ಯಾದಗಿರಿಯಲ್ಲಿ ಸೋಮವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮವನ್ನು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಉದ್ಘಾಟಿಸಿದರು. ಡಿಸಿ ಹರ್ಷಲ್​ ಬೋಯರ್​, ಹೆಚ್ಚುವರಿ ಎಸ್​ಪಿ ಧರಣೇಶ, ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ್​, ಚನ್ನಪ್ಪಗೌಡ ಮೋಸಂಬಿ ಇತರರಿದ್ದರು. 
ರಾಜ್ಯ

ಬಸವಣ್ಣನವರ ತತ್ವಾದರ್ಶ ಎಲ್ಲರೂ ಪಾಲಿಸಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಸಲಹೆ
  • ಯಾದಗಿರಿ ಜಿಲ್ಲಾದ್ಯಂತ ಅದ್ದೂರಿ ಬಸವ ಜಯಂತಿ
ಯಾದಗಿರಿ: ಬಸವಣ್ಣನವರ ತತ್ವಾದರ್ಶ ಮತ್ತು ಬಸವಾದಿ ಶರಣರ ವಿಚಾರಗಳನ್ನು ನಾವು ನೀವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿ ಕಾರ್ಯಕ್ರಮ ಸಾರ್ಥಕವಾಗಲು ಸಾಧ್ಯ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸತಿ ಇಲಾಖೆಯಿಂದ ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಬಹುದೊಡ್ಡ ಕ್ರಾಂತಿಯನ್ನೇ ಮಾಡಿದ್ದರು. ಸಾಮಾಜಿಕ, ಅಸಮಾನತೆ ಹೋಗಲಾಡಿಸಿ ಮನುಷ್ಯರೆಲ್ಲರೂ ಸಮಾನರು ಎಂದು ಸಾರಿದ್ದರು. ಅದಕ್ಕಾಗಿಯೆ ಅವರನ್ನು ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ ಎಂದು ಕರೆಯಲಾಗುತ್ತದೆ ಎಂದರು.
ಬ್ರಾಹ್ಮಣ ಕುಲದಲ್ಲಿ ಹುಟ್ಟಿದರೂ ಇವನಾರವ, ಇವನಾರವ ಎಂದೆನಿಸದೇ ಇವ ನಮ್ಮ ಮನೆಯ ಮಗನೆಂದೆನಿಸಯ್ಯ ಎಂಬಂತೆ ಎಲ್ಲರನ್ನು ಅಪ್ಪಿಕೊಂಡು ಜಾತಿ ವ್ಯವಸ್ಥೆ ಹೋಗಲಾಡಿಸಿ, ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ಬಿಜ್ಜಳನ ಆಸ್ಥಾನದಲ್ಲಿ ಭಂಡಾರ ಮಂತ್ರಿಯಾಗಿದ್ದರೂ ಒಂದು ನಯಾಪೈಸೆಯೂ ಅಪವ್ಯಯವಾಗದಂತೆ ನೋಡಿಕೊಂಡ ಅಪ್ಪಟ್ಟ ಪ್ರಾಮಾಣಿಕ ಬಸವಣ್ಣನವರು ಎಂಬುದು ನಮ್ಮಗೆಲ್ಲ ಹೆಮ್ಮೆಯ ಸಂಗತಿ. ಅವರ ನೇತೃತ್ವದಲ್ಲಿ 300ಕ್ಕೂ ಹೆಚ್ಚು ಜಾತಿ, ಧರ್ಮಗಳ ಶರಣರು ಒಂದಡೆ ಸೇರಿದ್ದು ಅವರ ಸಂಟನಾ ಶಕ್ತಿಗೆ ಸಾಕ್ಷಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಹರ್ಷಲ್​ ಬೋಯರ್​ ಮಾತನಾಡಿ, ಬಸವಣ್ಣನವರ ಅಂದಿನ ಕ್ರಾಂತಿ, ವಚನಗಳ ವಿಶ್ಲೇಷಣೆ ಇಂದಿಗೂ ಪ್ರಸ್ತೂತವಾಗಿವೆ. ಅವರ ಸಮ ಸಮಾಜದ ನಿರ್ಮಾತೃವಾಗಿದ್ದಾರೆ ಎಂದರು.
ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಸುಭಾಷಚಂದ್ರ ಕೌಲಗಿ ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು ವ್ಯಕ್ತಿಯಲ್ಲ, ಶಕ್ತಿ. ಜಗತ್ತೇ ಬೆರಗಾಗುವಂತ ಕೆಲಸಗಳನ್ನು 12ನೇ ಶತಮಾನದಲ್ಲಿ ಮಾಡಿದ್ದಾರೆ ಎಂದು ಹೇಳಿದರು.
ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಹೆಚ್ಚುವರಿ ಎಸ್​ಪಿ ಧರಣೇಶ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ ವೇದಿಕೆಯಲ್ಲಿದ್ದರು. ಶರಣು ವಠಾರ ಪ್ರಾರ್ಥಿಸಿದರು. ಪ್ರಿಯಾಂಕಾ ಪಾಟೀಲ್​ ನಿರೂಪಿಸಿದರು. ಉತ್ತರಾದೇವಿ ಮಠಪತಿ ವಂದಿಸಿದರು. ಆರಂಭದಲ್ಲಿ ಬಸವಣ್ಣನವರ ಭಾವಚಿತ್ರದ ಮೆರವಣಿಗೆ ನಡೆಯಿತು. ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ್​, ಭೀಮನಗೌಡ ಕ್ಯಾತನಾಳ್​, ಅನ್ನಪೂರ್ಣ ಸಿ.ಪಾಟೀಲ್​, ಶಶಿಕಲಾ ಬಿ.ಕ್ಯಾತನಾಳ್​, ಅಖಿಲ ಭಾರತ ವೀರಶೈವ ಮಹಾಸಭಾ ಯುವ ಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ, ತಾಲೂಕು ಅಧ್ಯಕ್ಷ ರಾಜಶೇಖರ ಪಾಟೀಲ್​, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ, ವಿಲಾಸ ಪಾಟೀಲ್​, ವೆಂಕಟರೆಡ್ಡಿ ಅಬ್ಬೆತುಮಕೂರು ಇತರರಿದ್ದರು.