Everyone should participate in divine works. 
ರಾಜ್ಯ

ದೈವ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳಿ

ತುಮಕೂರು ಡೆಸ್ಕ್
ಪಾವಗಡ : ಮಲ್ಲಿಕಾರ್ಜುನಸ್ವಾಮಿ ಪ್ರತಿಷ್ಠಾಪನೆ ಸಾಮಾನ್ಯ ಪುಣ್ಯ ಕಾರ್ಯವಲ್ಲ, ಮಹಾ ಪುಣ್ಯ ಕಾರ್ಯವಾಗಿದೆ. ಇಂತಹ ದೈವ ಕಾರ್ಯಗಳಲ್ಲಿ ಪ್ರತಿಯೊಬ್ಬರೂ ತನು, ಮನ, ಧನ ಅರ್ಪಿಸಿ ಜೀವನವನ್ನು ಪವಿತ್ರಗೊಳಿಸಬೇಕು ಎಂದು ಸಿದ್ಧರಬೆಟ್ಟ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ನಿಡಗಲ್​ ದುರ್ಗದಲ್ಲಿ ಬುಧವಾರ ಶ್ರೀ ನಿಡಗಲ್​ ವೀರಭದ್ರ ಸೇವಾ ಸಮಿತಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಹಮ್ಮಿಕೊಂಡಿದ್ದ ಮಲ್ಲಿಕಾರ್ಜುನಸ್ವಾಮಿ ಲಿಂಗ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಂಧ್ರಪ್ರದೇಶದ ಅನಂತಪುರ ಕಲ್ಲುಹೊಳೆ ಮಠದ ಚೆನ್ನಾವಿರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಪ್ರಕೃತಿಯಲ್ಲಿ ದೈವ, ಗುರು ಹಾಗೂ ಪಾಲಕರ ಸೇವೆ ಅತ್ಯಂತ ಮುಖ್ಯ. ಈ ಮೂರು ಸೇವೆಗಳಿಂದಲೇ ಮುಕ್ತಿ ಸಾಧ್ಯ. ನರ್ಮದಾ ನದಿಯಲ್ಲಿ ಉದ್ಭವಗೊಂಡ ಲಿಂಗ ಕಲ್ಲು ನಿಡಗಲ್​ ಪ್ರದೇಶಕ್ಕೆ ವಿಶೇಷ ಪವಿತ್ರತೆ ತಂದಿದೆ ಎಂದರು.
ಸತ್ಯಂಪೇಟೆ ಹಾಗೂ ಜೈನಾಪುರದ ಬೃಹನ್ಮಠದ ಶ್ರೀ ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದೇಗುಲ ನಿರ್ಮಾಣದಿಂದ ಸಮಾಜಕ್ಕೆ ಸರ್ವ ಕಾಲಕ್ಕೂ ಒಳಿತು ದೊರೆಯುತ್ತದೆ. ನಿಡಗಲ್​ ಮಲ್ಲಿಕಾರ್ಜುನ ಸ್ವಾಮಿ ೇತ್ರ ಎರಡನೇ ಶ್ರೀಶೈಲವಾಗಿ ಬೆಳೆವಂತಾಗಲಿ ಎಂದು ಹಾರೈಸಿದರು.
ಮಲ್ಲಿಕಾರ್ಜುನಸ್ವಾಮಿ ಲಿಂಗ ಪ್ರತಿಷ್ಠಾಪನೆಯು ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಳಸ ಪ್ರತಿಷ್ಠಾಪನೆ, ಮೂಲಮಂತ್ರ ಹವನ, ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಮಿತಿಯ ಅಧ್ಯ ವೀರಭದ್ರಯ್ಯ, ಕೋಶಾಧ್ಯ ಡಿ.ಸಿ.ವಿಶ್ವನಾಥ್​, ನಿವೃತ್ತ ಪ್ರಾಂಶುಪಾಲ ಸದಾಶಿವಯ್ಯ, ಶಿಕ ಮಲ್ಲಿಕಾರ್ಜುನ, ಜಗದೀಶ್​ ನಾಯಕ, ಬಸವರಾಜು, ಕಲ್ಯಾಣದುರ್ಗ ಸಮಿತಿ ಅಧ್ಯ ಮಲ್ಲಿಕಾರ್ಜುನ ಬಾಬು, ಶಿವಪ್ಪ, ಪ್ರವಿಣ್​ ಕುಮಾರ್​, ಅನಿತಾ ಮಂಜುನಾಥ್​ ಇದ್ದರು.