ಔರಾದ್ ತಾಲೂಕಿನ ಸಂತಪುರ ದೀಪಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಆರ್ಎ್ಒ ಎಂ.ಡಿ.ಮುದಾಸಿರ್, ಎಎಸ್ಐ ಏಕನಾಥ, ಶ್ರೀನಾಥ, ಶಿವಕಾಂತಯ್ಯ ಮಠಪತಿ, ಸಿಸ್ಟರ್ ಪ್ರೀತಿ ಹಾಗೂ ಮಕ್ಕಳಿದ್ದರು.
- ಆರ್ಎಫ್ಒ ಎಂ.ಡಿ.ಮುದಾಸಿರ್ ಕರೆ
- ಸಂತಪುರದಲ್ಲಿ ವನಮಹೋತ್ಸವ
ಔರಾದ್: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಮತ್ತು ಪರಿಸರ ಉಳಿವಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಆರ್ಎಫ್ಒ ಎಂ.ಡಿ.ಮುದಾಸಿರ್ ಹೇಳಿದರು.
ತಾಲೂಕಿನ ಸಂತಪುರ ದೀಪಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಪರಿಸರದ ಬಗ್ಗೆ ಜಾಗೃತಿಗೊಳಿಸಬೇಕು. ಸಸಿಗಳನ್ನು ನೆಟ್ಟು ಅವುಗಳ ಪಾಲನೆ ಮಾಡುವುದು ತಿಳಿಸಬೇಕು ಎಂದರು.
ಮುಖ್ಯಗುರು ಸಿಸ್ಟರ್ ಪ್ರೀತಿ ಮಾತನಾಡಿ, ಪರಿಸರ ಇಲ್ಲದೆ ಏನೂ ಇಲ್ಲ. ಉಸಿರಾಡಲು ಬದುಕಲು ಆಗುವುದಿಲ್ಲ. ಪ್ರತಿಯೊಬ್ಬರೂ ಪರಿಸರ ಜಾಗೃತಿಗೆ ಕೈಜೋಡಿಸಬೇಕು. ನೆಲ ಜಲ, ಕಾಡು ಉಳಿದರೆ ನಾಡು ಉಳಿಯುತ್ತದೆ. ಇಂದಿನ ದಿನಗಳಲ್ಲಿ ಮರಗಳನ್ನು ಕಡಿದು, ದೊಡ್ಡ ದೊಡ್ಡ ರೆಸಾರ್ಟ್ಸ್ ಮತ್ತು ಹೋಂಸ್ಟೇ ಮಾಡುತ್ತಿರುವುದು ಪರಿಸರಕ್ಕೆ ಹಾನಿಯುಂಟು ಮಾಡುವ ಆತಂಕ ಎದುರಾಗಿದೆ. ಪ್ರತಿಜ್ಞೆ ಮಾಡಿ ಮರಗಳ ಸಂರಕ್ಷಣೆ ಮತ್ತು ಮರಗಳ ನೆಟ್ಟು ಬೆಳೆಸುವ ಜವಾಬ್ದಾರಿ ವಹಿಸಬೇಕು ಎಂದು ತಿಳಿಸಿದರು.
ಎಎಸ್ಐ ಏಕನಾಥ, ಶ್ರೀನಾಥ, ಶಿವಕಾಂತಯ್ಯ ಮಠಪತಿ, ಸಿ.ರೇಷ್ಮಾ, ಸಿ.ಜನೆತ, ಮಾರಿಯಾ ಶಾಂತಿ ಇತರರಿದ್ದರು. ಶಾಲೆಯ ಮಕ್ಕಳಿಂದ ಪರಿಸರಕ್ಕೆ ಸಂಬಂಧಿಸಿದ ಕಿರುಚಿತ್ರ ಮತ್ತು ನಾಟಕ ಜರುಗಿದವು.