ಚಿತ್ತಾಪುರದ ರಾವೂರ ರಸ್ತೆಯಲ್ಲಿ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿನಿಲಯ ನಿರ್ಮಾಣ ಕಾಮಗಾರಿಗೆ ಶ್ರೀ ಸೋಮಶೇಖರ ಶಿವಾಚಾರ್ಯರು ಚಾಲನೆ ನೀಡಿದರು. ನಾಗರೆಡ್ಡಿ ಪಾಟೀಲ್​ ಕರದಾಳ, ನಾಗರಾಜ ಭಂಕಲಗಿ, ಅಣ್ಣಾರಾವ ಪಾಟೀಲ್​, ಚಂದ್ರಶೇಖರ ಸಾತನೂರ, ಅಶೋಕ ನಿಪ್ಪಾಣಿ, ಎಸ್​.ಎನ್​.ಪಾಟೀಲ್​ ಇದ್ದರು. 
ರಾಜ್ಯ

ಬೃಹತ್​ ಕಾರ್ಯಕ್ಕೆ ಎಲ್ಲರೂ ಸಹಕಾರ ನೀಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ನಾಗರೆಡ್ಡಿ ಪಾಟೀಲ್​ ಮನವಿ
  • ಚಿತ್ತಾಪುರದಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್​ ನಿರ್ಮಾಣಕ್ಕೆ ಚಾಲನೆ
ಚಿತ್ತಾಪುರ: ಬಸವ ಭವನ ಹಾಗೂ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿನಿಲಯ ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗಿದ್ದು, ವರ್ಷದಲ್ಲಿ ಉದ್ಘಾಟನೆ ಮಾಡಲಾಗುವುದು. ಹೀಗಾಗಿ ಎಲ್ಲರೂ ಸಹಕರಿಸಬೇಕು ಎಂದು ಶ್ರೀ ಬಸವೇಶ್ವರ ಚಾರಿಟೇಬಲ್​ ಟ್ರಸ್ಟ್​ ಅಧ್ಯಕ್ಷ ನಾಗರೆಡ್ಡಿ ಪಾಟೀಲ್​ ಕರದಾಳ ಮನವಿ ಮಾಡಿದರು.
ರಾವೂರ ರಸ್ತೆಯ ಬಸವ ಭವನ ನಿಯೋಜಿತ ಸ್ಥಳದಲ್ಲಿ ಶ್ರೀ ಬಸವೇಶ್ವರ ಚಾರಿಟೇಬಲ್​ ಟ್ರಸ್ಟ್​ನಿಂದ ಸೋಮವಾರ ಸಂಜೆ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿನಿಲಯ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡಿ, ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸುವ ಕಾರ್ಯಕ್ರಮ ಶ್ರೀ ನಡೆಸಲಾಗುವುದು ಎಂದರು.
ಕಂಬಳೇಶ್ವರ ಮಠದ ಶ್ರೀ ಸೋಮಶೇಖರ ಶಿವಾಚಾರ್ಯರು ಅಡಿಗಲ್ಲು ನೆರವೇರಿಸಿ ಮಾತನಾಡಿ, ಬಸವ ಭವನ ಹಾಗೂ ವಸತಿನಿಲಯ ಕಟ್ಟಡಗಳು ಜಿಲ್ಲೆಯಲ್ಲಿಯೇ ಕಂಗೊಳಿಸಲಿವೆ. ಇದೊಂದು ಸಮಾಜಮುಖಿ ಕಾರ್ಯ ಎಲ್ಲರೂ ಸಹಕರಿಸಬೇಕು ಎಂದು ಕರೆ ನೀಡಿದರು.
ಪ್ರಮುಖರಾದ ಡಾ.ಪ್ರಭುರಾಜ ಕಾಂತಾ, ಅಣ್ಣಾರಾವ ಪಾಟೀಲ್​ ಮುಡಬೂಳ, ಚಂದ್ರಶೇಖರ ಸಾತನೂರ, ಅಶೋಕ ನಿಪ್ಪಾಣಿ, ಮಲ್ಲಿಕಾರ್ಜುನರೆಡ್ಡಿ ಇಜಾರ, ಚಂದ್ರಶೇಖರ ಪಾಟೀಲ್​ ಬೆಳಗುಂಪಾ, ಎಸ್​.ಎನ್​.ಪಾಟೀಲ್​, ಶಾಂತಕುಮಾರ ಹತ್ತಿ, ಮಲ್ಲಿಕಾರ್ಜುನ ಅವಂಟಿ, ಪ್ರಭು ಬೊಮ್ಮನಳ್ಳಿ, ಶ್ರೀನಿವಾಸರೆಡ್ಡಿ ಪಾಲಪ್​, ರಮೇಶ ಬೊಮ್ಮನಳ್ಳಿ, ಸುವನರೆಡ್ಡಿ ಪೋತರೆಡ್ಡಿ, ಶಿವರೆಡ್ಡಿ ಪಾಲಪ್​, ಬಸವರಾಜ ಸಂಕನೂರ, ಬಸವರಾಜ ಕಾಳಗಿ, ಬಸವರಾಜ ಹೂಗಾರ, ರಾಚಪ್ಪ ಬೊಮ್ಮನಳ್ಳಿ, ವಿಶ್ವಾರಾಧ್ಯ ಪಾಟೀಲ್​ ಕರದಾಳ, ನೀಲಕಂಠ ಕರದಾಳ, ಶಿವುಕುಮಾರ ದಿವಾನ್​, ಮಲ್ಲಿಕಾರ್ಜುನ ಪಡಶೆಟ್ಟಿ, ಆನಂದ ಪೆಂಟರ್​, ಶಿವುಕುಮಾರ ಶೀಲವಂತ, ಮಂಜುನಾಥ ಶಾಸಿ ಇತರರಿದ್ದರು. ನಾಗರಾಜ ಭಂಕಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬರೀಷ್​ ಸುಲೇಗಾಂವ್​ ನಿರೂಪಣೆ ಮಾಡಿದರು. ಅನಿಲ್​ ವಡ್ಡಡಗಿ ವಂದಿಸಿದರು.