ಹಳ್ಳಿಖೇಡ (ಬಿ)ದಲ್ಲಿ ಬುಧವಾರ ಆಯೋಜಿಸಿದ್ದ ರೈತರೆಡೆಗೆ ನಮ್ಮ ನಡೆ ಕಾರ್ಯಕ್ರಮ ತಹಶೀಲ್ದಾರ್​ ಜಗದೀಶ ಚೌರ್​ ಸಸಿ ನಡೆಸಿ ಉದ್ಘಾಟಿಸಿದರು.ಶ್ರೀ ಚಳಕಾಪುರ ಸಿದ್ದರೊಡ ಮಠದ ಶಂಕರಾನಂದ ಸ್ವಾಮಿ,ಶ್ರೀ ಹೊನ್ನಲಿಂಗೇಶ್ವರ ಸ್ವಾಮಿ, ಶರಣಕುಮಾರ ಕಲ್ಯಾಣಿ, ದೇವರಾಜ ಹೊಡಮನಿ ಸೇರಿದಂತೆ ಇತರೆ ಅಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು. 
ರಾಜ್ಯ

ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಕೈಜೋಡಿಸಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್​ ಜಗದೀಶ ಚೌರ್​ ಕರೆ
  • ಹಳ್ಳಿಖೇಡ(ಬಿ)ದಲ್ಲಿ ರೈತರೆಡೆಗೆ ನಮ್ಮ ನಡೆ ಕಾರ್ಯಕ್ರಮ
ಹುಮನಾಬಾದ್​: ಪ್ರಕೃತಿಯೊಂದಿಗೆ ಸಮತೋಲನದಿಂದ ಬದುಕಿದರೆ ಮಾತ್ರ ಮಾನವ ಜೀವನ ಸುರಕ್ಷಿತವಾಗಿರಲಿದೆ ಎಂದು ತಹಸೀಲ್ದಾರ್​ ಜಗದೀಶ ಚೌರ್​ ಹೇಳಿದರು.
ಹಳ್ಳಿಖೇಡ (ಬಿ)ದ ಸರಸ್ವತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಪರಿಸರ ವಾಹಿನಿ ಸಹಯೋಗದಲ್ಲಿ ಬುಧವಾರ ದೇವರಾಜ ಹೊಡೆಮನಿ ಅವರ ತೋಟದಲ್ಲಿ ಆಯೋಜಿಸಿದ್ದ ರೈತರೆಡೆಗೆ ನಮ್ಮ ನಡೆ ಹಾಗೂ ವನಮೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಾಡು-ನಾಡಿನ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಮರಗಳನ್ನು ಬೆಳೆಸಬೇಕು. ರೈತರು ಹೊಲದ ಸುತ್ತ ಹಣ್ಣಿನ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ ಚಳಕಾಪುರ ಸಿದ್ದರೊಡ ಮಠದ ಶ್ರೀಶಂಕರಾನಂದ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಕೃಷಿ ಬಗ್ಗೆ ತಿಳುವಳಿಕೆ ಬೆಳೆಸುವುದು ಅಗತ್ಯ ಎಂದರು.
ಕೃಷಿ ಸಹಾಯಕ ನಿರ್ದೇಶಕ ಶರಣಕುಮಾರ ಕಲ್ಯಾಣಿ ಪರಿಸರ ಸಂರಕ್ಷಣೆ ಮತ್ತು ಕೃಷಿಯಲ್ಲಿ ಮರಗಳ ಮಹತ್ವ ಕುರಿತು ವಿವರಿಸಿದರು.
ಸಾಮಾಜಿಕ ವಲಯ ಅರಣ್ಯಾಧಿಕಾರಿ ಪ್ರಕಾಶ ನಿಪ್ಪಾಣಿ ಕೃಷಿ ಅರಣ್ಯ ಯೋಜನೆಗಳ ಸದುಪಯೋಗ ಪಡೆಯುವಂತೆ ರೈತರಿಗೆ ಕರೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ದೇವರಾಜ ಹೊಡೆಮನಿ ಅಧ್ಯಕ್ಷತೆ ವಹಿಸಿದ್ದರು. ಸಿಂಧನಕೇರಾದ ಶ್ರೀ ಹೊನ್ನಲಿಂಗೇಶ್ವರ ಸ್ವಾಮಿ ಬಿಇಒ, ವೆಂಕಟೇಶ ಗುಡಾಳ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ರಾಜಶೇಖರ ಬಸನಾಯಕ, ಪರಿಸರ ವಾಹಿನಿಯ ಶೈಲೇಂದ್ರ ಕಾವಡಿ, ವಕೀಲರ ಸಂಘದ ತಾಲೂಕು ಉಪಾಧ್ಯಕ್ಷೆ ಅನೀತಾ ಪ್ರಭಾ, ಪುರಸಭೆ ಮುಖ್ಯಾಧಿಕಾರಿ ಶಿವಶಂಕರ ಪಾಟೀಲ್​, ಪೂಜಾ ಪಾನಶೆಟ್ಟಿ, ಎಸ್​.ಎಸ್​. ಹೊಡೆಮನಿ, ಪ್ರೀತಮಸಿಂಗ್​ ಜಾಧವ್​, ರಾಜಶೇಖರ ಧುಪಾದ್​, ಪ್ರೊಮೋದ ಸಿದ್ರಾಮಶೆಟ್ಟಿ, ನರೇಂದ್ರ ಲಕ್ಕಾ, ರಾಜಕುಮಾರ್​ ಏಖೇಳ್ಳಿ, ಮಲ್ಲಿಕಾರ್ಜುನ ಪ್ರಭಾ, ರಾಕೇಶ ಸಗರ್​, ಪ್ರಶಾಂತ ಪೋಲ್​, ಶಾಲೆಯ ಸಿಬ್ಬಂದಿ, ರೈತರು ಹಾಗೂ ವಿದ್ಯಾರ್ಥಿಗಳು ಇದ್ದರು. ಶಾಲೆಯ ಮುಖ್ಯಶಿಕ್ಷಕಿ ಶೋಭಾ ಕಾಡವಾದೆ ನಿರೂಪಣೆ ಮಾಡಿದರು.