ಹೂಲಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಯನ್ನು ವಿಶ್ವಾಸ ವೈದ್ಯ ಉದ್ಘಾಟಿಸಿದರು. ಉದ್ದಪ್ಪ ಗುಡಸಲಮನಿ, ವಿರೂಪಾ ತೋರಗಲ್ಲ, ಮುರಳೀಧರ ಹುರಳಿ, ಸುನೀಲ ಪಾಟೀಲ ಇತರರಿದ್ದರು.
ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸೇನಾನಿ. ದೇಶ ಪ್ರೇಮ, ಶೌರ್ಯ, ತ್ಯಾಗ ಹಾಗೂ ಸ್ವಾಭಿಮಾನದ ಪ್ರತಿಕವಾಗಿರುವ ಜೀವನ ಇಂದಿನ ಯುವಜನತೆಗೆ ಸ್ಪೂರ್ತಿಯಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದಲ್ಲಿ ಸ್ವಾತಂತ್ರೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣನ ಜಯಂತಿ ಅಂಗವಾಗಿ ರಾಯಣ್ಣನ ಗೆಳೆಯರ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ 45ಹಾಗೂ 55 ಎಚ್ಪಿ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ ರಾಯಣ್ಣನವರ ಆದರ್ಶವನ್ನು ಪ್ರತಿಯೊಬ್ಬರು ಪಾಲಿಸಬೇಕೆಂದು ತಿಳಿಸಿದರು.
ಉದ್ದಪ್ಪ ಗುಡಸಲಮನಿ, ಗ್ರಾಪಂ ಮಾಜಿ ಅಧ್ಯ ವಿರೂಪಾ ತೋರಗಲ್ಲ, ಮುರಳೀಧರ ಹುರಳಿ, ಸುನೀಲ ಪಾಟೀಲ, ಶೇಕಪ್ಪ ಪತ್ರಾವಳಿ, ಹನುಮಂತ ಗೊರವನಕೋಳ್ಳ, ಪ್ರಕಾಶ ಲಮಾಣಿ, ಸಿದ್ದನ್ನ ಕಾರ್ಲಕಟ್ಟಿ, ಅಶೋಕ ಕುಲಕರ್ಣಿ, ಸೇಕಪ್ಪ ಪತ್ರಾವಳಿ ಇತರರಿದ್ದರು.