ಬೈಲಹೊಂಗಲ ನಗರಸಭೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ಮಾತನಾಡಿದರು. ಆರ್​.ಎಸ್​.ಹಿಟ್ಟಣಗಿ, ಎಂ.ಎಂ.ಧಾರವಾಡಕರ ಇತರರಿದ್ದರು. 
ರಾಜ್ಯ

ನಗರ ಸೌಂದಯೀರ್ಕರಣಕ್ಕೆ ಎಲ್ಲರೂ ಕೈಜೋಡಿಸಿ

ಬೈಲಹೊಂಗಲ: ಜನರ ಆರೋಗ್ಯ ಹಾಗೂ ನಗರದ ಸೌಂದರ್ಯಕ್ಕಾಗಿ ಮೂಲದಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯವಾಗಿದೆ ಎಂದು ಪೌರಾಯುಕ್ತೆ ಭಾಗ್ಯಶ್ರೀ ಹುಗ್ಗಿ ತಿಳಿಸಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡೇ&ನಲ್ಮ್​ ಯೋಜನೆ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ನತ್ಯಾಜ್ಯ ನಿರ್ವಹಣಾ ನಿಯಮ 2026ರ ಅನ್ವಯ ತ್ಯಾಜ್ಯವನ್ನು ವಿಂಗಡಿಸಿಯೇ ನಗರಸಭೆ ವಾಹನಗಳಿಗೆ ನೀಡಬೇಕು. ಪ್ರತಿಯೊಬ್ಬ ಮಹಿಳೆಯೂ ಸರ್ಕಾರದ ಸಾಮಾಜಿಕ ಭದ್ರತಾ ವಿಮೆ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಕೆವಿಜಿ ಬ್ಯಾಂಕ್​ ಶಾಖೆ ವ್ಯವಸ್ಥಾಪಕ ರವಿ ಕತ್ತಿ ಮಾತನಾಡಿ, ಪ್ರಧಾನಮಂತ್ರಿ ಜೀವನ್​ ಜ್ಯೋತಿ ವಿಮೆ ಯೋಜನೆ, ಪ್ರಧಾನಮಂತ್ರಿ ಸುರಾ ವಿಮೆ ಯೋಜನೆ ಸೌಲಭ್ಯ, ನೋಂದಣಿ ಪ್ರಕ್ರಿಯೆ ಹಾಗೂ ಬ್ಯಾಂಕ್​ ಸಾಲ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಹಿರಿಯ ಆರೋಗ್ಯ ನಿರೀಕ ಎಂ.ಎಂ.ಧಾರವಾಡಕರ ಮಾತನಾಡಿ. ಹಸಿ ಕಸ, ಒಣ ಕಸ ಹಾಗೂ ಸ್ಯಾನಿಟರಿ ಕಸಗಳನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿಸಿ ಕಸದ ವಾಹನಗಳಿಗೆ ನೀಡುವುದನ್ನು ಪ್ರಾತ್ಯಕೆ ಮೂಲಕ ತಿಳಿಸಿದರು.
ಮಾಧುರಿ ರಾಮಗುಂಡಿ, ಶಿವಲೀಲಾ ಕರಿಬಾಳೆ, ಸವಿತಾ ಹರಕುಣಿ, ಕಾವ್ಯಾ ಪಾಟೀಲ, ಜ್ಯೋತಿ ಹಿರೇಮಠ, ಸಿಆರ್​ಪಿಗಳಾದ ರೂಪಾ ಪಾಟೀಲ, ಸುವರ್ಣಾ ಬೆಳವಡಿ ಹಾಗೂ ಡೇ&ನಲ್ಮ್​ ಯೋಜನೆಯ ಮಹಿಳಾ ಸ್ವ&ಸಹಾಯ ಸಂಗಳ ಸದಸ್ಯರು ಇದ್ದರು. ಆರ್​.ಎಸ್​.ಹಿಟ್ಟಣಗಿ ನಿರೂಪಿಸಿದರು.