮೂಲಕ 60&70 ಸಾವಿರ ರೂ. ಪರಿಹಾರ ನೀಡುತ್ತಿದ್ದೇವೆ ಎಂದು ಹೇಳಿದರು.
ಗ್ರಾಮದಲ್ಲಿ 1,500 ಮನೆಗಳಿದ್ದು, ನಂದಿನಿ ಮಿಲ್ಕ್​ ಪಾರ್ಲರ್​ ನೀಡಲು ನಾನು ಸಿದ್ಧನಿದ್ದೇನೆ. ಪ್ರತಿಯೊಬ್ಬರು ನಂದಿನಿ ಉತ್ಪನ್ನ ಬಳಸಿ ಇದರಿಂದ ರೈತರಿಗೂ ಲಾಭ ಆಗುತ್ತದೆ. ಸಂಸ್ಥೆಯೂ ಬೆಳೆಯುತ್ತದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಅಂಬರೀಶ್​, ಭಾಗ್ಯಮ್ಮ, ಮುಖಂಡರಾದ ಪಾರ್ಥಸಾರಥಿ, ಎ.ಬಾಬು, ನಾರಾಯಣಸ್ವಾಮಿ, ನತ್ತಿಬೆಲೆ ರಮೇಶ್​, ಭೀಮಣ್ಣ ಇತರರು ಇದ್ದರು.