Everyone participate in the census.
ತುರುವೇಕೆರೆ: ದೇಶದಾದ್ಯಂತ ಆರಂಭವಾಗಿರುವ ಸ್ವಯಂ ಗಣತಿಯಲ್ಲಿ ಎಲ್ಲರೂ ಕುಟುಂಬ ಸಮೇತರಾಗಿ ಪಾಲ್ಗೊಳ್ಳಿ ಎಂದು ತಹಸೀಲ್ದಾರ್ ಎನ್.ಕುಂಞ ಅಹಮದ್ತಿಳಿಸಿದರು. ಪಟ್ಟಣದ ಜಿಜೆಸಿ ಕುವೆಂಪು ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಬುಧವಾರ ಆಯೋಜಿಸಿದ್ದ ಭಾರತ ಜನಗಣತಿ 2026&27ರ ಮನೆಪಟ್ಟಿ ಮತ್ತು ಮನೆಗಣತಿ ಕಾರ್ಯಾಚರಣೆ ಸಂಬಂಧ ಮೇಲ್ವಿಚಾರಕರು ಮತ್ತು ಗಣತಿದಾರರಿಗೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
2011ರಲ್ಲಿ ಜನಗಣತಿ ನಡೆದಿತ್ತು ಪುನ@ 2021ರಲ್ಲಿ ನಡೆಯಬೇಕಿದ್ದ ಜನಗಣತಿ ಕರೊನಾ ಕಾರಣದಿಂದ ನಡೆದಿರಲಿಲ್ಲ. ದೇಶದಲ್ಲಿರುವ ಜನಸಂಖ್ಯೆಯ ಪ್ರಮಾಣ, ಅವರ ಆರ್ಥಿಕ, ಶೈಕ್ಷಣಿಕ, ರಾಜಕೀಯ ಹಾಗೂ ಅವರ ಜೀವನ ಮಟ್ಟವನ್ನು ಒಂದು ದತ್ತಾಂಶದ ರೀತಿಯಲ್ಲಿ ಸಮಗ್ರವಾಗಿ ಸಂಗ್ರಹಿಸುವ ಮತ್ತು ಅದಕ್ಕೆ ಅನುಗುಣವಾಗಿ ದೇಶದ ಆರ್ಥಿಕ ಯೋಜನೆಗಳ ರೂಪಿಸಲು ಜನಗಣತಿ ಮಹತ್ತರವಾದ ಕಾರ್ಯವಾಗಿದೆ ಎಂದರು.
ತಾಲೂಕಿನಲ್ಲಿ ಒಟ್ಟು 18,1134 ಜನ ಸಂಖ್ಯೆಯ ಇದ್ದು, 260 ಹಳ್ಳಿಗಳಿವೆ. 370 ಜನ ವಸತಿ ಪ್ರದೇಶಗಳಿವೆ ಎಂದು ಗುರುತಿಸಲಾಗಿದ್ದು, ಇವುಗಳಿಗೆ ಅನುಗುಣವಾಗಿ ಗಣತಿ ಮಾಡಲು 50 ಮಂದಿ ಮೇಲ್ವಿಚಾರಕರು ಮತ್ತು 240 ಗಣತಿದಾರರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಜನಗಣತಿಗೆ ನಿಯೋಜಿತ ಶಿಕ್ಷಕರು, ರಜೆಯಲ್ಲಿ ಗಣತಿ ಕಾರ್ಯ ಮಾಡುವುದರಿಂದ ಸಂಭಾವನೆ ಹಣದ ಜತೆಗೆ ರ್ನಿದಿಷ್ಟ ಗಳಿಕೆ ರಜೆಯನ್ನೂ ಸಹ ಕೊಡಬೇಕೆಂದು ಮನವಿ ಮಾಡಿದರು. ತಹಸೀಲ್ದಾರ್ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅನುಕೂಲ ಮಾಡಿಕೊಡುವ ಭರವಸೆ ನೀಡಿದರು. ಅಕ್ಷರದಾಸೋಹದ ಸಹಾಯಕ ನಿರ್ದೇಶಕಿ ಸವಿತಾ, ಸಿಆರ್.ಪಿ.ಲೋಕೇಶ್, ಮಾಸ್ಟರ್ ಟ್ರೈನರ್ ನರೇಂದ್ರ ಮತ್ತಿತರರು ಇದ್ದರು.