Everyone should follow road safety rules. 
ರಾಜ್ಯ

ಪ್ರತಿಯೊಬ್ಬರು ರಸ್ತೆ ಸುರಕ್ಷತಾ ನಿಯಮ ಪಾಲಿಸಿ

ಕೊರಟಗೆರೆ : ವಾಹನ ವಾಲೀಕರು, ಚಾಲಕರು ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನ ಪಾಲಿಸಬೇಕು ಎಂದು ಕೊರಟಗೆರೆ ಪಿಎಸ್‌ಐ ತೀರ್ಥೇಶ್ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಕೇಂದ್ರದಲ್ಲಿ ಪೊಲೀಸ್ ಠಾಣೆಯಿಂದ ಭಾನುವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ವಾತನಾಡಿ, ತಾಲೂಕಿನಲ್ಲಿ ಅನೇಕ ಅಪಘಾತಗಳು ಮನುಷ್ಯನ ತಪ್ಪುಗಳಿಂದ ಆಗುತ್ತವೆ. ಅಪಘಾತದಲ್ಲಿ ಅವಾಯಕ ಜನರು ಜೀವ ಕಳೆದುಕೊಂಡು ಅವಲಂಬಿದ ಕುಟುಂಬ ಬೀದಿಪಾಲಾಗುತ್ತದೆ ವಾಹನ ಚಾಲಕರು ವಾಹನದಲ್ಲಿ ಕುಳಿತುಕೊಂಡಾಗ ತಮ್ಮ ಕುಟುಂಬವನ್ನು ಒಮ್ಮೆ ನೆನಪಿಸಿಕೊಳ್ಳಿ ನಿಮಗೆ ತೊಂದರೆ ಆದಲ್ಲಿ ಅವರ ಪರಿಸ್ಥಿತಿ ಏನು?. ಆದ್ದರಿಂದ ಜಾಗೃತರಾಗಿ ವಾಹನ ಚಾಲಾಯಿಸಿ ಎಂದು ಸಲಹೆ ನೀಡಿದರು.
ವಾಹನ ಚಾಲನೆ ವಾಡುವ ಪ್ರತಿಯೊಬ್ಬರು ರಸ್ತೆ ನಿಯಮಗಳನ್ನ ಹಾಗೂ ಸಂಚಾರ ಚಿಹ್ನೆಗಳನ್ನ ಚೆನ್ನಾಗಿ ಅರಿತುಕೊಳ್ಳಬೇಕು. ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರದೆ ರಸ್ತೆ ನಿಯಮಗಳನ್ನ ಪಾಲನೆ ವಾಡಬೇಕು ಎಂದರು.