ಔರಾದ್ ತಾಲೂಕಿನ ಸೋರಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪ್ಲಾಸ್ಟಿಕ್ಮುಕ್ತ ಅಭಿಯಾನದಲ್ಲಿ ಮುಖ್ಯ ಶಿಕ್ಷಕ ಗುಂಡಪ್ಪ ಹುಡುಗೆ, ವೀರಕುಮಾರ, ಗಜಾನನ ಮಳ್ಳಾ, ಬಾಲಾಜಿ ಅಮರವಾಡಿ, ಶಿವಾಜಿ, ಪ್ರಕಾಶ ತಾಂದಳೆ, ಮನೋಹರ ಅಂಬಾಟೆ, ಇತರರಿದ್ದರು.
- ಮುಖ್ಯಶಿಕ್ಷಕ ಗುಂಡಪ್ಪ ಹುಡುಗೆ ಮನವಿ >
- ಸೋರಳ್ಳಿ ತಾಂಡಾದಲ್ಲಿ ಪರಿಸರ ದಿನಾಚರಣೆ
ಔರಾದ್: ಜನಾರೋಗ್ಯ ಮತ್ತು ಪರಿಸರಕ್ಕೆ ಮಾರಕವಾಗಿ ಪರಿಣಮಿಸಿರುವ ಏಕ ಬಳಕೆಯ ಪ್ಲಾಸ್ಟಿಕ್ಗೆ ಕಡಿವಾಣ ಹಾಕಲು ಎಲ್ಲರೂ ಕೈಜೋಡಿಸಬೇಕು ಎಂದು ಮುಖ್ಯಶಿಕ್ಷಕ ಗುಂಡಪ್ಪ ಹುಡುಗೆ ಹೇಳಿದರು.
ತಾಲೂಕಿನ ಸೋರಳ್ಳಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆ ಹಾಗೂ ಪ್ಲಾಸ್ಟಿಕ್ಮುಕ್ತ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾನ್ಸರ್ ಸೇರಿ ಹಲವು ಮಾರಕ ರೋಗಗಳು ಬರುತ್ತಿರುವುದಕ್ಕೆ ಪ್ಲಾಸ್ಟಿಕ್ ಕಾರಣವಾಗಿದೆ. ಜನ, ಜಾನುವಾರು, ನೀರು, ಗಾಳಿ, ಪರಿಸರಕ್ಕೆ ಪ್ಲಾಸ್ಟಿಕ್ ಕುತ್ತಾಗಿದೆ. ಗ್ರಾಮವನ್ನು ಸ್ವಚ್ಛ ಹಾಗೂ ಪ್ಯಾಸ್ಟಿಕ್ಮುಕ್ತ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಕ ವೀರಕುಮಾತ ಮಾತನಾಡಿ, ಮಕ್ಕಳಲ್ಲಿ ಪ್ರಾಥಮಿಕ ಹಂತದಿಂದಲೇ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಮಾಹಿತಿ ನೀಡಬೇಕಿದೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಗಜಾನನ ಮಳ್ಳಾ, ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ, ಅಜೀಂ ಪ್ರೇಮಜಿ ಫೌಂಡೇಷನ್ ಸಮನ್ವಯಾಧಿಕಾರಿ ಶಿವಾಜಿ, ಪ್ರಕಾಶ ತಾಂದಳೆ ಮಾತನಾಡಿದರು. ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ ಅಂಬಾಟೆ, ಸಿಆರ್ಪಿ ದುಶ್ಯಂತ, ನೌಕರ ಸಂಘದ ನಿರ್ದೇಶಕ ಬಾಲಾಜಿ ಬಿರಾದಾರ್, ರವೀಂದ್ರ ಡಿಗ್ಗಿ, ಎಸ್ಡಿಎಂಸಿ ಅಧ್ಯಕ್ಷ ಸಂತೋಷ, ಮುಖ್ಯ ಶಿಕ್ಷಕ ಉಮಾಕಾಂತ, ಭೀಮಾಶಂಕರ ಇತರರಿದ್ದರು. ಸೌಮ್ಯ ಸಚಿನ ಕೋಳಾರ(ಕೆ) ಅವರಿಂದ 200 ಬಟ್ಟೆ ಚೀಲ ವಿತರಿಸಲಾಯಿತು.