ಶಹಾಪುರದ ಆರ್ದಶ ವಿದ್ಯಾಲಯದಲ್ಲಿ ಮಂಗಳವಾರ ಪ್ಲಾಸ್ಟಿಕ್ ನಿಷೇಧ ಕುರಿತು ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಽÃಶೆ ಸುಪ್ರಿಯಾ ನವಲಿ ಉದ್ಘಾಟಿಸಿದರು. ತಹಸೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ, ಸಂತೋಷ ಸತ್ಯಂಪೇಟ್ ಇತರರಿದ್ದರು. 
ರಾಜ್ಯ

ಪ್ಲಾಸ್ಟಿಕ್ ನಿಷೇಧಕ್ಕೆ ಪ್ರತಿಯೊಬ್ಬರೂ ಕೈಜೊಡಿಸಿ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಽÃಶೆ ಸುಪ್ರಿಯಾ ನವಲಿ ಸಲಹೆ
  • ಶಹಾಪುರದಲ್ಲಿ ಕಾನೂನು ಅರಿವು-ನೆರವು
ಶಹಾಪುರ : ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಽಸುವ ಛಲ ನಮ್ಮ, ನಮ್ಮ ಮನೆಗಳಿಂದಲೇ ಆರಂಭಿಸಬೇಕು. ಅಲ್ಲದೆ ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕಾನೂನು ಸೇವಾ ಸಮಿತಿ ಕಾರ್ಯದರ್ಶಿಗಳೂ ಆದ ನ್ಯಾಯಾಽÃಶೆ ಸುಪ್ರಿಯಾ ನವಲಿ ತಿಳಿಸಿದರು.
ನಗರದ ಆದರ್ಶ ವಿದ್ಯಾಲಯದಲ್ಲಿ ಮಂಗಳವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪ್ಲಾಸ್ಟಿಕ್ ನಿಷೇಧ ಹಾಗೂ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಹಮ್ಮಿಕೊಂಡದ್ದ ಕಾನೂನು ಅರಿವು -ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದ ಅವರು, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ನಿಷೇಧಕ್ಕೆ ಎಲ್ಲರ ಸಹಕಾರ ಬಹಳ ಅಗತ್ಯ ಎಂದರು.
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಪರಿಸರ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವುದು ಅಗತ್ಯವಾಗಿದೆ. ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಮಾರಾಟ ಮಾಡುವುದು ನಿಲ್ಲಿಸಬೇಕು. ವಿವಿಧ ಇಲಾಖೆ ಅಽಕಾರಿಗಳು ಭೇಟಿ ನೀಡಿ ಪರಿಶೀಲಿಸಿ, ಕಾನೂನು ಸೇವಾ ಸಮಿತಿಯ ಮುಖ್ಯ ಉದ್ದೇಶ ಆರೋಗ್ಯದ ಕಾಳಜಿಯ ಜತೆಗೆ ಅರಿವು ಮೂಡಿಸುವುದು ಆಗಿದೆ ಎಂದರು.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಕುರಿತು ತಹಸೀಲ್ದಾರ್ ಸಿದ್ದಾರೂಢ ಬನ್ನಿಕೊಪ್ಪ ಮಾತನಾಡಿ, ಕಳೆದ ೨೦ ದಿನದಿಂದ ಎಸ್‌ಐಆರ್ ಕಾರ್ಯ ನಡೆದಿದೆ. ಇದರ ಮೂಲ ಉದ್ದೇಶ ೧೮ ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಪ್ರಜೆಯು ಮತದಾನದ ಹಕ್ಕು ಪಡೆಯುವುದಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಹಲವು ಬಾರಿ ಆಗಿದೆ. ಈಗ ಮತದಾರರ ಪಟ್ಟಿಯಲ್ಲಿನ ಲೋಪ ದೋಷ ಸರಿಪಡಿಸಿವುದು. ಅರ್ಹ ಮತದಾರರನ್ನು ಪಟ್ಟಿಯಲ್ಲಿ ಉಳಿಸುವುದಾಗಿದೆ. ತಾಲೂಕಿನಲ್ಲಿ ಪ್ರತಿಯೊಬ್ಬರಿಂದ ಉತ್ತಮ ಸಹಕಾರ ಸಿಗುತ್ತಿದೆ ಎಂದರು.
ಕಾನೂನು ಅರಿವು ಕುರಿತು ವಕೀಲೆ ಬಸಮ್ಮ ರಾಂಪುರೆ ಉಪನ್ಯಾಸ ನೀಡಿದರು. ಬಿಇಒ ಶಿವಕುಮಾರ ಪಾರಶೆಟ್ಟಿ, ಎಪಿಪಿ ಮರೆಯಪ್ಪ ಹೊಸ್ಮನಿ, ವಕೀಲರ ಸಂಘದ ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ವಿದ್ಯಾಲಯದ ಪ್ರಾಚರ‍್ಯ ಹನುಮಂತರಾಯ ಸೋಮಾಪುರ ಇತರರಿದ್ದರು.

ಶಹಾಪುರದಲ್ಲಿ ವಿಶೇಷ ಉಪನ್ಯಾಸ ೨೬ರಂದು

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಗರ ವಲಯ ಕನ್ನಡ ಸಾಹಿತ್ಯ ಪರಿಷತ್‌ನಿಂದ ನಗರದ ಕಸಾಪ ಸಭಾಂಗಣದಲ್ಲಿ ಜು.೨೬ರಂದು ಬೆಳಗ್ಗೆ ೧೦.೩೦ಕ್ಕೆ ಸಾಹಿತ್ಯ ಚೇತನ ರಸ್ತಾಪುರದ ಭೀಮಕವಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಡಾ.ರವೀಂದ್ರನಾಥ ಹೊಸಮನಿ ತಿಳಿಸಿದ್ದಾರೆ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧಪ್ಪ ಹೊಟ್ಟಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರ ದೇವದುರ್ಗದ ನಿರ್ದೇಶಕರು ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ.ಶಾಂತಪ್ಪ ಎನ್.ಡಂಬಳ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕ್ಷೇತ್ರ ಶಿಕ್ಷಣಾಽಕಾರಿ ಶಿವುಕುಮಾರ ಪಾಶೆಟ್ಟಿ, ಭೀಮಕವಿಯ ವಂಶಸ್ಥರಾದ ಭೀಮಕವಿ ಟಣಕೆದಾರ, ನಿಕಟಪೂರ್ವ ಕಸಾಪ ಅಧ್ಯಕ್ಷ ಸಿದ್ಧಲಿಂಗಣ್ಣ ಆನೆಗುಂದಿ ಹಾಗೂ ವಿವಿಧ ವಲಯಗಳ ಕಸಾಪ ಅಧ್ಯಕ್ಷರುಗಳು ಭಾಗವಹಿಸಲಿದ್ದಾರೆ.